ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ
Team Udayavani, May 8, 2018, 3:47 PM IST
ಶಹಾಪುರ: ಕಳೆದ ಎರಡು ದಶಕಗಳಿಂದ ಶಹಾಪುರ ಮತಕ್ಷೇತ್ರದಲ್ಲಿ ಜನಾಶೀರ್ವಾದಿಂದ ಶಾಸಕನಾಗಿ ಮಂತ್ರಿಯಾಗಿ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮುಖಾಂತರ ಕ್ಷೇತ್ರದಲ್ಲಿ ಹಲವು ನೂತನ ಯೋಜನೆಗಳ ಅನುಷ್ಠಾನಗೊಳಿಸುವ ಮೂಲಕ ಗಣನೀಯ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಬೈರಡ್ಡಿ ಸಭಾಂಗಣದಲ್ಲಿ ನಗರದ ವರ್ತಕರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೆ.ಎಚ್. ಪಾಟೀಲ್ ಮುಖ್ಯಮಂತ್ರಿ ಆಗಿದ್ದಾಗ ನಾನು ವಿದ್ಯುತ್ ಸಚಿವನಾಗಿದ್ದೆ, ಆಗ ಈ ಭಾಗದ ಹಲವಡೆ ವಿದ್ಯುತ್ ಸ್ಟೇಷನ್‌ಗಳನ್ನು ನಿರ್ಮಿಸುವ ಮೂಲಕ ವಿದ್ಯುತ್ ಕೊರತೆ ನೀಗಿಸಲು ಕ್ರಮ ಕೈಗೊಂಡಿದ್ದೇನೆ ಎಂದು ನೆನಪಿಸಿಕೊಂಡರು.
ಕ್ಷೇತ್ರದಲ್ಲಿ ನೂತನ ಡಿಗ್ರಿ ಕಾಲೇಜು, ಮೈದಾನ ಮತ್ತು ಫೈರ್ ಸ್ಟೇಷನ್, ಚತುಷ್ಪತ ಹೆದ್ದಾರಿ ಸೇರಿದಂತೆ ವಿವಿಧ ವಸತಿ ನಿಲಯಗಳು ನಿರ್ಮಾಣ ಮಾಡಲಾಗಿದೆ. ಮತ್ತ ಹಳೇ ಸರ್ಕಾರಿ ಆಸ್ಪತ್ರೆ ಜಾಗದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಹೀಗೆ ಹಲವಾರು ಮಹತ್ವದ ಕೆಲಸಗಳನ್ನು ಕೈಗೊಂಡಿದ್ದೇನೆ ಎಂದರು.
ನಂತರ ನಡೆದ ಸಂವಾದದಲ್ಲಿ ಶ್ರೀನಿವಾಸ ಎಂಬುವರು ಉದ್ಯಾನವನ ಸಮೇತ ಈಜುಕೊಳ ಪಟ್ಟಣಕ್ಕೆ ಅಗತ್ಯವಿದೆ ಎಂದು ಬೇಡಿಕೆ ಇಟ್ಟರು. ಆಗ ಈಜುಕೊಳ ಸರ್ಕಾರ ವತಿಯಿಂದ ನಿರ್ಮಾಣ ಮಾಡಬಹುದು. ಆದರೆ ಅದರ ನಿರ್ವಹಣೆ ಕಷ್ಟ ವಿದೆ. ಕಾರಣ ನೀವೆ ಕ್ಲಬ್ ರಚಿಸಿಕೊಂಡು ಆ ಕೆಲಸ ಮಾಡಿದ್ದಲ್ಲಿ ಸೂಕ್ತವೆನಿಸಲಿದೆ ಎಂಬ ಉತ್ತರವನ್ನಿತ್ತರು. ಅದೇ ರೀತಿ ನಗರಸಭೆ ಉಪಾಧ್ಯಕ್ಷ ಡಾ| ಬಸವರಾಜ ಇಜೇರಿ ಕೈಗಾರಿಕೆ ನಿವೇಶನ ಕುರಿತು ಪ್ರಶ್ನಿಸಿದರು. ಈಗಾಗಲೇ ಕೈಗಾರಿಕೆ ಪ್ರದೇಶದಲ್ಲಿ ಸಾಕಷ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನು ಹೆಚ್ಚಿನ ಕೈಗಾರಿಕೆ ಪ್ರದೇಶಾಭಿವೃದ್ಧಿಗೊಳಿಸಲು ಪ್ರಯತ್ನಿಸುವೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್, ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿದರು. ಮುಖಂಡರಾದ ಬಸವರಾಜ ಹಿರೇಮಠ, ಕೆಂಚಪ್ಪ ನಗನೂರ, ಸಿದ್ಲಿಂಗಪ್ಪ ಆನೇಗುಂದಿ, ರತ್ನಾಕರ ಶೆಟ್ಟಿ ಇದ್ದರು.
ತರಕಾರಿ ಮಾರುಕಟ್ಟೆ ಅವ್ಯವಸ್ಥೆ ಪ್ರಸ್ತಾಪ
ನಗರದ ತರಕಾರಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಕುರಿತು ಪ್ರಶ್ನಿಸಿದ ವರ್ತಕ ಶ್ರೀನಿವಾಸ, ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ ಮೇಲೆ ಕುಳಿತು ತರಕಾರಿ ಮಾರಾಟ ಮಾಡುವುದರಿಂದ ಕಿರಾಣಿ ಇತರೆ ಬಟ್ಟೆ ಅಂಗಡಿ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆ ಆಗಲಿದೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ದರ್ಶನಾಪುರ, ಸಾಕಷ್ಟು ಸಲ ತರಕಾರಿ ವ್ಯಾಪಾರಸ್ಥರಿಗೆ ಮೇಲಗಡೆ ಕುಳಿತು ವ್ಯಾಪಾರ ಮಾಡುವಂತೆ ತಿಳಿಸಲಾಗಿದೆ. ಪೊಲೀಸರ ಮೂಲಕವು ಪ್ರಯತ್ನಿಸಲಾಯಿತು. ಆದಾಗ್ಯು ಹಲವಾರು ಜನ ಕೆಲಗಡೆ ಕುಳಿತು ಮಾರಾಟ ಮಾಡುತ್ತಾರೆ. ಹೀಗಾಗಿ ಅದಕ್ಕೆ ಬೇರೆ ವ್ಯವಸ್ಥೆ ಮಾಡೋಣ. ನೀವೆ ಏನು ಮಾಡಹುದು ಎಂದು ತಿಳಿಸಿರಿ, ಆ ಕುರಿತು ಯೋಚಿಸಿ ಕಾರ್ಯರೂಪಕ್ಕೆ ತಂದು ಸುತ್ತಲೂ ಇರುವ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡೋಣ ಎಂದು ಸಮಜಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.