![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 18, 2021, 5:13 PM IST
ಸುರಪುರ: ತಾಲೂಕಿನ ಮಲ್ಲಿಬಾವಿ, ವಾಗಣಗೇರಾದ ಪ್ರದೇಶಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 130 ಲೀಟರ್ ಕಳ್ಳಭಟ್ಟಿ ಮತ್ತು ಕೊಳೆ ಬೆಲ್ಲ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಉಪಾಯುಕ್ತರು ಮತ್ತು ಶಹಾಪುರ ಉಪವಿಭಾಗದ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಮಲ್ಲಿಬಾವಿ ಹತ್ತಿರದ ಗುಡ್ಡದಲ್ಲಿ 60 ಲೀಟರ್, ಮತ್ತೂಂದು ಪ್ರದೇಶದಲ್ಲಿ 70 ಲೀಟರ್ ಕೊಳೆ ಬೆಲ್ಲ ಮತ್ತು ಇತರೆ ಸಾಮಗ್ರಿಗಳು ದೊರೆತಿವೆ. ಮಣ್ಣಿನ ಮಡಿಕೆಗಳನ್ನು ನಾಶ ಮಾಡಲಾಗಿದೆ. ಕಳ್ಳಭಟ್ಟಿ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಜಾಫರಮಿಯಾ ಎಚ್. ಪಟೇಲ್ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.