Narayanapura; ಉತ್ತಮ ಮಳೆಗೆ ಜಲಾಶಯಗಳು ಭರ್ತಿಯಿಂದ ರೈತರಲ್ಲಿ ಹರ್ಷ: ಸಚಿವ ದರ್ಶನಾಪುರ
ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿ: ಸಚಿವರಿಂದ ಬಾಗಿನ ಅರ್ಪಣೆ
Team Udayavani, Aug 20, 2024, 10:41 PM IST
ನಾರಾಯಣಪುರ: ಈ ಬಾರಿ ಅವಶ್ಯಕತೆಯಷ್ಟು ಮಳೆಯಾಗಿದ್ದರಿಂದ ಆಲಮಟ್ಟಿ ಶಾಸ್ತ್ರಿ, ಬಸವಸಾಗರ ಉಭಯ ಜಲಾಶಯಗಳು ಭರ್ತಿಯಾಗಿದ್ದು ರೈತರಲ್ಲಿ ಖುಷಿ ತಂದಿದೆ ಕಳೆದ ವರ್ಷಕ್ಕಿಂತಲೂ ಈ ಭಾರಿ ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹ ಇದೇ ಸದ್ಯ ಕಾಲುವೆಗಳಿಂದ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿದೆ ಮುಂದೆಯೂ ಒಳ್ಳೆಯ ಮಳೆಯಾದರೆ ಎರಡನೇ ಬೆಳೆಗೂ ನೀರು ಹರಿಸುವ ಆಶಾಭಾವ ಇದೇ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಬಸವಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆ ಮಂಗಳವಾರ ವಿಶೇಷ ಗಂಗಾ ಪೂಜೆಗೈದು ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಜಲಾಶಯದ ಗೇಟ್ ನಿರ್ವಹಣೆಗೆ ಅನುದಾನ ಬಂದಿದೆ ಎಲ್ಲಾ ಗೇಟ್‌ಗಳು ಸುಭದ್ರವಾಗಿವೆ ಗೇಟ್ ನಿರ್ವಹಣೆ ಟೆಂಡರ್‌ಗೆ ರಾಜಕೀಯ ಒತ್ತಡ ಇಲ್ಲ ಅನುದಾನ ಕೊರೆತೆಯಿಲ್ಲಾ ಮತ್ತು ಉದ್ಯಾನವನ ನಿರ್ಮಾಣದ ಬಗ್ಗೆ ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ನಾನು ಕೂಡಾ ಮನವಿ ಸಲ್ಲಿಸಿದ್ದೇನೆ ಅನುದಾನ ಬಂದರೆ ಆಲಮಟ್ಟಿ ಮಾದರಿಯ ಐತಿಹಾಸಿಕ ಪ್ರವಾಸಿ ತಾಣ ಮಾಡಲಿಕ್ಕೆ ಅವಕಾಶ ಇದೇ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಗೌರ್ನರ್ ಅವರು ಬಿಜೆಪಿ ಏಜೆಂಟ್, ಗೌರ್ನರ್ ಕಚೇರಿ ಬಿಜೆಪಿ, ಜೆಡಿಎಸ್ ಪಕ್ಷಗಳ ಕಚೇರಿಯಾಗಿ ಪರಿವರ್ತನೆ, ಎಸ್‌ಐಟಿಯಿಂದ ನಿಜ ಬಣ್ಣ ಬಯಲಾಗಲಿದೆ ಬಿಜೆಪಿ ಜೆಡಿಎಸ್‌ನವರು ಮೈಸೂರಿಗೆ ನಡೆಸಿದ ಪಾದಯಾತ್ರೆ ಜನ ಬಂದಿದ್ದರೆ, ಎಂದು ಪ್ರಶ್ನಿಸಿದ ಸಚಿವರು, ಪಾದಯಾತ್ರೆಗೆ ಜೆಡಿಎಸ್ ಕ್ಯಾನ್‌ಸೆಲ್ ಮಾಡಿತ್ತು. ಬಿಜೆಪಿಯವರು ಕುಮಾರಸ್ವಾಮಿ ಅವರ ಕೈಕಾಲು ಹಿಡಿದು ಕರೆತಂದಿದ್ದರು ಎಂದು ವ್ಯಂಗ್ಯವಾಡಿದರು. ನಾವು ಕೂಡಾ ಹೋರಾಟ ಮಾಡಿ ನಿಜ ಬಣ್ಣ ಬಯಲು ಮಾಡಿದ್ದೇವೆ ಎಂದು ಗೌರ್ನರ್ ಅವರ ಪ್ರಾಸಿಕ್ಯೂಷನ್ ಅನುಮತಿಯ ಕುರಿತಾದ ನಡೆದ ವಿದ್ಯಮಾನಗಳ ಬಗ್ಗೆ ಹೇಳಿದರು.
