ನಾಡ ಕಚೇರಿಗೆ ಡಿಸಿ ದಿಢೀರ್ ಭೇಟಿ- ಪರಿಶೀಲನೆ
ಇಲ್ಲಿಯವರೆಗೆ 4035 ಜನರಿಗೆ ಲಸಿಕೆ ನೀಡಿ ಶೇಕಡಾ 55 ರಷ್ಟು ಪ್ರಗತಿ ಸಾಧಿಸಿದೆ.
Team Udayavani, Aug 18, 2021, 6:03 PM IST
ಯಾದಗಿರಿ: ಮನೆ-ಮನೆಗೆ ತೆರಳಿ ಲಸಿಕೆ ನೀಡಿ. ಮೂರನೇ ಅಲೆ ತಡೆಯಲು ಸಹಕರಿಸಿ. ಪ್ರತಿ ಆಶಾ ಕಾರ್ಯಕರ್ತೆಯರು ಕನಿಷ್ಠ 30 ಜನರಿಗೆ ಲಸಿಕೆ ನೀಡುವ ಗುರಿ ಹೊಂದಬೇಕು. ಶಾಲಾ ಶಿಕ್ಷಕರು, ಗ್ರಾಪಂ ಅಧ್ಯಕ್ಷರು, ಸದಸ್ಯರೆಲ್ಲರೂ ಲಸಿಕೆ ಪಡೆದು ಜನರಿಗೆ ಮನವೊಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಸೂಚಿಸಿದರು.
ವಡಿಗೇರಾ ತಾಲೂಕಿನ ನಾಯ್ಕಲ್, ಶಹಾಪುರ ತಾಲೂಕಿನ ಖಾನಾಪೂರ, ದೋರನಹಳ್ಳಿ ಗ್ರಾಮಗಳ ಲಸಿಕಾಕರಣ ಕೇಂದ್ರಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಲಸಿಕಾಕರಣದ ಬಗ್ಗೆ ಜನರು ಧನಾತ್ಮಕ ಸ್ಪಂದಿಸಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಮತ್ತು ಬೀದಿ ನಾಟಕಗಳಂತಹ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ತಾಲೂಕಿನ ಅ ಧಿಕಾರಿಗಳಿಗೆ ಸೂಚಿಸಿದರು. ನಾಯ್ಕಲ್ ಗ್ರಾಮದಲ್ಲಿ 7188 ಜನರಿಗೆ ಲಸಿಕಾ ಗುರಿ ಹೊಂದಿದ್ದು, ಇಲ್ಲಿಯವರೆಗೆ 4035 ಜನರಿಗೆ ಲಸಿಕೆ ನೀಡಿ ಶೇಕಡಾ 55 ರಷ್ಟು ಪ್ರಗತಿ ಸಾಧಿಸಿದೆ.
ಖಾನಾಪೂರ ಗ್ರಾಮದಲ್ಲಿ 5488 ಜನರಿಗೆ ಗುರಿ ಹೊಂದಿದ್ದು, ಇಲ್ಲಿಯವರೆಗೆ 3068 ಜನರಿಗೆ ನೀಡಿ ಶೇಕಡಾ 50 ರಷ್ಟು ಲಸಿಕೆ ನೀಡಿದೆ. ದೋರನಹಳ್ಳಿ ಗ್ರಾಮದಲ್ಲಿ 6058 ಜನರಿಗೆ ಗುರಿ ಹೊಂದಿದ್ದು, 4871ಜನರಿಗೆ ಲಸಿಕೆ ನೀಡಿ ಶೇ.55 ರಷ್ಟು ಪ್ರಗತಿ ಸಾಧಿ ಸಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಆರ್.ಸಿ.ಎಚ್.ಒ ಡಾ| ಲಕ್ಷ್ಮಿಕಾಂತ ಒಂಟಿಪೀರ, ಶಹಾಪುರ ತಹಶೀಲ್ದಾರ್ ಮಧುರಾಜ್ ಇದ್ದರು.
ಶಹಾಪುರ ತಾಲೂಕಿನ ದೋರನಹಳ್ಳಿ ಮತ್ತು ಗೋಗಿಕೆ ನಾಡ ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲಿಸಿದರು. 3 ಮತ್ತು 9 ಕಲಂ ಮಿಸ್ ಮ್ಯಾಚ್, ಪೈಕಿ ಪಹಣಿ, ಮೋಜನಿ ಕಡತಗಳು, ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು. ಪ್ರತಿ 15 ದಿವಸಕ್ಕೊಮ್ಮೆ ತಾಲೂಕು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಕಡ್ಡಾಯವಾಗಿ ಮಾಡಬೇಕು. ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸಬೇಕು ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.