![New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು](https://www.udayavani.com/wp-content/uploads/2024/12/new-year-415x240.jpg)
ಅಣೆಕಟ್ಟು ಅಧಿಕಾರಿಗಳಿಂದ ಪ್ರವಾಹ ಮುನ್ಸೂಚನೆ
Team Udayavani, Jul 11, 2020, 10:50 AM IST
![ಅಣೆಕಟ್ಟು ಅಧಿಕಾರಿಗಳಿಂದ ಪ್ರವಾಹ ಮುನ್ಸೂಚನೆ](https://www.udayavani.com/wp-content/uploads/2020/07/yg-tdy-3-2-620x372.jpg)
ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅರಿತು ಕೃಷ್ಣಾ ನದಿ ತೀರದ ಯಾದಗಿರಿ, ರಾಯಚೂರು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರವಾಹ ಮುನ್ಸೂಚನೆ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಅಣೆಕಟ್ಟು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರ ನಾಯ್ಯೋಡಿ ತಿಳಿಸಿದ್ದಾರೆ.
ಬಸವಸಾಗರ ಜಲಾಶಯಕ್ಕೆ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಿಂದ ಶುಕ್ರವಾರ 20 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ಜಲಾಶಯ ಬಹುತೇಕ ಭರ್ತಿ ಹಂತಕ್ಕೆ ತಲುಪಿದೆ. ಒಂದೊಮ್ಮೆ ಒಳಹರಿವಿನ ಪ್ರಮಾಣ ಏರಿಕೆಯಾದರೆ ಅಣೆಕಟ್ಟೆ ಕ್ರಸ್ಟ್ ಗೇಟ್‌ಗಳ ಮೂಲಕ ಕೃಷ್ಣಾ ನದಿ ಪಾತ್ರಕ್ಕೆ ಯಾವುದೇ ಸಂದರ್ಭದಲ್ಲಿ ನೀರು ಹರಿಬಿಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ನೀರು ಹರಿಬಿಟ್ಟ ಸಂದರ್ಭದಲ್ಲಿ ನದಿ ತೀರದ ಗ್ರಾಮಗಳ ಜನ ಮತ್ತು ಜಾನುವಾರಗಳು ನೀರಿಗೆ ಇಳಿಯಬಾರದು. ಯಾವುದೇ ಚಟುವಟಿಕೆ ನಡೆಸದಂತೆ, ಮುಂಜಾಗೃತ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮನವಿ ಮಾಡಿದ್ದಾರೆ. ಅಣೆಕಟ್ಟು ಅಧಿಕಾರಿಗಳ ಮಾಹಿತಿ ಯಂತೆ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು 70 ಸಾವಿರ ಕ್ಯೂಸೆಕ್ ಇದೆ. 84 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ನಾರಾಯಣಪುರ ಅಣೆಕಟ್ಟಿಗೆ 20 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದ ಗರಿಷ್ಠ ಮಟ್ಟದಲ್ಲಿ 490.16 ಮೀಟರ್‌ಗೆ ನೀರು ಬಂದು ತಲುಪಿದೆ. 24.60 ಟಿಎಂಸಿ ಅಡಿ ನೀರು ಸಂಗ್ರಹ ಇದೆ.
ಟಾಪ್ ನ್ಯೂಸ್
![New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು](https://www.udayavani.com/wp-content/uploads/2024/12/new-year-415x240.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು](https://www.udayavani.com/wp-content/uploads/2024/12/new-year-150x87.jpg)
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
![Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ](https://www.udayavani.com/wp-content/uploads/2024/12/6-35-150x90.jpg)
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
![5](https://www.udayavani.com/wp-content/uploads/2024/12/5-36-150x90.jpg)
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-150x90.jpg)
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
![Krantiveer Brigade launched by worshipping the feet of 1008 saints: KS Eshwarappa](https://www.udayavani.com/wp-content/uploads/2024/12/kse-150x87.jpg)
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.