ಸರಕಾರದ ಪ್ಯಾಕೇಜ್ ಗಳು, ಪರಿಹಾರ ಘೋಷಣೆಗೆ ಮಾತ್ರನಾ ಎಂದ ಶಾಸಕ ಶರಣಬಸ್ಸಪ್ಪ ದರ್ಶನಾಪುರ
Team Udayavani, May 16, 2020, 4:00 PM IST
ಯಾದಗಿರಿ: ಲಾಕ್ ಡೌನ್ ಹಿನ್ನೆಲೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದ್ದು ಜಿಲ್ಲೆಯ ಎಷ್ಟು ಜನರಿಗೆ ಲಾಭ ಸಿಕ್ಕಿದೆ? ಪಟ್ಟಿ ಏನಾದರೂ ಇದೆಯಾ ಎಂದು ಶಹಾಪುರ ಶಾಸಕ ಶರಣಬಸ್ಸಪ್ಪ ದರ್ಶನಾಪುರ ಸಭೆಯಲ್ಲಿ ಪ್ರಶ್ನಿಸಿದರು
ಯಾದಗಿರಿ ಜಿ.ಪಂ. ಸಭಾಂಗಣದಲ್ಲಿ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪರಿಹಾರ ಘೋಷಣೆ ಕೇವಲ ಟಿವಿಯಲ್ಲಿ ನೋಡಿ ಖುಷಿ ಪಡುವಂತಾಗಿದೆ, ಎಷ್ಟು ಕ್ಷೌರಿಕರು, ತೋಟಗಾರಿಗೆ ಬೆಳೆದ ರೈತರು, ಟ್ಯಾಕ್ಸಿ ಚಾಲಕರಿಗೆ ಲಾಭವಾಗಲಿದೆ ಎಂದರು.
ಆಡಳಿತ ಪಕ್ಷದ ಶಾಸಕ ನರಸಿಂಹ ನಾಯಕ್ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಜಿಲ್ಲೆಯಲ್ಲಿ ಕಾರ್ಮಿಕ ಅಧಿಕಾರಿಗಳೇ ಇಲ್ಲ. ಕನಿಷ್ಟ ತಾಲೂಕಿಗೆ ಒಬ್ಬರಾದರು ಇರಬೇಕು ಎಂದರು. ಇದರಿಂದ ಫಲಾನುಭವಿಗಳು ಲಾಭ ಪಡೆಯಲು ಕಷ್ಟವಾಗುತ್ತಿದೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತ ಪರಿಸ್ಥಿತಿಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.
ಸರ್ಕಾರದ ಮಟ್ಟದಲ್ಲಿ ಜಿಲ್ಲೆಯ ಸಮಸ್ಯೆಯ ಕುರಿತು ಬೆಳಕು ಚೆಲ್ಲಿ, ತಾನು ಆಡಳಿತ ಪಕ್ಷದ ಶಾಸಕನಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರಿವುದು ತನಗೂ ಇಷ್ಟವಿಲ್ಲ ಎಂದು ಸಚಿವರೆದುರು ಬೇಸರದ ಮಾತುಗಳನ್ನಾಡಿದರು.
ಬೇರೆ ಜಿಲ್ಲೆಯಿಂದ ಕಾರ್ಮಿಕರನ್ನು ಕರೆತರಲು ಸರ್ಕಾರ ಉಚಿತ ಬಸ್ ವ್ಯವಸ್ಥೆ ಮಾಡಿತ್ತು ಆದರೆ ಯಾದಗಿರಿ ಜಿಲ್ಲೆಯಲ್ಲಿ ಕೇವಲ 15 ಬಸ್ ಉಚಿತ ಸೇವೆ ನೀಡಿದ್ದು 18 ಬಸ್ ಗಳಿಗೆ ತಾನು ಸ್ವತಾ ದುಡ್ಡು ಪಾವತಿಸಿ ಕಾರ್ಮಿಕರನ್ನು ಕರೆಯಿಸಿದ್ದೇನೆ ಎಂದರು.
ಮೊದಲೇ ಜನರ ಬಳಿ ದುಡ್ಡಿಲ್ಲ ಈ ಸಂದರ್ಭದಲ್ಲಿ ದುಪ್ಪಟ್ಟು ದುಡ್ಡು ಪಡೆಯುವುದು ಸರಿಯಲ್ಲ ಸಾರಿಗೆ ಇಲಾಖೆ ಮಾನವೀಯತೆ ತೋರಬೇಕು,ಅದು ಸರ್ಕಾರದ ಅಂಗ ಇದರಿಂದ ಸರ್ಕಾರಕ್ಕು ಒಳ್ಳೆಯ ಹೆಸರು ಬರಲ್ಲ ಎಂದರು.
ವಿಜಯಪುರದ ಇಂಡಿಯಿಂದ ಸುರಪುರಕ್ಕೆ ಉಚಿತ ಬಸ್ ಬರಲು ತಯಾರಿರಲಿಲ್ಲ .ತಾನು ಸ್ವತಃ 18 ಸಾವಿರ ಪಾವತಿಸಿದ ಬಳಿಕ ಬಸ್ ಬಿಡಲಾಯಿತು ಎಂದು ಸಚಿವರ ಗಮನಕ್ಕೆ ತಂದರು
ಇಂತಹದ್ದರಿಂದ ಸರ್ಕಾರಗಳು ಘೋಷಿಸಿರುವ ನೆರವು ಪ್ಯಾಕೇಜ್ ಗಳು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ ಎಂದು ಸಚಿವರೆದುರು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, 363 ಉಚಿತ ಬಸ್ ಗಳ ಮೂಲಕ ಬೆಂಗಳೂರಿನಿಂದ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯಲ್ಲಿ 72 ಉಚಿತ ಬಸ್ ಸಂಚಾರವಾಗಿದೆ ಹಾಗೂ ಕಲಬುರಗಿಯಿಂದ 17 ಬಸ್ ಗಳು ಜಿಲ್ಲೆಗೆ ಬಂದಿದ್ದು ಸರ್ಕಾರದ ನಿರ್ದೇಶನದಂತೆ ಉಚಿತ ಸಾರಿಗೆ ವ್ಯವಸ್ಥೆ ಯಾಗಿದೆ ಎಂದು ಸ್ಪಷ್ಟನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.