![Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್](https://www.udayavani.com/wp-content/uploads/2024/12/mallya-415x247.jpg)
ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ ಫುಲೆ
Team Udayavani, Jan 23, 2019, 11:17 AM IST
![yad-3.jpg](https://www.udayavani.com/wp-content/uploads/2019/01/23/yad-3-620x295.jpg)
ಆಳಂದ: ಕೆಳವರ್ಗದ ಹೆಣ್ಣು ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಿದ ಹಾಗೂ ವೈಚಾರಿಕ ಸಾತ್ವಿಕ ಪ್ರಜ್ಞೆ ಮೂಡಿಸಿದ ಸ್ವಾಮಿ ವಿವೇಕಾನಂದ ಹಾಗೂ ಸಾವಿತ್ರಿಬಾಯಿ ಫುಲೆ ತತ್ವಾದರ್ಶ ಅಳವಡಿಸಿಕೊಂಡು ಆಚರಣೆ ತರಬೇಕು ಎಂದು ಮಾದನಹಿಪ್ಪರಗಾದ ಪದವಿ ಕಾಲೇಜಿನ ಸಹ ಪ್ರಾದ್ಯಾಪಕ ಡಾ| ಕೈಲಾಸಬಾಬು ಹೊಸಮನಿ ಹೇಳಿದರು.
ನಿಂಬರಗಾ ಗ್ರಾಮದ ದೇವನಾಂಪ್ರಿಯ ಕಲಾ ಪದವಿ ಮಹಾವಿದ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ 188ನೇ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಮಹಿಳೆಯರಿಗೆ ಸಮರ್ಪಕವಾದ ಶಿಕ್ಷಣದ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಫುಲೆಯವರು ಇತರ ಮಹಿಳೆಯರಿಗೆ ಶಿಕ್ಷಣ ಕಲಿಸಿದರು. ಸಮಾಜದಲ್ಲಿ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ, ಕೇಶಮಂಡನೆ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗಾಗಿ ಶಾಲೆ ತೆರೆದರು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಮಹಾದೇವಿ ಬಿಬ್ರಾಣಿ ಸಾವಿತ್ರಿಬಾಯಿ ಫುಲೆ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಡಾ| ಸಂಜೀವಕುಮಾರ ನಿರ್ಮಲಕರ್ ಮಾತನಾಡಿ, ಮನುಷ್ಯನ ಜೀವನ ಬಹಳ ವೈಶಿಷ್ಟವಾದುದ್ದು. ಕೆಟ್ಟ ಮನೋವಿಕೃತಿಗೆ ಒಳಗಾಗದೆ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಒಳ್ಳೆಯ ಶಿಕ್ಷಣ ಪಡೆದು ತಂದೆ-ತಾಯಿ, ಗುರುವಿನ ಹೆಸರು ತಂದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಎಸ್‌ಐ ರಾಚಪ್ಪ, ದೇವನಾಂಪ್ರಿಯಾ ಕಲಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಸಂತೋಷ ಹೂಗಾರ,
ವಿಶ್ವನಾಥ ಪಾಟೀಲ, ಪರಶುರಾಮ ಶಿಂಧೆ, ಶರಣಗೌಡ ಪಾಟೀಲ, ಮಂಗಲಾ, ಭಾಗಪ್ಪ ಸಿಂಗೆ ಉಪಸ್ಥಿತರಿದ್ದರು. ಬಸವರಾಜ ಸ್ವಾಗತಿಸಿದರು ಮತ್ತು ಮಲ್ಲಿನಾಥ ನಾಟೀಕರ ನಿರೂಪಿಸಿದರು.
ಟಾಪ್ ನ್ಯೂಸ್
![Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್](https://www.udayavani.com/wp-content/uploads/2024/12/mallya-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್](https://www.udayavani.com/wp-content/uploads/2024/12/mallya-150x89.jpg)
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
![Mangalore_Airport-NewTerminal](https://www.udayavani.com/wp-content/uploads/2024/12/Mangalore_Airport-NewTerminal-150x90.jpg)
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
![H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ](https://www.udayavani.com/wp-content/uploads/2024/12/VISA-150x84.jpg)
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
![BGV-CM-SS](https://www.udayavani.com/wp-content/uploads/2024/12/BGV-CM-SS-150x90.jpg)
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
![Frud](https://www.udayavani.com/wp-content/uploads/2024/12/Frud-1-150x90.jpg)
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.