ನಿವೇಶನ ದಾಖಲಾತಿ ನೀಡಲು ದಲಿತ ಸಮಿತಿ ಒತ್ತಾಯ-ಮನವಿ
Team Udayavani, Mar 24, 2022, 5:37 PM IST
ಸುರಪುರ: ಸಂಘಟನೆ ಕಾರ್ಯಾಲಯಕ್ಕೆ ಮೀಸಲಿಟ್ಟ ನಿವೇಶನದ ದಾಖಲಾತಿ ನೀಡುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಸಲು ಒತ್ತಾಯಿಸಿ ದಲಿತ ಸಂಘಟನೆ (ಕ್ರಾಂತಿಕಾರಿ) ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ನಗರದ ಪೊಲೀಸ್ ಠಾಣೆ ಎದುರಿಗಿನ ಸಂಘಟನೆ ಕಾರ್ಯಾಲಯಕ್ಕೆ ಮೀಸಲಿಟ್ಟ ನಿವೇಶನಕ್ಕೆ ಆಸ್ತಿ ನಂಬರ್ ಕೊಟ್ಟು ಖಾತಾ ನಕಲು ಕೊಡಲು ಮನವಿ ಸಲ್ಲಿಸಲಾಗಿತ್ತು. ನಿವೇಶನದಲ್ಲಿರುವ ವಿದ್ಯುತ್ ಕಂಬ ತೆರವು ಗೊಳಿಸುವಂತೆ ಸಾಕಷ್ಟು ಮನವಿ ಮಾಡದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
2006ರಲ್ಲಿ ನಿವೇಶನ ಮೀಸಲಿಟ್ಟು ಮಂಜೂರು ಮಾಡಲಾಗಿದೆ. ಅದಕ್ಕೆ ಇದುವರೆಗೂ ಆಸ್ತಿ ನಂಬರ್ ನೀಡಿಲ್ಲ. ಖಾತಾ ನಕಲು ನೀಡುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರು ಪೌರಾಯುಕ್ತರಿಗೆ ಆದೇಶಿಸಿದ್ದಾರೆ. ಪೌರಾಯುಕ್ತರು ದಾಖಲೆ ನೀಡುತ್ತಿಲ್ಲ ನಿವೇಶನಕ್ಕೆ ಸಂಬಂಧಪಟ್ಟಂತೆ ತ್ವರಿತವಾಗಿ ದಾಖಲೆ ನೀಡಬೇಕು. ನಿವೇಶನ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಾನಪ್ಪ ಬಿಜಾಪುರ, ಜಟ್ಟೆಪ್ಪ ನಾಗರಾಳ, ಮರಿಲಿಂಗಪ್ಪ ನಾಟೇಕಾರ, ಮೂರ್ತಿ ಬೊಮ್ನಳ್ಳಿ, ಕಾಳಿಂಗ ಕಲ್ಲದೇವನಳ್ಳಿ, ಬಸವರಾಜ ದೊಡ್ಮನಿ, ಖಾಜಾ ಹುಸೇನ್ ಗುಡುಗುಂಟಿ, ರಾಮಣ್ಣ ಬಬಲಾದ, ಹನೀಫ್ ಗುಡುಗುಂಟಿ, ಮರಿಲಿಂಗ ದೇವಿಕೇರಿ, ಮಹೇಶ ಯಾದಗಿರಿ, ಭೀಮಪ್ಪ, ಭೀಮಣ್ಣ ಮಾಲಗತ್ತಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.