ಅಂತಿಮ ಮತದಾರರ ಪಟ್ಟಿ ಪ್ರಕಟ
Team Udayavani, Sep 5, 2020, 6:03 PM IST
ಯಾದಗಿರಿ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 2020ರ ಆ.28ರಂತೆ ಗ್ರಾಪಂ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಅಂತಿಮ ಮತದಾರ ಪಟ್ಟಿ ತಯಾರಿಸಿ ಆ.31ರಂದು ಪ್ರಚಾರ ಪಡಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ. ಆರ್ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸಹಾಯಕ ಆಯುಕ್ತರ ಕಾರ್ಯಲಯ, ಜಿಲ್ಲೆಯ ಎಲ್ಲ ತಹಶೀಲ್ದಾರ್ ಕಾರ್ಯಲಯ ಹಾಗೂ ತಾಪಂ ಹಾಗೂ ಸಂಬಂಧಪಟ್ಟ ಗ್ರಾಪಂ ಕಾರ್ಯಾಲಯಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪಟ್ಟಿಯನ್ನು ಪ್ರಚಾರ ಪಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 119 ಗ್ರಾಪಂಗಳಿದ್ದು, 935 ಮತಗಟ್ಟೆಗಳಲ್ಲಿ ಪುರುಷರು 3,76,555, ಮಹಿಳೆಯರು 3,74,749 ಇತರೆ 23 ಸೇರಿ ಒಟ್ಟು 7,51,327 ಮತದಾರರಿದ್ದಾರೆ.
ತಾಲೂಕುವಾರು ವಿವರ: ಶಹಾಪುರ ತಾಲೂಕಿನಲ್ಲಿ 24 ಗ್ರಾಪಂಗಳ ಒಟ್ಟು 193 ಮತಗಟ್ಟೆಗಳು ಇದ್ದು, ಪುರುಷರು 78,722, ಮಹಿಳೆಯರು 78,873, ಇತರೆ 1 ಸೇರಿ ಒಟ್ಟು 1,57,596 ಮತದಾರರಿದ್ದಾರೆ. ಯಾದಗಿರಿ ತಾಲೂಕಿನ 22 ಗ್ರಾಪಂಗಳ ಒಟ್ಟು 205 ಮತಗಟ್ಟೆಗಳಿದ್ದು, ಪುರುಷರು 78,393, ಮಹಿಳೆಯರು 79,159 ಇತರೆ 3 ಸೇರಿ ಒಟ್ಟು 1,57,555 ಮತದಾರರಿದ್ದಾರೆ. ಸುರಪುರ ತಾಲೂಕಿನ 21 ಗ್ರಾಪಂಗಳ ಒಟ್ಟು 150 ಮತಗಟ್ಟೆಗಳು ಇದ್ದು, ಪುರುಷರು 60,111, ಮಹಿಳೆಯರು 59,217 ಇತರೆ 4 ಸೇರಿ 1,19,332 ಒಟ್ಟು ಮತದಾರರಿದ್ದಾರೆ.
ಹುಣಸಗಿ ತಾಲೂಕಿನ 18 ಗ್ರಾಪಂಗಳ ಒಟ್ಟು 145 ಮತಗಟ್ಟೆಗಳಿದ್ದು ಪುರುಷರು 58,753, ಮಹಿಳೆಯರು 56,980 ಇತರೆ 11 ಸೇರಿ 1,15,744 ಮತದಾರರಿದ್ದಾರೆ. ಅಲ್ಲದೆ ವಡಗೇರಾ ತಾಲೂಕಿನ 17 ಗ್ರಾಪಂಗಳ ಒಟ್ಟು 116 ಮತಗಟ್ಟೆಗಳಿದ್ದು ಪುರುಷರು 47,775, ಮಹಿಳೆಯರು 47,214 ಇತರೆ 2 ಸೇರಿ 94,991 ಮತದಾರರಿದ್ದಾರೆ. ಗುರುಮಠಕಲ್ ತಾಲೂಕಿನ 17 ಗ್ರಾಪಂಗಳ ಒಟ್ಟು 126 ಮತಗಟ್ಟೆಗಳಿದ್ದು, ಪುರುಷರು 52,801, ಮಹಿಳೆಯರು 53,306 ಇತರೆ 2 ಸೇರಿ 1,06,109 ಒಟ್ಟು ಮತದಾರರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.