ನೇತ್ರ ತಪಾಸಣೆ ಶಿಬಿರ, ಕನ್ನಡಕ ವಿತರಣೆ
Team Udayavani, Mar 13, 2022, 2:32 PM IST
ಸುರಪುರ: ನಗರದ ಉಪ ಕಾರಾಗೃಹದಲ್ಲಿ ಜಿಲ್ಲಾ ಅಂಧತ್ವ ನಿವಾರಣೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಚಾರಣಾಧಿಧೀನ ಆರೋಪಿಗಳಿಗೆ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ನೇತ್ರ ತಜ್ಞ ಡಾ| ಶಮೀಮ ಗೋಗಿ ಮಾತನಾಡಿ, ಶಿಬಿರದಲ್ಲಿ ಒಟ್ಟು 64 ಜನ ವಿಚಾರಣಾ ಆರೋಪಿಗಳಿಗೆ ನೇತ್ರ ತಪಾಸಣೆ ಮಾಡಲಾಗಿದೆ. ಅರ್ಹ 6 ಜನರಿಗೆ ಮಾತ್ರ ಇಲಾಖೆಯಿಂದ ಉಚಿತ ಕನ್ನಡ ನೀಡಲಾಗಿದ್ದು, ಉಳಿದವರಿಗೆ ಔಷಧೋಪಚಾರ ನೀಡಲಾಗಿದೆ ಎಂದು ಹೇಳಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ದಿನ ಉಚಿತ ನೇತ್ರ ತಪಾಸಣೆ-ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಶಸ್ತ್ರ ಚಿಕಿತ್ಸೆ ಒಳಗಾದವರಿಗೆ ಇಲಾಖೆಯಿಂದ ಉಚಿತವಾಗಿ ಕನ್ನಡಕ ನೀಡಲಾಗುತ್ತದೆ. ದೃಷ್ಟಿದೋಷ ಉಳ್ಳವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಆರೋಗ್ಯ ಇಲಾಖೆಯ ಪ್ರದೀಪ ಸೂರ್ಯವಂಶಿ, ಕಾರಾಗೃಹ ಅಧೀಕ್ಷಕಿ ವಿಜಯಲಕ್ಷ್ಮೀ, ಸಿಬ್ಬಂದಿಗಳಾದ ಅರುಣಕುಮಾರ, ಹುಲಗೇಶ ಗಾದಗಿ, ಬಸವರಾಜ, ಬಸಮ್ಮ, ರೇಣುಕಾ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.