ಸಚಿವರಿಗೆ ಶಾಸಕರಿಗೆ ಅದ್ದೂರಿ ಸ್ವಾಗತ: ಬಾಗಿನ ಅರ್ಪಣೆಗೆ ಜಲಾಶಯಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಅವರನ್ನು, ಶಾಸಕ ರಾಜಾ ವೇಣುಗೋಪಾಲ ನಾಯಕ, ಶಾಸಕ ಸಿ.ಎಸ್ ನಾಡಗೌಡ, ಎಂಎಲ್‌ಸಿ ಶರಣಗೌಡ ಭಯ್ಯಾಪುರ ಹಾಗೂ ಜಿಲ್ಲಾಧಿಕಾರಿ ಡಾಣಸುಶೀಲಾ, ಎಸ್ಪಿ ಸಂಗೀತಾ ಅವರನ್ನು ನಿಗಮದ ಹಿರಿಯ ಅಧಿಕಾರಿಗಳು ಹೂ ಗುಚ್ಛ ನೀಡಿ ಸ್ವಾಗತಿಸಿದರು.ಬಳಿಕ ಗೇಜ್ ರೂಂನಲ್ಲಿ ಶಕ್ತಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಚಿವ, ಶಾಸಕರನ್ನು, ಡೊಳ್ಳು ಮತ್ತು ವಾದ್ಯ ವೃಂದದೊಂದಿಗೆ ದೇಶಮುಖ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನೀಯರು ಕುಂಬ ಕಳಸ ಹೊತ್ತು ಬಾಗಿನ ಅರ್ಪಿಸುವ ಸ್ಥಳದವರೆಗೆ ಮೆರವಣಿಗೆಯ ಮೂಲಕ ಕರೆ ತರುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದ್ದು ಗಮನ ಸೆಳೆಯಿತು.
ಅರ್ಚಕ ರಾಘವೇಂದ್ರಾಚಾರ‍್ಯ ಅವರು ಪೂಜಾ ಕಾರ‍್ಯ ನೆರವೇರಿಸಿದರು. ರಾಜಾ ಸಂತೋಷನಾಯಕ, ಸಿಇ ಆರ್. ಮಂಜುನಾಥ, ಎಸ್‌ಇ ರಮೇಶ ರಾಠೋಡ, ಇ.ಇ ಸುರೇಂದ್ರರೆಡ್ಡಿ, ಡಿವೈಎಸ್‌ಪಿ ಇನಾಮ್‌ದಾರ, ಎಇಇ ವಿದ್ಯಾಧರ, ಮಹಾಲಿಂಗಪ್ಪ ಭಜಂತ್ರಿ, ವಿಜಯ ಅರಳಿ, ಯಶವಂತ ರಾಠೋಡ ಸೇರಿದಂತೆ ಹುಣಸಗಿ, ಸುರಪುರ ತಾಲೂಕಿನ ಕಾಂಗ್ರೆಸ್ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಕರ‍್ಯಕರ್ತರು, ಕೆಬಿಜೆಎನ್‌ಎಲ್ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಹುಣಸಗಿ ವೃತ್ತದ ಸಿಪಿಐ ಸಚಿನ್, ಪಿಎಸ್‌ಐ ರಾಜಶೇಖರ ನೇತೃತ್ವದಲ್ಲಿ ಎಎಸೈಗಳು, ಪೊಲೀಸ್ ಹಾಗೂ ಖಾಸಗಿ ಭದ್ರತಾ ಪಡೆಯವರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಟಿಬಿ ಡ್ಯಾಮ್ ಗೇಟ್ ಕಳಚಿ ಹೋದ ಘಟನೆ ಬಳಿಕ ಸರ್ಕಾರ ಮಟ್ಟದ ಹಿರಿಯ ಅಧಿಕಾರಿಗಳು, ಎಂಡಿ ಅವರು ಸೂಚನೆಯಂತೆ ಜಲಾಶಯದ ಪ್ರತಿಯೊಂದು ಗೇಟ್‌ನ್ನು ಎಸ್ಸಿ, ಇಇ ಅವರೊಂದಿಗೆ ಪರಿಶೀಲನೆ ನಡೆಸಿದ್ದೇವೆ ಭಯಪಡುವ ಅಗತ್ಯವಿಲ್ಲ ಸೂಕ್ಷ ಸ್ಥಳವನ್ನು ಪರಿವೀಕ್ಷಣೆ ಮಾಡಿದ್ದೇವೆ ಈ ಡ್ಯಾಮ್‌ನ ಗೇಟ್‌ಗಳೆಲ್ಲವೂ ರೋಪ್, ಡ್ರಮ್ ಯಾಂತ್ರಿಕತೆಯಿಂದ ಕೂಡಿವೇ ಪ್ರತಿ ವರ್ಷವೂ ಗೇಟ್‌ಗಳಿಗೆ ಗ್ರೀಸಿಂಗ್ ಮಾಡಲಾಗಿದೆ ನಿರ್ವಹಣೆಗೆ ವಿಶೇಷ ಕಾಳಜಿ ವಹಿಸಲಾಗಿದೆ ಮತ್ತು ನದಿಗೆ ನೀರು ಹರಿಸುವ ವೇಳೆ ಎಲ್ಲಾ ಗೇಟ್‌ಗಳನ್ನು ತೆರದು ನೀರು ಹರಿಬಿಟ್ಟು ಗೇಟ್ ಸಾಮರ್ಥ್ಯವನ್ನು ಪರೀಕ್ಷೆ ಮಾಡಿದ್ದೇವೆ ಎಲ್ಲಾ ಗೇಟ್‌ಗಳು ಸುಸ್ಥಿತಿಯಲ್ಲಿವೇ ಸುಭದ್ರವಾಗಿವೇ,ಹೆಚ್ಚುವರಿ 3 ಸ್ಟಾಪ್‌ಲಾಗ್ ಗೇಟ್ ಎಲಿಮೆಂಟ್ಸ ಇವೆ ಗೇಟ್‌ಗಳ ನಿರ್ವಹಣೆಗೆ ಅನುದಾನ ಕೊರೆತೆ ಇಲ್ಲ.
-ಆರ್.ಮಂಜುನಾಥ
ಸಿಇ ಕೆಬಿಜೆಎನ್‌ಎಲ್ ಡ್ಯಾಮ್ ಝೋನ್
ವರದಿ: ಬಸವರಾಜ ಎಂ. ಶಾರದಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.