ಶ್ರೀ ಗದ್ದೆಮ್ಮ ದೇವಿ ಜಾತ್ರೆಗೆ ಚಾಲನೆ
Team Udayavani, Jan 14, 2019, 11:21 AM IST
ನಾರಾಯಣಪುರ: ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಈ ಭಾಗದ ಆರಾದ್ಯ ದೈವ, ಶಕ್ತಿಮಾತೆ ದೇವರಗಡ್ಡಿ ಶ್ರೀ ಗದ್ದೆಮ್ಮ ದೇವಿ ಜಾತ್ರೆಯು ಪ್ರತಿ ವರ್ಷದ ಬನದ ಹುಣ್ಣಿಮೆ ದಿನ ಜರುಗಲಿದ್ದು. ಶಕ್ತಿ ದೇವಿಯ ಜಾತ್ರಾಮಹೋತ್ಸವನ್ನು ಶ್ರದ್ಧಾ ಭಕ್ತಿಯಿಂದ, ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಂಗಿನಗಡ್ಡಿ ಗ್ರಾಮವು ಸಜ್ಜಾಗಿದೆ.
ವಿಳ್ಯದೆಲೆ ಅಲಂಕಾರ: ಕಾರ್ತಿಕೋತ್ಸವ ದಿನವಾದ ಶನಿವಾರ ರಾತ್ರಿ ದೇಗುಲದ ಪೂಜಾರಿಗಳಿಂದ ದೇವಿಗೆ ವಿಶೇಷ ವಿಳ್ಯದೆಲೆ ಅಲಂಕಾರ ನೆರವೇರಿಸಿ ಪೂಜೆಗೈದು, ದೇಗುಲದ ಆವರಣದಲ್ಲಿ ಹಣತೆಗಳನ್ನು ಬೆಳಗಿಸುವ ಮೂಲಕ ದೇವಿಯ ಜಾತ್ರೆಗೆ ಅದ್ಧೂರಿ ಚಾಲನೆ ದೊರೆತಿದೆ.
ಸಕಲ ಸಿದ್ದತೆ: ಐದು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವ ಆಚರಣೆಗೆಂದು ಯಾದಗಿರಿ ಜಿಲ್ಲೆಯ ಗಡಿ ಗ್ರಾಮವಾದ ಜಂಗಿನಗಡ್ಡಿ ಗ್ರಾಮ ಸೇರಿದಂತೆ ದೇವಿಗೆ ಉಡಿ ತುಂಬುವ ಏಳು ಗ್ರಾಮಗಳ ಜನತೆ ಸಕಲ ರೀತಿಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಈ ಮೂಲಕ ಜಾತ್ರೆ ಆಚರಣೆ ಸಡಗರದಲ್ಲಿದ್ದಾರೆ.
ಈಗಾಗಲೇ ಇಡೀ ಗ್ರಾಮದ ಜನತೆ ತಮ್ಮ ಮನೆಗಳನ್ನು ಶುಭ್ರಗೊಳಿಸುವ, ಸುಣ್ಣ ಬಣ್ಣ ಸೇರಿದಂತೆ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಶೃಂಗಾರಗೊಳಿಸುವ ತಯಾರಿ ನಡೆಸಿದ್ದು. ಗ್ರಾಪಂತಿಯವರು ಕೂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ವಹಣೆ, ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರಿನ, ವಿದ್ಯುತ್ ದೀಪಗಳ ಅಳವಡಿಸುವ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ಈ ಒಂದು ಜಾತ್ರಾಮಹೋತ್ಸವದಲ್ಲಿ ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟ ಜಿಲ್ಲೆಗಳಿಂದ ಸಹಸ್ರ ಸಂಖ್ಯೆಯಲ್ಲಿ ದೇವಿ ಭಕ್ತರು ಆಗಮಿಸಿ ಶ್ರೀ ಗದ್ದೆಮ್ಮ ದೇವಿ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿ, ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.