ಡಕೋಟಾ ಬಸ್‌ ಸಂಚಾರಕ್ಕೆ ಸುಸ್ತು


Team Udayavani, Nov 23, 2018, 10:30 AM IST

yad-1.jpg

ಯಾದಗಿರಿ: ಈಶಾನ್ಯ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗದಲ್ಲಿ ಗುಜರಿಗೆ ಸೇರಬೇಕಿದ್ದ ಬಸ್‌ಗಳು ಸಂಚರಿಸುತ್ತಿದ್ದು, ಇದರಿಂದಾಗಿ ಜನರ ಪ್ರಾಣಕ್ಕೆ ಬೆಲೆಯೇ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವಗೊಂಡಿದೆ. ಜಿಲ್ಲೆಯ ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್‌ ಸೇರಿದಂತೆ ವಿವಿಧ ಘಟಕಗಳಲ್ಲಿ 400 ಬಸ್‌ಗಳಿದ್ದು, ಇವುಗಳಲ್ಲಿ ಸುಮಾರು 95 ಬಸ್‌ಗಳು ತನ್ನ ಚಾಲನೆ ಸಾಮರ್ಥ್ಯವನ್ನು ಮುಗಿಸಿದರೂ ಇನ್ನೂ ರಸ್ತೆಯಲ್ಲಿ ಓಡಾಡುತ್ತಿವೆ. 

ನಿಯಮದ ಪ್ರಕಾರ 9 ಲಕ್ಷ ಕಿ.ಮೀಟರ್‌ ಸಂಚರಿಸಿರುವ ವಾಹನವನ್ನು ಗುಜರಿಗೆ ಹಾಕಬೇಕು. ಆದರೆ, ಇಲ್ಲಿ ಅದ್ಯಾವುದು ಲೆಕ್ಕಕ್ಕಿಲ್ಲ. ಇಲ್ಲಿನ ಅಧಿಕಾರಿಗಳು ಅವಧಿ ಮುಗಿದ ಬಸ್‌ ಗಳನ್ನು ಚಲಾಯಿಸಿ ಮೇಲಧಿಕಾರಿಗಳ ಮೆಚ್ಚುಗೆಗಳಿಸಲು ಹೊಸ ಬಸ್‌ಗಳ ಬೇಡಿಕೆಯನ್ನು ಸಲ್ಲಿಸದೇ ಇರುವ ಬಸ್‌ಗಳನ್ನೇ ರಿಪೇರಿ ಮಾಡುವ ಮೂಲಕ ಜನರ ಪ್ರಾಣದ ಹಂಗನ್ನೇ ಮರೆತ್ತಿದ್ದಾರೆ.

