ಬೇವಿನ ಮರಗಳಿಗೆ ಡಿ. ಮಷ್ಕಟ್‌ಬಗ್ ಕೀಟ ಕಾಟ
Team Udayavani, Nov 3, 2021, 2:39 PM IST
ಸುರಪುರ: ಕಲ್ಯಾಣ ಕರ್ನಾಟಕ ಭಾಗದ ಬೇವಿನಮರಗಳಿಗೆ ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷಿಯಾದಿಂದ ಬಂದಿರಬಹುದೆಂದು ಅಂದಾಜಿಸಲಾದ ತಿಗಣಿ ಜಾತಿಗೆ ಸೇರಿದ ಕೀಟ (ಡಿ. ಮಷ್ಕಟ್‌ಬಗ್)ಕಾಟ ಶುರುವಾಗಿದೆ.
ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಳೆದ 5-6 ತಿಂಗಳಿಂದ ವಿಚಿತ್ರ ಕೀಟಭಾದೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಹುತೇಕ ಬೇವಿನ ಮರಗಳು ಒಣಗಿ ಹೋಗುತ್ತಿವೆ.
ಔಷಧಿಯುಕ್ತ ಗುಣ ಹೊಂದಿರುವ ಅನೇಕ ಸಸ್ಯಗಳಲ್ಲಿ ಬೇವಿನಮರ ಪ್ರಮುಖವಾಗಿದೆ. ಇದರ ಎಲೆ ಮತ್ತು ಬೀಜಗಳು ಉಪಯುಕ್ತ ಗುಣ ಹೊಂದಿವೆ. ಬೇವಿನ ಮರದ ಎಲೆಗಳ ರಸ ರಾಸಾಯನಿಕದೊಂದಿಗೆ ಬೆರೆಸಿ ಹತ್ತಿ, ಶೇಂಗಾ ಸೇರಿದಂತೆ ಇತರೆ ಬೆಳೆಗಳ ಕೀಟ ನಾಶಕ್ಕೆ ಬಳಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ಬೇವಿನ ಮರದ ಬೀಜದಿಂದ ಎಣ್ಣೆ, ಸಾಬೂನು ತಯಾರಿಕೆ,
ಬೀಜ ಸಂಸ್ಕರಣೆ, ಧಾನ್ಯ ಸಂಗ್ರಹಣೆ ಸೇರಿದಂತೆ ಇತರೆ ಕೆಲಸಕ್ಕೆ ಬಳಸುತ್ತಾರೆ. ಜ್ವರದ ಭಾದೆ, ಕಾಮಾಲೆ, ಹಲ್ಲುನೋವು, ಮಧುಮೇಹಿ ನಿಯಂತ್ರಣಕ್ಕೆ ಔಷಧ ರೂಪದಲ್ಲಿ ಬಳಸಲಾಗುತ್ತಿದೆ.
ತಿಗಣಿ ಜಾತಿಗೆ ಸೇರಿದ ಈ ಕೀಟವನ್ನು ಡಿ. ಮಷ್ಕಟ್‌ಬಗ್ ಎಂದು ಕರೆಯಲಾಗುತ್ತಿದೆ. ಗೋಡಂಬಿ, ನುಗ್ಗೆ ಮತ್ತು ಮಹಾದಾನಿ ಸಸ್ಯ ಬೆಳೆಯವ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಇದೊಂದು ವಿದೇಶ ಕೀಟವಾಗಿದ್ದು, ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷಿಯಾದಿಂದ ಬಂದಿರಬಹುದೆಂದು ಕೃಷಿ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಬೇವಿನಮರದ ಚಿಗಿಯುವ ಗೊನೆ ಸಿಹಿಯಾಗಿದ್ದು, ಕೀಟಕ್ಕೆ ಅಮೃತ ಇದ್ದಂತೆ. ಹೀಗಾಗಿ ಕೀಟ ಗಿಡದ ಸುಳಿಯಲ್ಲಿ ವಾಸಿಸುತ್ತದೆ. ಕೀಟ ಜೊಲ್ಲು ಸುರಿಸಿ ಗೊನೆ ಮೂಲಕ ಟೊಂಗೆ ಮೃದುವಾಗಿಸುತ್ತದೆ.ಆ ಬಳಿಕ ಸಿಲಿಂಧ್ರದ ಮೂಲಕ ರಸ ಹೀರುತ್ತದೆ. ಇದರಿಂದ ಮರದ ಗೊನೆ ಮೊದಲಿಗೆ ಕಂದು ಬಣ್ಣಕ್ಕೆ ತಿರುಗಿ ನಂತರ ಸುಟ್ಟ ರೀತಿಯಂತಾಗಿಕ್ರಮೇಣ ಒಣಗುತ್ತ ಹೋಗುತ್ತದೆ. ಬಲಿಷ್ಠ ಮರಗಳನ್ನು ನಾಶ ಮಾಡುವಷ್ಟು ಪ್ರಬಲಶಕ್ತಿ ಈ ಕೀಟ ಹೊಂದಿದೆ ಎಂದು ಶಹಾಪುರತಾಲೂಕು ಭೀಮರಾಯನಗುಡಿ ಕೃಷಿ ವಿದ್ಯಾಲಯದ ಕೀಟಶಾಸ್ತ್ರದ ಪ್ರಾಧ್ಯಾಪಕ ಡಾ| ಎಂ. ಶಂಕರಮೂರ್ತಿ ತಿಳಿಸಿದ್ದಾರೆ.