ದಲಿತರಿಗೆ ರಕ್ಷಣೆ ನೀಡುವಂತೆ ಮುಖಂಡರ ಒತ್ತಾಯ
Team Udayavani, Nov 18, 2020, 6:02 PM IST
ಸುರಪುರ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ವಿವಿಧೆಡೆ ದಲಿತ ಸಮುದಾಯದವರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಇದನ್ನು ತಡೆಗಟ್ಟಿ ದಲಿತರಿಗೆ ರಕ್ಷಣೆ ನೀಡಬೇಕು ಎಂದು ಅನೇಕ ದಲಿತ ಮುಖಂಡರು ಒತ್ತಾಯಿಸಿದರು.
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ದಲಿತ ದಿನಾಚರಣೆ ಹಾಗೂ ವಿಭಾಗ ಮಟ್ಟದ ದಲಿತ ಸಭೆಯಲ್ಲಿ ಪಾಲ್ಗೊಂಡಿದ್ದ ಸುರಪುರ, ಶಹಾಪುರ, ವಡಗೇರಾ, ಹುಣಸಗಿ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಒತ್ತಾಯಿಸಿ ದರು ಮುಖಂಡರಾದ ವೆಂಕೋಬ ದೊರೆ, ನಾಗಣ್ಣ ಕಲ್ಲದೇವನಹಳ್ಳಿ, ವೆಂಕಟೇಶ ಬೇಟೆಗಾರ, ರಾಹುಲ ಹುಲಿಮನಿ, ನಿಂಗಣ್ಣ ಗೋನಾಲ, ರಮೇಶ ದೊರೆ ಇತರರು ಮಾತನಾಡಿ, ಸುರಪುರ, ಶಹಾಪುರ ಎರಡು ತಾಲೂಕುಗಳಲ್ಲಿ ಅಸ್ಪೃಶ್ಯತೆತೆ ಸಂಪೂರ್ಣ ನಿಂತಿಲ್ಲ. ಖಂಡಿಸಿದರೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅರಕೇರಾ, ಕರೇಕಲ್, ಕೂಡ್ಲಿಗಿ ಗ್ರಾಮಗಳಲ್ಲಿ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ. ದೂರು ನೀಡಿದರೆ ಪೊಲೀಸ್ ಇಲಾಖೆಯಿಂದ ಸ್ಪಂದನೆ ಸಿಗುತ್ತಿಲ್ಲ. ಕೆಂಭಾವಿ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿವೆ. ಶಹಾಪುರ ಠಾಣೆಯಲ್ಲಿ ದಲಿತರನ್ನು ಕೇವಲವಾಗಿ ನಡೆಸಿಕೊಳ್ಳುತ್ತಿದ್ದಾರೆ. ಪ್ರತಿ ದೂರು ಪಡೆದು ದಲಿತರನ್ನು ಹತ್ತಿಕ್ಕಲಾಗುತ್ತಿದೆ ಎಂದು ದೂರಿದರು.
ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತರ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದೇನೆ. ಅಸ್ಪೃಶ್ಯರ ತೊಂದರೆ ನಿವಾರಿಸಲು ಇಲಾಖೆ ಬದ್ಧವಾಗಿದೆ. ಕೌಂಟರ್ ಕೇಸ್ ತಪ್ಪಿಸಲು ಯತ್ನಿಸಲಾಗುವುದು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಕೌಂಟರ್ ಕೇಸ್ ದಾಖಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಈ ವೇಳೆ ಸುರಪುರ ಪಿಐ ಎಸ್.ಎಂ. ಪಾಟೀಲ್, ಶಹಾಪುರ ಸಿಪಿಐ ಶ್ರೀನಿವಾಸ ಅಲ್ಲಾಪುರ, ಹುಣಸಗಿ ಸಿಪಿಐ ದೌಲತ್ ಕುರಿ, ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ದರಬಾರಿ, ರಾಮಣ್ಣ ಶೆಳ್ಳಗಿ, ಶಿವಲಿಂಗ ಚಲುವಾದಿ, ಮಾಳಪ್ಪ ಕಿರದಳ್ಳಿ, ಭೀಮಾಶಂಕರ ಬಿಲ್ಲವ್, ಧಾನಪ್ಪ ಕಡಿಮನಿ, ಹಣಮಂತ ಬೊಮ್ಮನಳ್ಳಿ, ಬಸವರಾಜ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.