ಗುರುಮಠಕಲ್ ಪುರಸಭೆ ಗದ್ದುಗೆ ಯಾರಿಗೆ?
Team Udayavani, Nov 2, 2020, 4:49 PM IST
ಯಾದಗಿರಿ: ಕಾಂಗ್ರೆಸ್ ಭದ್ರಕೋಟೆಯನ್ನುಛಿದ್ರಗೊಳಿಸಿದ ಗುರುಮಠಕಲ್ ಮತಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದಿರುವ ಜೆಡಿಎಸ್‌ಗೆ ಗುರುಮಠಕಲ್‌ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯೂವಶವಾದಿತೇ?. ಇದೀಗ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಗದ್ದುಗೆ ಹಿಡಿಯುವುದು ಪ್ರತಿಷ್ಠೆಯ ಮಾತಾಗಿದೆ.
ಗುರುಮಠಕಲ್ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನ.2ರಂದು ದಿನಾಂಕ ನಿಗದಿಯಾಗಿದ್ದು, ಕಾಂಗ್ರೆಸ್‌ನ ಮೂವರು ಸದಸ್ಯರು ಕೆಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇಅಜ್ಞಾತವಾಸದಲ್ಲಿದ್ದು, ರಾಜಕೀಯವಾಗಿ ಸಾಕಷ್ಟು ಸಂಚಲನ ಮೂಡಿಸಿದೆ.
23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್ 12 ಸದಸ್ಯರ ಬಲ ಹೊಂದಿದ್ದರೆ, ಜೆಡಿಎಸ್ 8, ಬಿಜೆಪಿ 2 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.ಪ್ರಸ್ತುತ ದಳಪತಿಗಳ ಬಳಿ 8 ಸದಸ್ಯರು ಮತ್ತು ಶಾಸಕರ ಮತ ಸೇರಿ 9ಕ್ಕೆ ಏರಿಕೆಯಾಗಲಿದ್ದು, ಪ್ರಮುಖವಾಗಿ ಕಾಂಗ್ರೆಸ್ 12 ಸದಸ್ಯರಲ್ಲಿ ಅಶೋಕ ಕಲಾಲ್, ಆಶನ್ನ ಬುದ್ಧ ಹಾಗೂ ಪವಿತ್ರ ಮನ್ನೆ ಅಜ್ಞಾತ ಸ್ಥಳಕ್ಕೆ ತೆರಳಿರುವುದು ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈಗಾಗಲೇ ಕಾಂಗ್ರೆಸ್ ಎಲ್ಲಾ ಸದಸ್ಯರಿಗೆ ವಿಪ್ ಜಾರಿಗೊಳಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆಯೂ ನೀಡಿದೆ. ರಾಜಕೀಯದಲ್ಲಿ ಯಾವಾಗ ಏನಾಗುತ್ತದೆ ಎನ್ನುವುದು ಹೇಳಲಾಗಲ್ಲ ಎನ್ನುವಂತೆ ಒಂದು ವೇಳೆ ಮೂವರು ಸದಸ್ಯರು ಜೆಡಿಎಸ್‌ಗೆ ಬೆಂಬಲಿಸಿದರೆ ಅಧ್ಯಕ್ಷ ಗಾದಿಗೆ ಬೇಕಿರುವ 12ರ ಬಲ ಸಿಕ್ಕು ಗದ್ದುಗೆ ತನ್ನದಾಗಿಸುವ ತಂತ್ರಗಾರಿಕೆ ಹೂಡಲಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಸದ್ದು ಮಾಡಿದೆ.
ಪಕ್ಷೇತರ ಒಬ್ಬ ಸದಸ್ಯರು ಈಗಾಗಲೇ ತೆನೆಹೊತ್ತ ಮಹಿಳೆಯತ್ತ ವಾಲಿರುವ ಮಾಹಿತಿ ಲಭ್ಯವಾಗಿದ್ದು,ಯಾದಗಿರಿ ನಗರಸಭೆಯಲ್ಲಿ ಬಿಜೆಪಿಗೆ ಜೆಡಿಎಸ್‌ನ ಇಬ್ಬರು ಸದಸ್ಯರು ಬಾಹ್ಯ ಬೆಂಬಲ ನೀಡಿದಂತೆ ಗುರುಮಠಕಲ್‌ನಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎನ್ನುವ ಅಂಶವೂ ತೀವ್ರ ಚರ್ಚೆಯಲ್ಲಿದೆ. ಹೀಗಾದಲ್ಲಿ ಜೆಡಿಎಸ್ ಅಧಿಕಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಾಂಗ್ರೆಸ್, ಜೆಡಿಎಸ್ ನಮ್ಮ ಸಿದ್ಧಾಂತದವಿರೋಧಿ ಪಕ್ಷಗಳು ಹಾಗಾಗಿ ಗುರುಮಠಕಲ್‌ನಲ್ಲಿ ಪಕ್ಷದ ಇಬ್ಬರು ಸದಸ್ಯರು ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಯಾದಗಿರಿ ಜೆಡಿಎಸ್‌ನವರಿಗೆ ನಾವು ಬೆಂಬಲ ಕೇಳಿರಲಿಲ್ಲಹಾಗಾಗಿ ಗುರುಮಠಕಲ್‌ನಲ್ಲಿ ಜೆಡಿಎಸ್‌ಗೆ ಬಿಜೆಪಿಯ ಬೆಂಬಲ ನೀಡಲ್ಲ. -ಡಾ.ಶರಣ ಭೂಪಾಲರೆಡ್ಡಿ ನಾಯ್ಕಲ್, ಬಿಜೆಪಿ ಜಿಲ್ಲಾಧ್ಯಕ್ಷರು, ಯಾದಗಿರಿ.
ಪಕ್ಷದ ಮೂವರು ಸದಸ್ಯರು ಸಂಪರ್ಕಕ್ಕೆ ಸಿಕ್ಕಿಲ್ಲ. ಈಗಾಗಲೇ ವಿಪ್ ಜಾರಿಗೊಳಿಸಲಾಗಿದೆ. ನಮ್ಮ ಅಧಿ ಕೃತ ಅಭ್ಯರ್ಥಿ ಮೈನೋದ್ದೀನ್ ಪರ ಮತ ಚಲಾಯಿಸಲು ಸೂಚಿಸಲಾಗಿದೆ. ಆದೇಶ ಉಲ್ಲಂಘಿಸಿ ವಿರೋಧ ಮತ ಚಲಾಯಿಸಿದಲ್ಲಿ ಅಥವಾ ದೂರ ಉಳಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಮಹಿಪಾಲರೆಡ್ಡಿ ಹತ್ತಿಕುಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.
-ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು
Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.