ಬೇವಿನ ಮರಗಳಿಗೆ ಆವರಿಸಿರುವ ಕೀಟಭಾದೆ ನಿಯಂತ್ರಿಸದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಇನ್ನಿತರೆ ಮರಗಳಿಗೆ ಆವರಿಸಿ ವೃಕ್ಷ ಸಂಪತ್ತು ನಾಶವಾಗುವ ಸಾಧ್ಯತೆ ಇದೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಪ್ರಕೃತಿ ವಿಕೋಪಗಳು ನಡೆದು ಜೀವ ಸಂಕುಲಕ್ಕೆ ಸಂಕಷ್ಟ ಎದುರಾಗಬಹುದು. ಆದ್ದರಿಂದ ಕೃಷಿಮತ್ತು ಅರಣ್ಯ ವಿಜ್ಞಾನಿಗಳು ಇದಕ್ಕೆ ಶೀಘ್ರವೇ ಪರಿಹಾರ ಕಂಡು ಹಿಡಿಯಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಬೇವಿನಮರಗಳು ಏಕಾಏಕಿ ಒಣಗುತ್ತಿರುವುದರಿಂದ ಆತಂಕ ಎದುರಾಗಿದೆ. ಈ ರೋಗ ಇತರೆ ಮರಗಿಡಗಳಿಗೆ ಆವರಿಸಿ ವೃಕ್ಷ ಸಂಪತ್ತು ಹಾಳಾಗಿ ಮನುಕುಲಕ್ಕೆ ವಿಪತ್ತು ತಂದೊಡ್ಡುವುದೇ ಎಂಬ ಅನುಮಾನ ಕಾಡುತ್ತಿದೆ. ಆದ್ದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿ ಮತ್ತು ಅರಣ್ಯ ವಿಜ್ಞಾನಿಗಳು ಸೇರಿ ಶೀಘ್ರವೇ ಪರಿಹಾರ ಕಂಡು ಹಿಡಿಯಬೇಕು ಲಕ್ಷ್ಮಣ ನಾಯಕ, ಪರಿಸರ ಪ್ರೇಮಿ ಸುರಪುರ.
ದಕ್ಷಿಣ ಭಾರತದ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಈ ರೋಗ ಗುರುತಿಸಲಾಗಿದೆ. ಇತ್ತೀಚೆಗೆ ಕೊಪ್ಪಳದಲ್ಲಿ ಗೋಡಂಬಿ ಮತ್ತು ನುಗ್ಗೆ ಗಿಡ ಬೆಳೆಯಲಾಗುತ್ತಿದೆ. ಈ ಕೀಟ ಅಲ್ಲಿಂದ ಇತ್ತ ಕಡೆ ಪಸರಿಸಿರುವ ಸಾಧ್ಯತೆ ಇದೆ. ತಂಪು ವಾತಾವರಣ ಕೀಟ ವಾಸಕ್ಕೆ ತುಂಬಾ ಅನುಕೂಲಕರ. ಕಳೆದ
ಎರಡು ವರ್ಷಗಳಿಂದ ಈ ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದು, ಕೀಟ ನೆಲೆಯೂರಲು ಕಾರಣವಾಗಿದೆ. ಈ ಕುರಿತು ಈಗಾಗಲೇ ಸಂಶೋಧನೆ ನಡೆದಿದೆ. ಎಲ್ಲ ರೀತಿ ಪ್ರಯೋಗ ಮಾಡಲಾಗಿದೆ. ಸಂಶೋಧನೆ ನಂತರವೇ ನಿಖರ ಪರಿಹಾರ ತಿಳಿಸಲಾಗುವುದು.-ಡಾ|ಎಂ. ಶಂಕರಮೂರ್ತಿ, ಪ್ರಾಧ್ಯಾಪಕರು, ಭೀಮರಾಯನಗುಡಿ ಕೃಷಿ ಕಾಲೇಜ್ ಕೀಟಶಾಸ್ತ್ರ ವಿಭಾಗ.
ಕಲ್ಯಾಣ ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೆಲ ಪ್ರದೇಶಗಳಲ್ಲಿ ಕಳೆದ 2 ವರ್ಷಗಳಿಂದ ಬೇವಿನ ಮರಗಳು ಒಣಗುತ್ತಿವೆ. ಈ ಕುರಿತು ಸಂಶೋಧನೆ ನಡೆದಿದೆ.ಡಿ. ಮಸ್ಕಟ್‌ಬಗ್ ಕೀಟ ಮತ್ತು ಯುರೇನಿಯಂ ಮತ್ತು ಭೂ ಸಾಂಧ್ರತೆಯ ಲಾವಾರಸ ಕೊರತೆ ಇರಬಹುದು. ಈಕುರಿತು ನನ್ನ ನೇತೃತ್ವದಲ್ಲಿ 10 ಜನ ದೇಶದ ವಿವಿಧ ವಿವಿ ಕೃಷಿ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿದೆ. ಶೀಘ್ರದಲ್ಲಿಯೇ ಕೀಟ ನಿಯಂತ್ರಣಕ್ಕೆ ಪರಿಹಾರ ಸಿಗಲಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ.-ಡಾ| ಜಯಶಂಕರ ಪ್ರಸಾದ, ಹೈದರಾಬಾದ ಕೃಷಿ ವಿವಿ ಕೀಟಶಾಸ್ತ್ರ ಹಾಗೂ ಅರಣ್ಯ ಕೃಷಿ ವಿಜ್ಞಾನಿ.
-ಸಿದ್ದಯ್ಯ ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.