ಖರ್ಚು ವೆಚ್ಚ ಸಲ್ಲಿಸದಿದ್ದರೆ ಶಿಸ್ತು ಕ್ರಮ
Team Udayavani, Apr 8, 2018, 5:56 PM IST
ಸುರಪುರ: ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚವನ್ನು 28 ಲಕ್ಷ ರೂಪಾಯಿಗೆ
ನಿಗದಿಗೊಳಿಸಿ ಆದೇಶಿಸಿದೆ. ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತಿ ದಿನ ಕಚೇರಿಗೆ ಆಗಮಿಸಿ ಚುನಾವಣಾ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ಖರ್ಚು ವೆಚ್ಚ ಮಾಹಿತಿ ನೀಡಬೇಕು. ಖರ್ಚು ವೆಚ್ಚ ನೀಡದೆ ಇರುವ ಅಭ್ಯರ್ಥಿ ಮೇಲೆ ಆಯೋಗದ ನಿದೇರ್ಶನದಂತೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಎನ್. ಡೇವಿಡ್ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಜಕೀಯ ಪಕ್ಷಗಳ ಮುಖಂಡರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಚುನಾವಣಾ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಬಳಕೆ ಮಾಡುವ ವಿವಿಧ ಸಾಮಗ್ರಿಗಳ ಹಾಗೂ ಪರಿಕ ರಗಳಿಗೆ ನಿಗದಿ ಪಡಿಸುರುವ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿ, ಪ್ರತಿ ದಿನ ತಪ್ಪದೆ ಲೆಕ್ಕ ನೀಡುವಂತೆ ಕಡಕ್ಕಾಗಿ ಎಚ್ಚರಿಕೆ ನೀಡಿದರು.
ಬಸ್ ಬಾಡಿಗೆ ಶುಲ್ಕ 10 ಸಾವಿರ, ಲಾರಿ ಬಾಡಿಗೆ 5,100, ಟ್ರ್ಯಾಕ್ಟರ್ ಅಥವಾ ಟೆಂಪೋ 2,790, ಕಾರು ಬಾಡಿಗೆ 3 ಸಾವಿರ, ಕ್ರೆಷರ್ 2 ಸಾವಿರ, ಆಟೋ ಟಾಟಾ 12 ನೂರ, ವಸತಿ ಗೃಹ ಶುಲ್ಕ 1,450, ಸ್ವಾಗತ ಕಮಾನ 15 ನೂರ, ಧ್ವನಿ ವರ್ಧಕಕ್ಕೆ 3 ಸಾವಿರ, ವಿಶೇಷ ಮೈಕ್ 2 ಸಾವಿರ, ಸಾಮಾನ್ಯ ಧ್ವನಿವರ್ಧಕ 950, ಕಮಾನಗಳಿಗೆ 15 ನೂರ, 15×30 ಶಾಮಿಯಾನಕ್ಕೆ 6 ನೂರ, ಪೆಂಡಾಲ್
ನಿರ್ಮಾಣ 4,320, 1 ನೂರ ಕುರ್ಚಿಗಳಿಗೆ 5 ನೂರು, ಬಟ್ಟೆ ಭಾವುಟ, ಧ್ವಜ, ಬ್ಯಾಡ್ಜ್, ಸ್ಟಿಕರ್, ಪ್ಲೆಕ್ಸ್, ಬ್ಯಾನರ್, ಕಟೌಟ್,
ಪೋಡಿಯಂ, ಟೇಬಲ್, ಪೆನ್ನು, ಕುರ್ಚಿ, ಟೇಬಲ್, ನೀರಿನ ಬಾಟಲ್, ವಿದ್ಯುತ್ ದೀಪ, ಸೇರಿದಂತೆ ಚುನಾವಣೆಗೆ ಬಳಸಬಹುದಾದ ಇತರೆ ಸಣ್ಣ ಪುಟ್ಟ ಸಾಮಗ್ರಿಗಳ ಬಳಕೆಗೆ ಚುನಾವಣಾ ಇಲಾಖೆ ಖರ್ಚು ವೆಚ್ಚ ನಿಗದಿಪಡಿಸಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗ ನಿಗಪಡಿಸಿರುವ ಧರದಲ್ಲಿ ಖರ್ಚು ವೆಚ್ಚ ನೀಡಬೇಕು. ಪಕ್ಷದ ಧ್ವಜ, ಆಭ್ಯರ್ಥಿ ಭಾವಚಿತ್ರವುಳ್ಳ ಟೀಶರ್ಟ್ ವಿತರಣೆ, ಟೋಪಿ, ಕರ ಪತ್ರ, ಮಾದರಿ ಪತ್ರಗಳ ಮುದ್ರಣ ಕೂಡ ಅಭ್ಯರ್ಥಿಯ ಲೆಕ್ಕಕ್ಕೆ ಹೋಗಲಿದೆ. ಇದನ್ನು ಹೊರತು ಪಡಿಸಿ ಸ್ಟಾರ್ ಪ್ರಚಾರಕರು ಪಕ್ಷದ ಪರವಾಗಿ ಪ್ರಚಾರ ಮಾಡಿದಲ್ಲಿ ಆ ಖರ್ಚು ಪಕ್ಷದ ಮೇಲೆ ಹಾಕಲಾಗುತ್ತದೆ. ಒಂದು ವೇಳೆ ಆಭ್ಯರ್ಥಿ ಪರ ಪ್ರಚಾರ ಮಾಡಿದಲ್ಲಿ ಆ ವೆಚ್ಚ ಸಂಬಂಧ ಪಟ್ಟ ಅಭ್ಯರ್ಥಿಯ ಲೆಕಕ್ಕೆ ಹೋಗಲಿದೆ ಎಂದು ವಿವರಿಸಿದರು.
ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರಿಗೆ ವಿವಿ ಪ್ಯಾಟ್ ಪ್ರಾತ್ಯಕ್ಷೆ ಪ್ರದರ್ಶನ ಮಾಡಲಾಯಿತು. ರಾಜ್ಯ ಹಂತದ ತರಬೇತಿದಾರ ಹಣಮಂತ ಪೂಜಾರಿ ಮತಯಂತ್ರದ ಬಗ್ಗೆ ಮಾಹಿತಿ ನೀಡಿ ಮತದಾನ ಮಾಡಿದ ಏಳು ಸೆಕೆಂಡ ಒಳಗಾಗಿ ವಿವಿ ಪ್ಯಾಟ್ ಮತದಾರರನಿಗೆ ಮತಚಲಾವಣೆಯ ಬಗ್ಗೆ ಖಾತ್ರಿ ಪಡಿಸುತ್ತದೆ. ಮತ್ತು ರಶೀದಿ ಹೊರ ಬರುತ್ತದೆ. ಆದರೆ ಅದನ್ನು ಮತದಾರನಿಗೆ ನೀಡಲಾಗುವುದಿಲ್ಲ. ನನ್ನ ಮತ ನನ್ನ ಅಭ್ಯರ್ಥಿಗೆ ಹೋಗದೆ ಅನ್ಯ ಅಭ್ಯರ್ಥಿ ಹೋಗಿದೆ ಎಂದು ಮತದಾರ ಆಕ್ಷೇಪಣೆ ಸಲ್ಲಿಸದಲ್ಲಿ ಮತಗಟ್ಟೆ ಅಧಿಕಾರಿಗಳು ಆತನಿಗೆ ಕೆಲ ಕಾನೂನು ನಿಯಮಗಳನ್ನು ವಿವಿರಿಸಿ ಮರು ಮತದಾನಕ್ಕೆ ಅವಕಾಶ ನೀಡುವರು.
ಆ ಸಂದರ್ಭದಲ್ಲಿ ಚಲಾಯಿಸಿದ ಮತ ಸರಿಯಾಗಿದೆ ಎಂದಾದಲ್ಲಿ ವ್ಯರ್ಥ ಆಕ್ಷೇಪಣೆ ಆರೋಪದಡಿ ಆ ಮತದಾರನನ್ನು ತಕ್ಷಣಕ್ಕೆ ಪೊಲೀಸ್ ವಶಕ್ಕೆ ನೀಡಲಾಗುವುದು. ಒಂದು ವೇಳೆ ಮತ ತಪ್ಪಾಗಿ ಚಲಾವಣೆಯಾಗಿದ್ದಲ್ಲಿ ಮತಯಂತ್ರವನ್ನು ಸ್ಥಗಿತಗೊಳಿಸಿ ಇನ್ನೊಂದು ಯಂತ್ರ ತರಿಸಿ ಮತದಾನ ಆರಂಭಿಸಲಾಗುವುದು ಎಂದು ವಿವರಿಸಿದರು.
ವಿವಿಧ ಪಕ್ಷಗಳ ಮುಖಂಡರು ಡಮ್ಮಿ ಮತ ಚಲಾಯಿಸಿ ವಿವಿ ಪ್ಯಾಟ್ ಬಗ್ಗೆ ಖಾತ್ರಿ ಪಡಿಸಿಕೊಂಡರು. ಸಹಾಯಕ ಚುನಾವಣಾ ಅಧಿಕಾರಿಯಾದ ತಹಶೀಲ್ದಾರ್ ಸುರೇಶ ಅಂಕಲಗಿ, ಸೊಫಿಯಾ ಸುಲ್ತಾನ, ನಿಂಗಣ್ಣ ಬಿರೇದಾರ, ಖರ್ಚುವೆಚ್ಚ ಅಧಿಕಾರಿ ವೆಂಕಟೇಶ ಹೋತಪೇಟ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.