ಅಭಿವೃದಿಗೆ ಶಿಕ್ಷಣವೇ ಮೂಲಮಂತ್ರ
Team Udayavani, Nov 12, 2021, 5:38 PM IST
ಗುರುಮಠಕಲ್: ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಮಂತ್ರವಾಗಿದ್ದು, ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಎಸ್ ಎಸ್‌ಕೆ ಸಮಾಜದ ಮುಖಂಡ ಚಂದ್ರಲಾಲ್ ಚೌದ್ರಿ ಹೇಳಿದರು.
ಪಟ್ಟಣದ ಅಂಕಮ್ಮದೇವಿ ದೇವಸ್ಥಾನದಲ್ಲಿ ಎಸ್ ಎಸ್‌ಕೆ ಸಮಾಜದ ನವ ಯುವಕ ಸಂಘದಿಂದ ಆಯೋಜಿಸಿದ್ದ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಉತ್ತರ ಭಾರತದಲ್ಲಿ ಸಹಸ್ರಾ ನದಿ ಸಹಸ್ರಾರ್ಜುನ ಮಹಾರಾಜರ ಬಾಣದಿಂದ ಹುಟ್ಟಿದೆ. ಅದು ಇಂದಿಗೂ ಪ್ರಖ್ಯಾತಿ ಹೊಂದಿದೆ. ಕ್ರಿ.ಪೂ 2600ರಲ್ಲಿ ವಿವಿಧ ಪುರಾಣಗಳಲ್ಲಿ ಮಹಾರಾಜರ ಕುರಿತು ಉಲ್ಲೇಖಗಳಿವೆ. ಆಗ ಒಂದು ಸಹಸ್ರ ಅಶ್ವಮೇಧ ಯಜ್ಞ ಮಾಡುವುದರೊಂದಿಗೆ ಋಷಿಮುನಿಗಳ ಅಪಾರ ಸೇವೆ ಸಹಸ್ರಾರ್ಜುನ ಮಹಾರಾಜರು ಮಾಡಿದ್ದಾರೆ ಎಂದರು.
ಎಸ್‌ಎಸ್‌ಕೆ ಸಮಾಜದ ಬುಡ್ಡಪ್ಪ ಜನಾರ್ಧನ ಮಾತನಾಡಿ, ಮಹಾರಾಜರ ಸಾಕಷ್ಟು ತಪಸ್ಸುಗಳ ಫಲವಾಗಿ ದತ್ತಾತ್ರೇಯ ದೇವರಿಂದ ಸಹಸ್ರಾರ್ಜುನ ಮಹಾರಾಜರಿಗೆ ಸಹಸ್ರ ಬಾಹು ವರದಾನ ದೊರೆಯುತ್ತದೆ. ಇದನ್ನರಿತ ಅಗ್ನಿ ಋಷಿಗಳು ಮಹಾರಾಜರ ಹತ್ತಿರ ಬಂದು ನೀವೆ ನನ್ನನ್ನು ತೃಪ್ತಿ ಪಡಿಸಬೇಕೆಂದು ಕೇಳಿದಾಗ ಅವರು ತಮ್ಮ ಶಕ್ತಿಯಿಂದ ಸಾಕಷ್ಟು ಆಶ್ರಮ ಸುಡಲಾರಂಭಿಸಿದರು. ಅದರಲ್ಲಿ ಆಪವ ಋಷಿಗಳ ಆಶ್ರಮವೂ ಸುಟ್ಟು ಹೋಗಿದ್ದರಿಂದ ಕುಪಿತಗೊಂಡ ಋಷಿ ಅಗ್ನಿದೇವರಲ್ಲಿ ಇಷ್ಟು ಶಕ್ತಿ ಬರಲು ಕಾರಣೀಕರ್ತರು ಯಾರೆಂದು ತಿಳಿದು ಆಗ ಸಹಸ್ರಾರ್ಜುನ ಮಹಾರಾಜರಿಗೆ ಶಾಪ ನೀಡುವುದನ್ನು ಕಾಣುತ್ತೇವೆ ಎಂದರು. ಗುರುಮಠಕಲ್ ತಾಪಂ ಸಹಾಯಕ ನಿರ್ದೇಶಕ ರಾಮಚಂದ್ರರಾವ್ ಬಸೂದೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯ ಕುಮಾರ ಹಬೀಬ ಮಾತನಾಡಿದರು.
ದಂಡೋತಿಯ ಜಯಶ್ರೀ ಮಾತೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಯಂತಿ ನಿಮಿತ್ತ ಬೆಳಗ್ಗೆ 8 ಗಂಟೆಗೆ ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ರಾಮಕಿಶನರಾವ್ ಗೊಂಗಲೆ, ಗೌರವಾಧ್ಯಕ್ಷ ನಾರಾಯಣರಾವ್ ಚೌಧರಿ, ಡಾ|ನರಸಿಂಗರಾವ್, ತುಳಸಿರಾಮ ಗೊಂಗಲೆ, ಚಂದ್ರಕಾಂತ ಚೌದರಿ, ಜಗದೀಶ ಮೇಂಗಜಿ, ಹಣಮಂತರಾವ್ ಗೊಂಗಲೆ, ಅನೀಲ್ ಬಸೂದೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.