ಗುರುಮಠಕಲ್‌ ಯಾದಗಿರಿ ಮಾರ್ಗವಾಗಿ ಸಂಚರಿಸುವ 2-3 ವಾಹನಗಳು ತನ್ನ ಚಾಲನೆ ಸಾಮರ್ಥ್ಯವನ್ನು ಮುಗಿಸಿದ್ದರೂ
ಅವುಗಳನ್ನು ರಿಪೇರಿ ಮಾಡಿಸಿ ಪುನಃ ಸಂಚಾರಕ್ಕೆ ರಸ್ತೆಗಿಳಿಸಲಾಗಿದೆ. ರಸ್ತೆಗಿಳಿಯುವ ಶಕ್ತಿ ಕಳೆದುಕೊಂಡ ವಾಹನಗಳ ಸರ್ವೀಸಿಂಗ್‌, ಲೈಟಿಂಗ್‌ ಸೇರಿದಂತೆ ಸಣ್ಣ ಪುಟ್ಟ ವಸ್ತುಗಳನ್ನು ಬದಲಾಯಿಸಿ ಹೊಸ ಬಸ್‌ಗಳಂತೆ ಬಣ್ಣ ಬಳಿದು ರಸ್ತೆಗಿಳಿಸಲಾಗಿದೆ. ಆದರೇ ಅವು ರಸ್ತೆಯಲ್ಲಿ ಸಂಚರಿಸುವುದಕ್ಕೆ ಎಷ್ಟು ಯೋಗ್ಯವೋ ಗೊತ್ತಿಲ್ಲ. ಚಾಲಕರೊಬ್ಬರು ಹೇಳುವ ಪ್ರಕಾರ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಅಯೋಗ್ಯ ವಾಹನಗಳನ್ನು ಹಾಗೇ ನಡೆಸಲು ಚಾಲಕರ ಮೇಲೆ ಒತ್ತಡ ಹೇರುತ್ತಾರೆ ಎನ್ನಲಾಗಿದೆ. ಚಾಲಕರು ಅಧಿಕಾರಿಗಳ ಮಾತಿಗೆ ಬಗ್ಗಿ ಅನಿವಾರ್ಯವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಆದರೇ, ಅವಘಡಗಳು ಸಂಭವಿಸಿದರೆ ಚಾಲಕರ ತಪ್ಪು ಎಂದು ತೋರಿಸಿ ಅಮಾಯಕ ಚಾಲಕರನ್ನು ಬಲಿಪಶು ಮಾಡಲಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಈ ಭಾಗದ ಸಾರ್ವಜನಿಕರು ಹೆಚ್ಚಾಗಿ ಸಾರಿಗೆ ಸಂಸ್ಥೆ ಬಸ್‌ಗಳನ್ನೇ ಅವಲಂಬಿಸಿರುವುದು ಇಲ್ಲಿಂದ ಖಾಸಗಿ ವಾಹನಗಳ ಸೇವೆ ತೀರಾ ವಿರಳ. ಏನು ಅರಿಯದ ಪ್ರಯಾಣಿಕರು ಮಾತ್ರ ಅನಿವಾರ್ಯವಾಗಿ ನಿತ್ಯ ಇಂತಹ ಬಸ್‌ಗಳಲ್ಲೇ ಯಾವಾಗ ಏನಾಗುತ್ತದೊ ಎಂಬ ಆತಂಕದಲ್ಲಿಯೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಮೇಲಾಗಿ ಬಹುತೇಕ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳೇ ಇಲ್ಲದಂತಾಗಿದೆ. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿರುವ ನಿಯಮ ಇದ್ದರೂ ಪಾಲನೆಯಾಗುತ್ತಿಲ್ಲ. ಈಶಾನ್ಯ ಸಾರಿಗೆ ಸಂಸ್ಥೆಗೆ ಸಾರ್ವಜನಿಕರ ಪ್ರಾಣದ ಪ್ರಾಮುಖ್ಯತೆ ಗೊತ್ತಿಲ್ಲ. 

ಅವರದ್ದು ಏನಿದ್ದರೂ ಆದಾಯ ಹೆಚ್ಚಿಸುವುದಕ್ಕೆ ಚಿಂತನೆ ಇರುತ್ತದೆ ಎಂಬ ಟೀಕೆಗಳು ಸಾರ್ವಜನಿಕವಾಗಿ ಕೇಳಿ ಬಂದಿದೆ. ಇದಕ್ಕೆಲ್ಲ ಸಂಬಂಧಿಸಿದಂತೆ ಸರ್ಕಾರದ ಸಾರಿಗೆ ಇಲಾಖೆಯೇ ಇದ್ದರೂ ಸರ್ಕಾರಿ ಸಂಸ್ಥೆಯ ವಾಹನಗಳ ಬಗ್ಗೆ ಇಲಾಖೆಯೂ ಮೃದು ಧೋರಣೆ ತೋರುತ್ತದೆ ಎಂದು ಮಾತುಗಳು ಕೇಳಿ ಬರುತ್ತಿದೆ.

