ಗ್ರಾಪಂ ಚುನಾವಣೆ: ಶಾಂತಿಯುತ ಮತದಾನ
Team Udayavani, Dec 23, 2020, 7:14 PM IST
ಯಾದಗಿರಿ: ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲೂಕಿನ ಗ್ರಾಪಂಗಳಿಗೆ ಮಂಗಳವಾರ ಮೊದಲಹಂತದ ಚುನಾವಣಾ ಮತದಾನವು ಶಾಂತಿಯುತವಾಗಿ ನಡೆಯಿತು.
ಶಹಾಪುರ ತಾಲೂಕಿನ 22 , ಸುರಪುರ ತಾಲೂಕಿನ 20 ಹಾಗೂ ಹುಣಸಗಿ 17 ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆದಮತದಾನದಲ್ಲಿ ಗ್ರಾಮಸ್ಥರು ತಮ್ಮ ಹಕ್ಕುನ್ನು ಚಲಾಯಿಸಿದರು. ಸುಮಾರು 73.85 ರಷ್ಟು ಮತದಾನವಾಗಿದೆ. ಕೋವಿಡ್ ಹಿನ್ನೆಲೆ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸ್ಯಾಮಿಟೈಸರ್ ಬಳಸಿ ಸಾಮಾಜಿಕ ಅಂತರದೊಂದಿಗೆ ಮತದಾನ ನಡೆಯಿತು.
ಬೆಳಗ್ಗೆ ಮಂದಗತಿಯಲ್ಲಿ ಸಾಗಿತ ಮತದಾನ ಸಮಯ ಏರುತ್ತಲೇ ಶೇಕಡಾವಾರು ಮತದಾನವೂ ಹೆಚ್ಚಾಳವಾಗುತ್ತಿರುವುದು ಕಂಡು ಬಂತು. ಬೆಳಗ್ಗೆ 7ರಿಂದ 9ರವರೆಗೆ ಸುರಪುರ ತಾಲೂಕು-ಶೇ.10.1, ಶಹಾಪುರತಾಲೂಕು-ಶೇ.8.92 ಹಾಗೂ ಹುಣಸಗಿ ತಾಲೂಕಿನಲ್ಲಿ ಶೇ.9.6 ದಾಖಲಾಗಿತ್ತು.
ಬೆಳಗ್ಗೆ 11 ಗಂಟೆಯ ವೇಳೆಗೆ ಸುರಪುರ-ಶೇ.29.35, ಶಹಾಪುರ-ಶೇ.27.3 ಹಾಗೂ ಹುಣಸಗಿ ತಾಲೂಕು ವ್ಯಾಪ್ತಿಯಲ್ಲಿ ಶೇ.23.06 ಹಕ್ಕು ಚಲಾವಣೆಗೊಂಡು ಮೂರು ತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ ಶೇ. 26.57 ಮತದಾನವಾಗಿತ್ತು.
ಇನ್ನು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಸುರಪುರ-ಶೇ.49.87, ಶಹಾಪುರ-ಶೇ.47.08 ಹಾಗೂಹುಣಸಗಿ ತಾಲೂಕಿನಲ್ಲಿ ಶೇ.28.28 ಸೇರಿದಂತೆ ಒಟ್ಟಾರೆ ಮೂರು ತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ ಶೇ. 41.75 ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುರಪುರ ಶೇ.58.91, ಶಹಾಪುರ ಶೇ.44.19 ಹಾಗೂಹುಣಸಗಿ ತಾಲೂಕು – ಶೇ.61.37 ಒಟ್ಟಾರೆ ಮೂರುತಾಲೂಕುಗಳ ಗ್ರಾಪಂಗಳ ವ್ಯಾಪ್ತಿಯಲ್ಲಿ 54.83 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 1 ಸಾವಿರ ಸ್ಥಾನಗಳಿಗೆ 2444 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.
ಮತಗಟ್ಟೆ ಕೇಂದ್ರಕ್ಕೆ ಡಿಸಿ ಭೇಟಿ: ಶಹಾಪುರ ತಾಲೂಕಿನ ಮದ್ದರಕಿ, ಮೂಡಬುಳ ಗ್ರಾಪಂಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ಡಿಸಿ ಡಾ.ರಾಗಪ್ರಿಯ ಭೇಟಿ ನೀಡಿ ಮತದಾನದ ಪ್ರಕ್ರಿಯೆ ಪರಿಶೀಲಿಸಿದರು. ಶಹಾಪುರ ತಹಶೀಲ್ದಾರ ಮಹಿಬೂಬಿ, ನೋಡಲ್ ಅಧಿಕಾರಿ ರಾಜು ಸೇರಿದಂತೆ ಹಲವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.