ಹೊರಟೂರ ಈಗ ಶಾಂತ; ಪೊಲೀಸ್ ಬಂದೋಬಸ್ತ್
Team Udayavani, Feb 23, 2019, 10:10 AM IST
ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಯಲ್ಲಮ್ಮದೇವಿ ಜಾತ್ರೆಯಲ್ಲಿ ಫೆ.20ರಂದು ಹೊರಟೂರ ಗ್ರಾಮದ ಎರಡು ಕೋಮಿನ ಜನರ ಮಧ್ಯೆ ಮಾರಾಮಾರಿ ಘಟನೆ ನಡೆದ ಹಿನ್ನೆಲೆಯಲ್ಲಿ ಹೊರಟೂರದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿವೈಎಸ್ಪಿ ಯು.ಶರಣಪ್ಪ ಹೇಳಿದ್ದಾರೆ.
ಸದ್ಯ ಪರಿಸ್ಥಿತಿ ಶಾಂತವಿದ್ದು, ಗ್ರಾಮದಲ್ಲಿ ಒಬ್ಬ ಪಿಎಸ್‌ಐ, ಬ್ಬರು ಎಎಸ್‌ಐ, ಡಿಆರ್ ತುಕುಡಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ. ಈಗಾಗಲೇ 12 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಅಧಿಕಾರಿ ಭೇಟಿ: ಹೊರಟೂರ ಗ್ರಾಮಕ್ಕೆ ಶುಕ್ರವಾರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅಲ್ಲಾಭಕ್ಷ ಭೇಟಿ ನೀಡಿ ಗ್ರಾಮದ ಜನರಿಂದ ಮಾಹಿತಿ ಪಡೆದರು.
ಗ್ರಾಮದ ದಲಿತರ ಓಣಿಯಲ್ಲಿ ನೀರು, ಶೌಚಾಲಯ ಸೇರಿದಂತೆ ಸಾಕಷ್ಟು ಸಮಸ್ಯೆಗಳಿರುವ ಕುರಿತು ಗ್ರಾಮಸ್ಥರು ಅಲ್ಲಾಭಕ್ಯ ಅವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮರ್ಪಕ ಸೌಲಭ್ಯ ಒದಗಿಸಲು ಸಂಬಂಧಿಸಿದ ಪಿಡಿಒ ಅವರಿಗೆ ತಿಳಿಸಿರುವುದಾಗಿ ತಿಳಿಸಿದರು.
ಘಟನೆ ಹಿನ್ನೆಲೆ: ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಯಲ್ಲಮ್ಮದೇವಿ ಜಾತ್ರೆಯಲ್ಲಿ ಫೆ.20ರಂದು ಹೊರಟೂರ ಗ್ರಾಮದ ಎರಡು ಕೋಮಿನ ಜನರ ಮಧ್ಯೆ ಗುರುವಾರ ಸಿನಿಮೀಯ ರೀತಿಯಲ್ಲಿ ನಡೆದ ಮಾರಾಮಾರಿ ನಡೆದಿತ್ತು. ಘಟನೆಯಲ್ಲಿ 5 ಜನರು ಗಾಯಗೊಂಡಿದ್ದರು.
ಹೊರಟೂರು ಗ್ರಾಮದ ದಲಿತ ಸಮುದಾಯದ ಒಂದೇ ಕುಟುಂಬದ 5 ಜನರ ಮೇಲೆ ಅದೇ ಗ್ರಾಮದ ಕುರುಬ ಸಮುದಾಯ ಜನರು ಜಾತ್ರೆಯಲ್ಲಿ ಕಟ್ಟಿಗೆಗಳಿಂದ ಹೊಡೆದು ಗಾಯಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ 12 ಜನರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಮಧ್ಯೆ ದಲಿತ ಸಮುದಾಯದ ಜನರಿಗೆ ವಿರೋಧಿಗಳು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿರುವ ದಲಿತ ಸಮುದಾಯದ 20 ಕುಟುಂಬದ ಮಹಿಳೆಯರು, ಪುರುಷರು ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಜನರು ಭಯದಿಂದ ಯಾದಗಿರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾತ್ರಿ ಊಟ ನೀರಿಲ್ಲದೆ ಜಾಗರಣೆ ಮಾಡಿದ್ದರು. ಸ್ಥಳಕ್ಕಾಗಮಿಸಿದ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಜನರನ್ನು ಗ್ರಾಮಕ್ಕೆ ಕಳಿಸಿಕೊಟ್ಟಿದ್ದರು.
ಹಾಲಗೇರಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹೊರಟೂರ ಗ್ರಾಮದ ಸಂತ್ರಸ್ತರಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಪೊಲೀಸರಿಗೆ ಪತ್ರ ಬರೆಯಲಾಗಿದೆ. ಹಲ್ಲೆಗೊಳಗಾದವರಿಗೆ ಇಲಾಖೆಯಿಂದ ನ್ಯಾಯಯುತ ದೊರೆಯುವ ಎಲ್ಲಾ ಸೌಲಭ್ಯ ವಿತರಿಸಲಾಗುವುದು. ಅಲ್ಲದೇ ಶೀಘ್ರದಲ್ಲೇ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗುವುದು.
ಅಲ್ಲಾಬಕಾಷ್, ಸಮಾಜ ಕಲ್ಯಾಣ ಅಧಿಕಾರಿ ಅಸ್ಪೃಶ್ಯತೆ ಇನ್ನೂ ಜೀವಂತ ಇದೆ. ಗ್ರಾಮದಲ್ಲಿನ ಹೋಟೆಲ್‌ನಲ್ಲಿ ಗ್ಲಾಸ್, ಕುಡಿಯುವ ನೀರು ಮುಟ್ಟಿದ್ದರೆ ದೂರ ಸರಿ ಎನ್ನುತ್ತಾರೆ. ಗಾಯಗೊಂಡವರ ತಾಯಿ ಗ್ರಾಪಂ ಸದಸ್ಯೆ ಇದ್ದಾರೆ. ಒಳ್ಳೆಯ ಮನೆ ಕಟ್ಟಿಕೊಂಡು ನೆಲೆಸಿದ್ದಾರೆ. ಹಾಗಾಗಿ ಕಣ್ಣು ಕುಕ್ಕುವಂತಾಗಿದೆ. ಸರ್ವರಿಗೆ ಸಮಾನತೆ ಸಿಗಲಿ ಹಾಗೂ ಬಡಾವಣೆ ಅಭಿವೃದ್ಧಿಗೆ ಒತ್ತು ನೀಡಬೇಕು.
ರಾಜು ದಾಸನಕೇರಿ, ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.