ಘಂಟಿಗೆ ಕಲ್ಯಾಣ ಕರ್ನಾಟಕ ಕಲಾರತ್ನ ಪ್ರಶಸಿ
Team Udayavani, Jan 29, 2018, 5:48 PM IST
ಶಹಾಪುರ: ಗ್ರಾಮ ಎಂಬುವುದು ಒಂದು ಸಾಂಸ್ಥಿಕ ಸಂಸ್ಥೆ. ಮಾನವ ಸಂಸ್ಕೃತಿಯ ಪರಂಪರೆಯ ಎಲ್ಲ ಮೌಲ್ಯಗಳು ಗ್ರಾಮಗಳಲ್ಲಿ ಕಾಣುತ್ತೇವೆ. ಈ ಗ್ರಾಮಗಳು ಮಾನವ ಜನಾಂಗದ ತೊಟ್ಟಿಲುಗಳೆಂದು ಕರೆಯಲಾಗುತ್ತದೆ ಎಂದು ಕೃಷಿ ಮಹಾವಿದ್ಯಾಲಯ ಡೀನ್ ಡಾ| ಸುರೇಶ ಪಾಟೀಲ್ ಹೇಳಿದರು.
ಸಮೀಪದ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘ ಆಯೋಜಿಸಿದ್ದ “ಭಾವ ಸಂಗಮ’ ನಾಟಕ ಪ್ರದರ್ಶನ ಹಾಗೂ ಕಲ್ಯಾಣ ಕರ್ನಾಟಕ ಕಲಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧಕ, ಸಾಹಿತಿ ಡಿ.ಎನ್. ಅಕ್ಕಿ ಅವರು ರಚಿಸಿದ “ಭಾವ ಸಂಗಮ’ ನಾಟಕದಲ್ಲಿ ಹಳ್ಳಿಯ ಸೊಗಡು ಎಳೆ
ಎಳೆಯಾಗಿ ಚಿತ್ರಿಸಿದ್ದಾರೆ. ಇಡಿ ಹಳ್ಳಿ ಒಂದು ಕುಟುಂಬ ಎಂಬ ನಂಬಿಕೆಯ ಮೇಲೆ ಬೆಳೆದು ನಿಂತ ಸಮಾಜವಾಗಿದೆ.
ಆಧುನಿಕ ವ್ಯವಸ್ಥೆಯಲ್ಲಿ ಗ್ರಾಮ ಸಮಾಜದ ಎಲ್ಲ ಮಗ್ಗಲುಗಳಲ್ಲಿ ತುಂಬಾ ಪರಿವರ್ತನೆಗಳಾಗಿದ್ದರಿಂದ
ಗ್ರಾಮ ಸಮಾಜದಲ್ಲಿ ವಿವಿಧ ಜಾತಿ, ಜನಾಂಗ, ಧರ್ಮಗಳ ನಡುವೆ ಇರುವ ಭಾವನಾತ್ಮಕ ಸಂಬಂಧ ಕಡಿಮೆಯಾಗಿ ಆರ್ಥಿಕ ದೃಷ್ಟಿಕೋನ ಬೆಳೆದಿರುವುದು ಕಾಣಬಹುದು.
ಇಂತಹ ಗ್ರಾಮ ಸಮಾಜದ ಸಮಗ್ರ ಚಿತ್ರಣವನ್ನು ಸಾಹಿತಿ ಹಾಗೂ ಸಂಶೋಧಕ ಡಿ.ಎನ್. ಅಕ್ಕಿಯವರು ಅರ್ಥಪೂರ್ಣವಾಗಿ ರಚಿಸಿದ್ದಾರೆ ಎಂದರು. ಕಲ್ಯಾಣ ಕರ್ನಾಟಕ ಕಲಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ
ಹಿರಿಯ ರಂಗಕರ್ಮಿ ಶಂಕ್ರಯ್ಯ ಆರ್. ಘಂಟಿ, ಕಲೆ, ಸಾಹಿತ್ಯ, ಸಂಗೀತ, ನಾಟಕ ಮನುಷ್ಯನಿಗೆ ಉತ್ತಮ ಸಂಸ್ಕಾರ ನೀಡಿ ಒಳ್ಳೆಯ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಹಿರಿಯ ರಂಗಕರ್ಮಿ ಸಿದ್ರಾಮ ಉಪ್ಪಿನ್ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯ ಪರಂಪರೆಯನ್ನು ಪ್ರತಿಬಿಂಬಿಸುವ ನಾಟಕ ಕಲೆಯು ಸಾಮೂಹಿಕ ಸಾಮಾಜಿಕ ಕಲೆಯಾಗಿ ಮಹತ್ವವನ್ನು ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಶರಣು ಬಿ. ಗದ್ದುಗೆ ಹಾಗೂ ಸಾಹಿತಿ ಡಿ.ಎನ್. ಅಕ್ಕಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಬಸವಯ್ಯ ಶರಣರು, ದೋರನಹಳ್ಳಿ ಹೀರೆಮಠದ ವೀರಮಹಾಂತ ಶಿವಾಚಾರ್ಯರು, ಸಿದ್ಧಾಶ್ರಮ ರಮಾನಂದ ಅವಧೂತರು, ದೋರನಹಳ್ಳಿಯ ಮಹಿಬೂಬ ಪಾಶಾ ಖಾದ್ರಿ, ಸಾಹಿತಿ
ಚಂದ್ರಕಾಂತ ಕರದಳ್ಳಿ, ರಂಗಕರ್ಮಿ ಎಲ್.ಬಿ.ಕೆ. ಆಲ್ದಾಳ, ಗುರುಬಸಯ್ಯ ಗದ್ದುಗೆ, ನಾಟಕ ನಿರ್ದೇಶಕ ಅಂಬ್ಲಿಪ್ಪ
ಕೊಲ್ಲೂರ, ರಂಗ ಕಲಾವಿದ ವಿನೋದ ಹೀರೆಮಠ, ಬೂದಯ್ಯ ಹೀರೆಮಠ, ವಸ್ತ್ರ ವಿನ್ಯಾಸಕ ಗೌಡಪ್ಪಗೌಡ ಹುಲಕಲ್ ಇದ್ದರು.
ಪುಷ್ಪಾ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘದ ಅಧ್ಯಕ್ಷ ರವಿ ಬಾಲಕೃಷ್ಣ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆನಂದ ಜೋಷಿ ಹಾಗೂ ಮಹೇಶ ಪತ್ತಾರ ನಿರೂಪಿಸಿದರು. ದೀಪಾ ನಾಯಕ ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.