ಡಿವೈಎಸ್ಪಿ ದೇವರಾಜ ಅಧಿಕಾರ ಸ್ವಿಕಾರ
Team Udayavani, Oct 23, 2021, 2:37 PM IST
ಸುರಪುರ: ಪೊಲೀಸ್ ಉಪವಿಭಾಗದ ನೂತನ ಡಿವೈಎಸಿಯಾಗಿ ಡಾ| ಬಿ. ದೇವರಾಜ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ನಿರ್ಗಮಿತ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಅವರಿಂದ ಅಧಿಕಾರ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮತ್ತು ಬೀದರ ಜಿಲ್ಲೆಯ ಬಾಲ್ಕಿ ಉಪ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡಿದ ಅನುಭವವಿದೆ. ಇಲ್ಲಿಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡುತ್ತೇನೆ. ಉಪ ವಿಭಾಗದಾಧ್ಯಂತ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಕಾನೂನು ಸುವ್ಯವಸ್ಥೆ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದರು.
ಇಲಾಖೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಜನಸ್ನೇಹಿ ಯಾಗಿ ಕೆಲಸ ಮಾಡಬೇಕು. ನಗರದಲ್ಲಿ ಶಾಂತಿ ಸೌರ್ಹಾದ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ನಗರದಲ್ಲಿ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಸಂಚಾರ ನಿಯಂತ್ರಣ ಸ್ವಲ್ಪ ಕಷ್ಟ ಆಗಬಹುದು. ಇರುವ ಸಿಬ್ಬಂದಿಯನ್ನೇ ಸರಿದೂಗಿಸಿಕೊಂಡು ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಶಾಂತಿ ಸುವ್ಯವಸ್ಥೆ ಮತ್ತು ಕಾನೂನು ಪಾಲನೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ನಿರ್ಗಮಿತ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಮಾತನಾಡಿ, ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ, ನಿವೃತ್ತಿ ಸಹಜ. ಇಲ್ಲಿಯ ಜನರ ಸಹಾಯ, ಸಹಕಾರದಿಂದ ಉತ್ತಮವಾಗಿ ಕೆಲಸ ನಿರ್ವಹಿಸಿದ ಸಂತೃಪ್ತಿ ಇದೆ. ಇಲ್ಲಿಯ ಅನುಭವ ಮತ್ತು ಜನರ ಸಹಕಾರವನ್ನು ಎಂದಿಗೂ ಮರೆಯೋದಿಲ್ಲ ಎಂದು ಹೇಳಿದರು. ಪಿಐ ಸುನೀಲಕುಮಾರ ಮೂಲಿ ಮನಿ, ಹುಣಸಗಿ ಪಿಐ ಎನ್.ಕೆ. ದೌಲತ್, ಶಹಾಪುರ ಪಿಐ ಶ್ರೀನಿವಾಸ ಅಲ್ಲಾಪುರ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.