ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷರಿಗೆ ಅಗೌರವ: ಆಕ್ರೋಶ
Team Udayavani, Nov 1, 2022, 10:33 AM IST
ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಸಾಪ ಜಿಲ್ಲಾಧ್ಯಕ್ಷರಿಗೆ ಅಗೌರವ ತೋರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಕಾರ್ಯಕ್ರಮದ ವೇದಿಕೆ ಬಳಿಯಿಂದ ಧ್ವಜಾರೋಹಣದ ನಂತರ ಹೊರ ನಡೆದ ಘಟನೆ ಜರುಗಿತು.
ಇದೇ ವೇಳೆ ಮಾತನಾಡಿದ ಸಿದ್ದಪ್ಪ ಹೊಟ್ಟಿಯವರು ಕನ್ನಡದ ಮಾತೃ ಸಂಸ್ಥೆಗೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯಲ್ಲೂ ಹೆಸರು ಬಳಸಿಲ್ಲ ಎನ್ನುವುದು ಗಮನಕ್ಕೆ ಬಂದನಂತರ ಕಾರ್ಯಕ್ರಮದ ವೇದಿಕೆಗೆ ಕರೆಯಲಾಗುತ್ತದೆ ಬನ್ನಿ ಎಂದು ಆಹ್ವಾನಿಸಿದ ಜಿಲ್ಲಾಡಳಿತ ಮತ್ತೇ ವೇದಿಕೆಗೆ ಕರೆಯದೆ ಅಗೌರವ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಸರ್ಕಾರದಿಂದ ಆಚರಿಸುವ ಹಲವು ಜಯವಂತಿಗಳಲ್ಲಿ ಆಯಾ ಸಮುದಾಯದ ಮುಖಂಡರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವ ಸಲ್ಲಿಸಲಾಗುತ್ತದೆ. ಆದರೆ ಕನ್ನಡದ ಮಾತೃಸಂಸ್ಥೆಯ ಅಧ್ಯಕ್ಷರನ್ನು ಜಿಲ್ಲಾಡಳಿತ ಬೇಕಂತಲೆ ಅಗೌರವ ತೋರಿದೆ. ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಸಂದರ್ಭದಲ್ಲಿ ಕನ್ನಡ ಭಾಷೆ ಉಳಿವಿನ ಬಗ್ಗೆ ಮಾತನಾಡ್ತಾರೆ ಆದರೆ ಕನ್ನಡ ಮಾತೃ ಸಂಸ್ಥೆ ಜಿಲ್ಲಾಧ್ಯಕ್ಷರಿಗೆ ಕಾರ್ಯಕ್ರಮಕ್ಕೆ ಸೌಜನ್ಯಕ್ಕಾದರೂ ಆಹ್ವಾನಿಸದಿರುವುದು ಸರಿಯಲ್ಲ, ಇದು ನನ್ನ ಅವಮಾನವಲ್ಲ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ ಎಂದರು.
ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಪುರಸಭೆ ಸದಸ್ಯರಿಂದ ಧರಣಿ ಸತ್ಯಾಗ್ರಹ
ಕಸಾಪದ ಡಾ.ಸುಭಾಶ್ಚಂದ್ರ ಕೌಲಗಿ, ಎಂ.ಕೆ.ಭೀರನೂರ ಸೇರಿದಂತೆ ಹಲವು ಕಸಾಪ ಪದಾಧಿಕಾರಿಗಳು ಕಾರ್ಯಕ್ರಮದ ವೇದಿಕೆ ಬಳಿಯಿಂದ ಹೊರನಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.