ಕೂಲಿ ಕಾರ್ಮಿಕರಿಗೆ ನಾಯಕ ನೆರವು
Team Udayavani, May 7, 2020, 5:28 PM IST
ದೇವದುರ್ಗ: ಮಹಾರಾಷ್ಟ್ರ ಪುಣೆಯಲ್ಲಿ ಸಿಲುಕಿರುವ ಜನರಿಗೆ ಆಹಾರ ಪದಾರ್ಥ ನೀಡಲಾಯಿತು.
ದೇವದುರ್ಗ: ಕೋವಿಡ್ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದ ಕೂಲಿ ಕಾರ್ಮಿಕರಗೆ ಶಾಸಕ ಕೆ. ಶಿವನಗೌಡ ನಾಯಕ ನೆರವು ನೀಡಿದ್ದಾರೆ. ಚಿತ್ರದುರ್ಗ ಕ್ವಾರಂಟೈನ್ ಲ್ಲಿದ್ದ ಗರ್ಭಿಣಿಯೊಬ್ಬಳನ್ನು ಜಾಲಹಳ್ಳಿಗೆ ಕರೆತರುವ ವ್ಯವಸ್ಥೆ ಮಾಡಿದ್ದಾರೆ.
ಪುಣೆಯಲ್ಲಿ ನೆಲೆಸಿದ್ದ ಗುಂಟ್ರಾಳ ಗ್ರಾಮದ 25 ಕೂಲಿಕಾರರು ಹಾಗೂ ಗೆಜ್ಜೆಬಾವಿ ಗ್ರಾಮದ 21 ಜನರನ್ನು ಜಿಲ್ಲಾಡಳಿತ ನೆರವಿನಿಂದ ವಿಶೇಷ ಬಸ್ ಮೂಲಕ ಕರೆತರಲಾಗಿದೆ. ಬೆಂಗಳೂರು, ಮೈಸೂರು, ಬಾಗಲಕೋಟೆ ಸೇರಿದಂತೆ ವಿಶೇಷ ಚಿಕಿತ್ಸಾ ಸೌಲಭ್ಯ ಬೇಡಿಕೆಯುಳ್ಳ ಸುಮಾರು 300 ರೋಗಿಗಳಿಗೆ ಪಾಸ್ ವ್ಯವಸ್ಥೆ ಮಾಡಿದ್ದಾರೆ.
ಪುಣೆಯಲ್ಲಿ ನೆಲೆಸಿರುವ ಕರಡಿಗುಡ್ಡ ಮತ್ತು ಬಂಗಾರ ಬಂಡಿ ಕೂಲಿಕಾರರಿಗೆ ಅಲ್ಲಿಯ ಜಿಲ್ಲಾಡಳಿತ ಹಾಗೂ ಸ್ಥಳೀಯ ಕ್ಷೇತ್ರದ ಶಾಸಕರನ್ನು ಸಂಪರ್ಕಿಸಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಕ್ಯಾನ್ಸರ್ ಸೇರಿ ಇತರೆ ಕಾಯಿಗಳಿಂದ ನೆರಳುತ್ತಿದ್ದವರಿಗೆ ಬೇರೆ ಜಿಲ್ಲೆಗೆ ಹೋಗಿ ಚಿಕಿತ್ಸೆ ಪಡೆಯಲು ಪಾಸ್ ವ್ಯವಸ್ಥೆ ಮಾಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.