ಇನ್ನು ಮುಂದಾದರೂ ಅಧಿಕಾರಿಗಳು ಕೇವಲ ಆದಾಯ ಮೂಲವನ್ನು ಲೆಕ್ಕಿಸದೇ ಸಾರ್ವಜನಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಚಿಂತಿಸಿ ಸಂಚಾರ ಸಾಮರ್ಥ್ಯ ಮುಗಿದ ವಾಹನಗಳನ್ನು ಬದಲಿಸಿ ಹೊಸ ಬಸ್‌ಗಳನ್ನು ಓಡಿಸಲು ಮುಂದಾಗಬೇಕಿ¨ ಜಿಲ್ಲೆಯಲ್ಲಿ 95 ವಾಹನಗಳು 9 ಲಕ್ಷ ಕಿ.ಮೀಟರ್‌ ಚಾಲನೆ ಪೂರ್ಣಗೊಳಿಸಿವೆ. ಗುಜರಿಗೆ ಹಾಕುವ ವಿಚಾರ ಕೇವಲ ಬಸ್‌ನ ಬಾಡಿಗೆ ಮಾತ್ರ ಅದು ಅನ್ವಯಿಸುತ್ತದೆ. ಕಾಲ ಕಾಲಕ್ಕೆ ಮಷಿನರಿ ಸರಿಪಡಿಸಲಾಗುತ್ತಿರುತ್ತದೆ. ಹಾಗಾಗಿ ಅದನ್ನು ಗಮನಿಸಿಯೇ ಸಂಚಾರಕ್ಕೆ ಬಿಡಲಾಗುತ್ತದೆ. 
ಸಂತೋಷ ಗೋಗೇರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಯಾದಗಿರಿ

ಸಂಸ್ಥೆಗೆ ಲಾಭ ತೋರಿಸುವ ಉದ್ದೇಶದಿಂದ ಹಳೇ ಬಸ್‌ಗಳನ್ನೇ ಓಡಿಸಲಾಗುತ್ತದೆ. ಕಂಡಿಷನ್‌ ಇಲ್ಲದ ವಾಹನವನ್ನು ಓಡಿಸಲು ಚಾಲಕರಿಗೆ ಒತ್ತಡವಿದೆ. ಸಾರ್ವಜನಿಕರ ಹಿತದೃಷ್ಟಿಯಿಂದಾದರೂ ಅಧಿಕಾರಿಗಳು ಹೊಸ ಬಸ್‌ಗಳನ್ನು ತಯಾರಿಸಲು ಮುಂದಾಗಬೇಕು.
ದೇವದಾನ್‌, ಸಾರಿಗೆ ಕಾರ್ಮಿಕರ ಸಂಘದ ಅಧ್ಯಕ್ಷ

9 ಲಕ್ಷ ಕಿ.ಮೀಟರ್‌ ಕ್ರಮಿಸಿದ ಬಸ್‌ಗಳು ಸಂಚರಿಸದಂತೆ ನಿಯಮ ಇದ್ದರೂ ಸಾರಿಗೆ ಇಲಾಖೆ ಅವುಗಳನ್ನು ಹಾಗೇ ಚಲಾಯಿಸುತ್ತದೆ ಎಂದರೆ ವಿಪರ್ಯಾಸ. ಬಸ್‌ಗಳಲ್ಲಿ ಸರಿಯಾಗಿ ಕುಳಿತುಕೊಳ್ಳಲು ಸೀಟ್‌ ವ್ಯವಸ್ಥೆ ಇಲ್ಲದಿರುವುದಿಲ್ಲ. ಕೆಲವೊಂದು ಬಸ್‌ಗಳು ಎತ್ತಿನ ಗಾಡಿಯಂತೆ ಓಡುತ್ತವೆ. 
ರಮೇಶ, ಪ್ರಯಾಣಿಕ 

„ಅನೀಲ ಬಸೂದೆ

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

satish jarakiholi

60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ

Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ

3-yadagiri

Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್

Yadgiri: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

YDR-Assult

Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.