ಗುರುಭವನ ಪುಂಡ ಪೋಕರಿಗಳ ತಾಣ!
Team Udayavani, Jul 9, 2018, 1:49 PM IST
ಯಾದಗಿರಿ: ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರು ವಾಸಿಸಲೆಂದು ಶಹಾಪುರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ “ಗುರುಭವನ’ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2011-12ನೇ ಸಾಲಿನಲ್ಲಿ 47ಲಕ್ಷ ರೂ. ವೆಚ್ಚದಲ್ಲಿ 8 ಕೋಣೆಗಳುಳ್ಳ ಎರಡು ಅಂತಸ್ತಿನ ಸುಸಜ್ಜಿತ ವಸತಿ ಕಟ್ಟಡ ನಿರ್ಮಿಸಿರುವ ಈ ಗುರುಭವನ ಜಿಲ್ಲಾ
ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿದೆ.
ಇಲ್ಲಿ ಪಾಠ ಮಾಡುವ ಶಿಕ್ಷಕರಿಗೆ ತೊಂದರೆ ಆಗದಿರಲಿ ಎನ್ನುವ ಉದ್ದೇಶದಿಂದಲೇ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಶಿಕ್ಷಕರು ಈ ವಸತಿ ಗೃಹಗಳಲ್ಲಿ ವಾಸ ಮಾಡದೇ ಇರುವುದರಿಂದ ಇದು ಅನೈತಿಕ ಕೆಲಸಗಳಿಗೆ ಅನುಕೂಲವಾದಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕಟ್ಟಡ ನಿರ್ಮಾಣ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕಟ್ಟಡವನ್ನು ತಮ್ಮ ವ್ಯಾಪ್ತಿಗೆ ಪಡೆದು ಕ್ಲಸ್ಟರ್ ಮಟ್ಟದಲ್ಲಿ ಶಿಕ್ಷಕರ ಸಭೆ ಮಾಡಿದ್ದರು. ಕೊಠಡಿ ಹಂಚಿಕೆಯಲ್ಲಿ ಮೊದಲು ಪೈಪೋಟಿ ಶುರುವಾಗಿತ್ತು. ನಂತರ ಲಾಟರಿ ಚೀಟಿ ಮೂಲಕ 8 ಶಿಕ್ಷಕರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಇಲ್ಲಿ ಯಾವೊಬ್ಬ
ಶಿಕ್ಷಕರೂ ಪ್ರಸ್ತುತ ವಾಸವಾಗಿಲ್ಲ.
ಕಟ್ಟಡ ನಿರ್ಮಾಣವಾಗಿ ಸುಮಾರು ಆರು ವರ್ಷಗಳೇ ಗತಿಸಿದರೂ ನಿರುಪಯುಕ್ತವಾಗಿದೆ. ಇಲ್ಲಿ ವಿದ್ಯುತ್, ನೀರು ಯಾವುದೂ ಇಲ್ಲ. ಕಿಡಿಗೇಡಿಗಳು ಕಿಟಕಿ ಮತ್ತು ಬಾಗಿಲುಗಳನ್ನು ಕದ್ದಿದ್ದಾರೆ. ಇದಷ್ಟೇ ಅಲ್ಲ ಚಟ್ನಳ್ಳಿ ಮತ್ತು ತಡಿಬಿಡಿಯಲ್ಲಿರುವ ಶಿಕ್ಷಕರ ವಸತಿ ಗೃಹಗಳು ನಿರುಪಯುಕ್ತವಾಗಿ ಖಾಲಿ ಬಿದ್ದಿವೆ.
ಶಿಕ್ಷಣ ಕ್ಷೇತ್ರವನ್ನು ಸುಧಾರಿಸಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಸೌಕರ್ಯ ಒದಗಿಸಿದರೂ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.
ಗುರುಭವನ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
ಗಡ್ಡೆಲಿಂಗ, ಕನಕ ಯುವ ಸೇನೆ ಅಧ್ಯಕ್ಷ, ಬೆಂಡೆಬೆಂಬಳಿ
ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಭವ್ಯ ಕಟ್ಟಡ ಉಪಯೋಗಕ್ಕೆ ಬಾರದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಶಿಕ್ಷಕರು ವಾಸಿಸಲು ಸಿದ್ಧರಿಲ್ಲದಿದ್ದರೆ ಬೇರೆ ಕಚೇರಿ ಉಪಯೋಗಕ್ಕಾದರೂ ಬಳಸಿಕೊಳ್ಳಬೇಕು.
ಲಿಂಗಣ್ಣ ಜಡಿ, ಹೈ.ಕ ತಾಲೂಕು ಯುವ ಸಮಿತಿ ಅಧ್ಯಕ್ಷ, ವಡಗೇರಾ
ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ
Lockdown Days: ಲಾಕ್‌ಡೌನ್ ಎಂಬ ದಪ್ಪಕ್ಷರದಲ್ಲಿ ಬರೆದ ಇತಿಹಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.