ಫುಟ್‌ಪಾತ್ ತೆರವು ಕಾರ್ಯಾಚರಣೆಗಿಳಿದ ಪೊಲೀಸ್ ಪಡೆ
Team Udayavani, Dec 26, 2021, 12:12 PM IST
ಯಾದಗಿರಿ: ಫುಟ್‌ಪಾತ್ ಅತಿಕ್ರಮಣದ ದೂರುಗಳು ನಿತ್ಯ ಪೊಲೀಸ್ ಇಲಾಖೆ ಮತ್ತು ನಗರಸಭೆಯಲ್ಲಿ ದಾಖಲಾಗುತ್ತಿದ್ದರೂ ಕ್ರಮ ಕೈಗೊಳ್ಳದೇ ಬೇಸತ್ತಿದ್ದ ಜನರಿಗೆ ಪೊಲೀಸ್ ವರಿಷ್ಠಾಧಿಕಾರಿಡಾ| ಸಿ.ಬಿ.ವೇದಮೂರ್ತಿ ತಾವೇಖುದ್ದಾಗಿ ಕಾರ್ಯಾಚರಣೆಗಿಳಿದು ಅತಿಕ್ರಮಣ ಮಾಡಿಕೊಂಡಿದ್ದ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಿದ್ದಾರೆ.
ಕಳೆದೆರಡು ದಿನಗಳಿಂದ ನಗರದ ವಿವಿಧೆಡೆ ದಾಳಿ ನಡೆಸಿದ ಪೊಲೀಸ್ ಹಾಗೂ ನಗರಸಭೆ ಸಿಬ್ಬಂದಿ ನಿತ್ಯವೂ ಫುಟ್‌ಪಾತ್ ತೆರವಿಗೆ ಕ್ರಮ ಕೈಗೊಳ್ಳುತ್ತಿದ್ದು ಜನರಲ್ಲಿ ಕೊಂಚ ಸಮಾಧಾನ ತಂದಿದೆ.
ತೆರವಿಗೆ ಪೊಲೀಸರೇ ಬರಬೇಕಾಯ್ತೇ?
ನಗರದ ಮುಖ್ಯ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು ಹಾಗೂ ಬಹುತೇಕ ಅಂಗಡಿಗಳವರು ತಮ್ಮ ಸರಕನ್ನು ಹೊರಗಡೆ ರಸ್ತೆಯಲ್ಲಿ ಹಾಕುವುದರಿಂದ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗಿತ್ತು. ಈ ಬಗ್ಗೆ ನಾಗರಿಕರು ಹಲವಾರು ಬಾರಿ ನಗರಸಭೆಗೆ ಮನವಿ ಮಾಡಿದರೂ ನಗರಸಭೆ ಕ್ರಮ ಕೈಗೊಳ್ಳದ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಯಾದಗಿರಿ ನಗರದಲ್ಲಿ ದಾರಿಹೋಕರು ನಿತ್ಯ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಿದ್ದರೂ ನಗರಾಡಳಿತ ಮಾತ್ರ ಯಾವುದೇ ಕ್ರಮ ಕೈಗೊಳ್ಳದ್ದರಿಂದ ಫುಟ್‌ಪಾತ್ ಅತಿಕ್ರಮಣ ನಿರಂತರ ನಡೆಯುತ್ತಿದೆ. ಬೀದಿ ವ್ಯಾಪಾರಿಗಳ ಹೆಸರಲ್ಲಿ ಕಾಂಪ್ಲೆಕ್ಸ್ ಮಾಲೀಕರು ಹಾಗೂ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟು ಗಳನ್ನು ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡು ಸಂಚಾರಕ್ಕೆ ತೊಂದರೆ ಕೊಡುತ್ತಿದ್ದರೂ ನಗರಾಡಳಿತ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಕಳೆದೆರಡು ದಿನಗಳ ಹಿಂದೆ ಬಸ್ ಅಪಘಾತದಿಂದ ಕೆರಳಿದ ಪೊಲೀಸ್ ಪಡೆ ಮುಖ್ಯಸ್ಥ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಾವೇ ಖುದ್ದಾಗಿ ಫಿಲ್ಡಿಗಿಳಿಯುವಮೂಲಕಫುಟ್‌ಪಾತ್‌ಅತಿಕ್ರಮಣ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಿದ್ದಾರೆ. ಒಟ್ಟಿನಲ್ಲಿ ನಗರಾಡಳಿತ ಮಾಡಬೇಕಾದ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ನಗರಸಭೆ ಆಡಳಿತ ಮಂಡಳಿಗೆ ಮುಜುಗರ ತಂದಿರುವುದಂತೂ ಸತ್ಯ.ನಗರದ ಪ್ರಮುಖರಸ್ತೆಗಳ ಬದಿಯಲ್ಲಿ ವ್ಯಾಪಾರಿ ಕೇಂದ್ರದವರು ತಮ್ಮ ಅಂಗಡಿ-ಮುಂಗಟ್ಟು ಎದುರು ಡಬ್ಟಾ ಅಂಗಡಿ ಸೇರಿದಂತೆ ಇತರೆ ಸಾಮಾನು ಇಡುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ನರು ರಸ್ತೆ ಮೇಲೆ ಸಂಚರಿಸುತ್ತಿರುವುದರಿಂದ ಸಾಕಷ್ಟು ಅಪಘಾತವಾಗಿವೆ. ಅಂಗಡಿ ಮಾಲೀಕರು ಹಾಗೂ ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಹಾಗೂ ಅಂಗಡಿ ಸರಕುಗಳನ್ನಿಡದೇ ಸುಗಮ ಸಂಚಾರಕ್ಕೆ ಸಹಕರಿಸಬೇಕು.
ವಿಲಾಸಪಾಟೀಲ, ಅಧ್ಯಕ್ಷರು, ನಗರಸಭೆ ಯಾದಗಿರಿನಗರದ ಗಾಂಧಿ ವೃತ್ತಹಾಗೂ ಮಾರ್ಕೆಟ್ ನಲ್ಲಿಪೊಲೀಸ್‌ಮತ್ತು ನಗರಸಭೆ ಎರಡೂ ಇಲಾಖೆಯವರು ಸೇರಿ ರಸ್ತೆ ಮೇಲೆ ಹಾಗೂ ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆಅಡ್ಡಿಯುಂಟುಮಾಡಿದ ಬೀದಿ ವ್ಯಾಪಾರಿಗಳಿಗೆ ಹಾಗೂ ಅತಿಕ್ರಮಣವಾಗಿ ಫುಟ್‌ಪಾತ್ ಮೇಲಿದ್ದಅಂಗಡಿ-ಮುಂಗಟ್ಟು ತೆರವುಗೊಳಿಸಲಾಗಿದೆ. ರಸ್ತೆಯ ಎರಡೂಬದಿ ಯಾವುದೇ ವಾಹನ ನಿಲ್ಲಿಸದಂತೆ ಎಚ್ಚರಿಕೆ ನೀಡುವ ಜೊತೆಗೆ ಕೆಲವೊಂದು ವಾಹನಗಳಿಗೆ ದಂಡಕೂಡ ವಿಧಿಸಲಾಗಿದೆ. ಗಾಂಧಿವೃತ್ತದ ಬಳಿ ಸಾಕಷ್ಟು ಖಾಲಿ ಜಾಗವಿದ್ದು ಅದನ್ನು ಬೀದಿ ವ್ಯಾಪಾರಿಗಳು ಬಳಸಿಕೊಳ್ಳದಂತೆ ಎಚ್ಚರಿಸಲಾಗಿದೆ. ಆಟೋಚಾಲಕರು ಆಟೋಗಳನ್ನುಆಟೋ ಸ್ಟ್ಯಾಂಡ್‌ನೊಳಗೆ ಪಾರ್ಕಿಂಗ್‌ಮಾಡುವಂತೆ ಸೂಚಿಸಲಾಗಿದೆ. -ಡಾ| ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
-ಮಹೇಶ-ಕಲಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.