ಹೆಸರು ನೋಂದಣಿ ಅವಧಿ ವಿಸ್ತರಿಸಿ
Team Udayavani, Jan 23, 2018, 5:32 PM IST
ನಾರಾಯಣಪುರ: ಕೊಡೇಕಲ್ ಪಟ್ಟಣದಲ್ಲಿ ತೆರೆಯಲಾಗಿರುವ ತೊಗರಿ ಖರೀದಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ
ಗ್ರಾಮಗಳ ತೊಗರಿ ಬೆಳೆದ ರೈತರು ತಮ್ಮ ಹೆಸರು ನೋಂದಾಯಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಆ ಎಲ್ಲಾ ರೈತರಿಗೆ ಹೆಸರು ನೋಂದಾಯಿಸುವ ಅವಧಿ ವಿಸ್ತರಿಸುವಂತೆ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಹಾಗೂ ವಿವಿಧ ರೈತ ಪರ ಸಂಘಟನೆ ಸದಸ್ಯರು ಸೋಮವಾರ ಕೊಡೇಕಲ್‌ನ ನಾಡ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಅವರಿಗೆ ಬರೆದ ಮನವಿಯನ್ನು ಉಪ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಅವರಿಗೆ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ವಲಯಾಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ಈ ಭಾಗದ ರೈತರ ಹಾಗೂ ಸಂಘಟನೆಗಳ ಬೇಡಿಕೆಯಂತೆ ತೊಗರಿ ಖರೀದಿ ಕೇಂದ್ರ ಸ್ಥಾಪನೆಗೆ ಸಹಕರಿಸಿದ ಜಿಲ್ಲಾಧಿಕಾರಿಗಳಿಗೆ ಸಂಘಟನೆ ಸೇರಿದಂತೆ ಈ ಭಾಗದ ರೈತರ ಪರವಾಗಿ ಅಭಿನಂದಿಸುವುದಾಗಿ ಹೇಳಿದ ಅವರು, ತಾಲೂಕಿನ 5 ಹೋಬಳಿ ವ್ಯಾಪ್ತಿಯಲ್ಲಿ ಕೊಡೇಕಲ್ ಭಾಗದಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತೊಗರಿ ಬೆಳೆ ಬೆಳೆದಿದ್ದಾರೆ.
ಕಾರಣಾಂತರಗಳಿಂದ ಈ ಭಾಗದಲ್ಲಿ ಹಲವು ತೊಗರಿ ಬೆಳೆದ ರೈತರು ಹೆಸರು ನೋಂದಾಯಿಸಲು ಸಾಧ್ಯವಾಗದ
ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಹೆಸರು ನೋಂದಾಯಿಸದೆ ಇರುವ ರೈತರಿಗೆ ಹೆಸರು ನೋಂದಾಯಿಸುವ ಅವಕಾಶ ಕಲ್ಪಿಸಲು ಅವಧಿ ವಿಸ್ತರಿಸಿ, ರೈತರ ಸಹಾಯಕ್ಕೆ ಮುಂದಾಗಬೇಕ್ಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಈಗಾಗಲೇ ಈ ಭಾಗದ 1300 ಜನ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 743
ಅರ್ಜಿಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನುಳಿದಂತೆ 500ರಿಂದ 600 ಅರ್ಜಿಗಳನ್ನು ಸ್ಕ್ಯಾನ ಆಗಬೇಕಾಗಿದೆ ಎಂದು ಸೊಸೈಟಿ ಕಾರ್ಯದರ್ಶಿ ತಿಳಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರಾದ ಗುಂಡು ರಾಜವಾಳ, ದೇವರಾಜ ಪಾಟೀಲ್ ತೀರ್ಥ, ಬಸವರಾಜ
ದೊಡಮನಿ, ರಮೇಶ ಪೂಜಾರಿ, ತಿಮ್ಮಣ್ಣ ಕರಬಸಪ್ಪನವರ, ಗೌಡಪ್ಪಗೌಡ ಪಾಟೀಲ್, ಶಂಕ್ರಪ್ಪ ಜಂಗಳಿ, ಬಸವರಾಜ ಸಜ್ಜನ್, ಅಂಬ್ರಪ್ಪ ಕಟ್ಟಿಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.