ನಿರಂತರ ವಿದ್ಯುತ್ ಸರಬರಾಜಿಗೆ ಆಗ್ರಹ
Team Udayavani, Jan 2, 2018, 3:23 PM IST
ವಡಗೇರಾ: ನಿರಂತರ ವಿದ್ಯುತ್ ಸರಬರಾಜು ಮಾಡಲು ಆಗ್ರಹಿಸಿ ಬೆನಕನಹಳ್ಳಿ, ಶಿವನೂರ, ಜೋಳದಡಗಿ ಗ್ರಾಮದ ರೈತರು ಕದರಾಪೂರ ಗ್ರಾಮದಲ್ಲಿರುವ ವಿದ್ಯುತ್ ಸಬ್‌ಸ್ಟೇಶನ್ 133 ಕೆ.ವಿ ಹತ್ತಿರ ಮುಷ್ಕರ ಆರಂಭಿಸಿದ್ದಾರೆ.
ರೈತ ಮುಖಂಡ ಉದಯ ಪಾಟೀಲ್ ಮಾತನಾಡಿ, ಬೇರೆ ಗ್ರಾಮಗಳಿಗೆ ನಿರಂತರವಾಗಿ 18 ಗಂಟೆ ವಿದ್ಯುತ್ತನ್ನು ಜೆಸ್ಕಾಂ ಅಧಿಕಾರಿಗಳು ಸರಬರಾಜು ಮಾಡುತ್ತಾರೆ. ಬೆನಕನಹಳ್ಳಿ, ಶಿವನೂರ, ಹಾಗೂ ಜೋಳದಡಗಿ ಗ್ರಾಮಗಳು ನಿರಂತರ ಜ್ಯೋತಿ ಯೋಜನೆ ಅಡಿಯಲ್ಲಿ ಬರುತ್ತವೆ. ಆದರೆ ಈ ಮೂರು ಗ್ರಾಮಗಳಿಗೆ ನಿಯಮದ ಪ್ರಕಾರ 7 ಗಂಟೆ ವಿದ್ಯುತ್ತ ಸರಬರಾಜು ಮಾಡಬೇಕು.
ಜೆಸ್ಕಾಂ ಇಲಾಖೆ ಕಳೆದ ಒಂದು ವಾರದಿಂದ ಕೇವಲ 1 ಗಂಟೆ ಸಹ ವಿದ್ಯುತ್ ಸರಿಯಾಗಿ ಕೊಡುತ್ತಿಲ.ಇದರಿಂದ ಹೊಲದಲ್ಲಿರುವ ಹತ್ತಿ ಹಾಗೂ ಭತ್ತಕ್ಕೆ ನೀರು ಹಾಯಿಸಲು ಆಗುತ್ತಿಲ್ಲ. ಹೀಗಾಗಿ ಬೆಳೆಗಳು ಒಣಗುತ್ತಿವೆ ಎಂದು ಹೇಳಿದರು.
ನಿರಂತರ ವಿದ್ಯುತ್ ಸರಬರಾಜು ಮಾಡಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಕೇಳಿಕೊಂಡರೆ ಇತ್ಯಾದಿ ನೆಪ ಹೇಳುತಾರೆ ಎಂದು ಆರೋಪಿಸಿದ ಅವರು, ಎಲ್ಲಿಯವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಸ್ಪಂದಿಸುವುದಿಲ್ಲವೋ ಅಲ್ಲಿಯವರೆಗೆ ನಿರಂತರವಾಗಿ ಮುಷ್ಕರ ಮುಂದುವರೆಸುತ್ತೇವೆ ಎಂದು ತಿಳಿಸಿದರು. ಮಾಹದೇವಪ್ಪ, ಫಿರಮಹ್ಮದ, ಸಿದ್ದಪ್ಪಗೌಡ ಜೋಳದಡಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.