ವಿಮಾದಾರರ ನಾಮಿನಿಗೆ ಪರಿಹಾರ ವಿತರಣೆ
Team Udayavani, Feb 13, 2022, 5:53 PM IST
ನಾರಾಯಣಪುರ: ಕಮಲಾಪುರ ಗ್ರಾಮದಲ್ಲಿ ಪಿಎಂಜೆಜೆಬಿವೈ ವಿಮೆ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿಕೊಂಡು ಅಕಾಲಿಕ ನಿಧನ ಹೊಂದಿದ ವಿಮಾದಾರರ ನಾಮಿನಿಗೆ ಎಸ್ಬಿಐ ಶಾಖೆ ವ್ಯವಸ್ಥಾಪಕ ರಾಹುಲ್ ವರ್ಮಾ 2 ಲಕ್ಷ ರೂ. ಮೊತ್ತದ ವಿಮಾ ಪರಿಹಾರದ ಚೆಕ್ ವಿತರಿಸಿದರು.
ಇದೇ ವೇಳೆ ಮಾತನಾಡಿದ ರಾಹುಲ್ ವರ್ಮಾ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ(ಪಿಎಂಜೆಜೆಬಿವೈ) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಎರಡು ವಿಮಾ ಪಾಲಸಿಗಳು ಕಡಿಮೆ ಪ್ರಿಮಿಯಂ ಮೊತ್ತ ಹೊಂದಿದ್ದು, ಬ್ಯಾಂಕ್ ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾ ಬಿಸಿ ಸಂಯೋಜಕ ಬಸನಗೌಡ, ಡಿಎಸ್ಎಚ್ ಭೀಮನಗೌಡ, ಎಸ್. ಎನ್. ಗುಂಡಕನಾಳ, ಸಿಎಸ್ಪಿಗಳಾದ ಎಂ. ಶಿವಾಜಿ, ಶಬ್ಬೀರ್ ಅಹ್ಮದ್, ಗ್ರಾಪಂ ಸದಸ್ಯ ಹನುಮಪ್ಪ ಆದಾಪುರ, ಅಮರಪ್ಪ ಚೌಡಕೇರ, ಶಿವಪ್ಪ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.