ಕಾನೂನು ಅರಿತರೆ ಅಪರಾಧ ಕಡಿಮೆ
Team Udayavani, Dec 3, 2018, 3:03 PM IST
ಸುರಪುರ: ಸಂವಿಧಾನವನ್ನು ಅಪಾರ್ಥ ಮಾಡಿಕೊಳ್ಳುವ ಅಥವಾ ಅರ್ಥ ಮಾಡಿಕೊಂಡರು ಅದರಂತೆ ನಡೆದುಕೊಳ್ಳದೆ ತಮ್ಮ ಅಸಹನೆ ವ್ಯಕ್ತಪಡಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಜನರಿಗೆ ಸರಳವಾಗಿ ಕನಿಷ್ಟ ಕಾನೂನಿನ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಕಳೆದ ಕೆಲ ವರ್ಷಗಳಿಂದ ಈ ಸಾಕ್ಷರತಾ ಜಾಥಾ ಸಂಚಾರ ಜಾರಿಗೆ ತಂದಿದೆ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಡಿ. ನಾಗರಾಜೇಗೌಡ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಜಾಥಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಕ್ಷರತಾ ಜಾಥಾ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಅವರ ಮನೆ ಬಾಗಿಲಕ್ಕೆ ತೆರಳಿ ಕಾನೂನು ಅರಿವು ನೆರವು ಕುರಿತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಪರಾಧಗಳ ಸಂಖ್ಯೆ ಕಡಿಮೆ ಮಾಡಬೇಕು ಎನ್ನುವುದೆ ನ್ಯಾಯಾಂಗ ಇಲಾಖೆ ಉದ್ದೇಶ ಇದೆ. ಪ್ರಸ್ತುತ ದಿನಗಳಲ್ಲಿ ಕಾನೂನು ಪ್ರತಿಯೊಬ್ಬರ ಅಂಗವಾಗಿದೆ. ಪ್ರತಿ ಹೆಜ್ಜೆ ಹೆಜ್ಜೆಗೂ ನಮ್ಮನ್ನು ನಿರ್ಭಂದಿಸುತ್ತದೆ. ಪ್ರತಿ ಸಮಸ್ಯೆಗೂ ಕಾನೂನಲ್ಲಿ ಪರಿಹಾರವಿದೆ. ಆದ್ದರಿಂದ ಪ್ರತಿಯೊಬ್ಬರು ಕಾನೂನು ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದರು.
ಸಿವಿಲ್ ನ್ಯಾಯಾಧೀಶ ವಿನೋದ ಭಾಳನಾಯ್ಕ ಮಾತನಾಡಿ, ಕಾನೂನು ಅರಿವು ಇರದ ಅನಕ್ಷರಸ್ಥರಿಗೆ ಕಾನೂನಿನ ಕನಿಷ್ಟ ಅರಿವು ಮೂಡಿಸುವುದು ಮತ್ತು ನೆರವು ಪಡೆದುಕೊಳ್ಳುವ ವಿಧಾನ ತಿಳಿಸುವಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ. ಆದ್ದರಿಂದ ವಕೀಲರು ಮತ್ತು ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ನಮ್ಮೊಂದಿಗೆ ಇದ್ದು, ಸಾಕ್ಷರತಾ ರಥ ಯಾತ್ರೆ ಯಶಸ್ವಿಗೆ ಸಹಕರಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಸುರೇಶ ಅಂಕಲಗಿ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ, ವಕೀಲರ ಸಂಘದ ಅಧ್ಯಕ್ಷ ನಂದನಗೌಡ ಪಾಟೀಲ, ಉದಯಸಿಂಗ, ದೇವಿಂದ್ರಪ್ಪ ಭೇವಿನಕಟ್ಟಿ, ಮಹ್ಮದ ಹುಸೇನ್, ಎಸ್.ಜಿ.ಆರ್. ಬನ್ನಾಳ, ವ್ಯಾಸರಾಜ ಮನೋಹರ ಕುಂಟೋಜಿ, ಅಪ್ಪಣ್ಣ ಗಾಯಕವಾಡ, ಶಿವಾನಂದ ಅವಂಟಿ, ಮಂಜುನಾಥ ಹುದ್ದಾರ, ಯಲ್ಲಪ್ಪ ಹುಲಕಲ, ವೆಂಕಟೇಶ ನಾಯಕ, ಛಾಯಾ ಕುಂಟೋಜಿ, ಆದಪ್ಪ ಹೊಸ್ಮನಿ, ಮಂಜುನಾಥ ಗುಡುಗುಂಟಿ ಇದ್ದರು.
ಬೆಳಗ್ಗೆ 9:00 ಗಂಟೆಗೆ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಡಿ. ನಾಗರಾಜೇಗೌಡ, ಸಿವಿಲ್ ನ್ಯಾಯಾಧೀಶ ವಿನೋದ ಬಾಳನಾಯ್ಕ. ಹೆಚ್ಚುವರಿ ನ್ಯಾಯಾಧೀಶ ಬಿ.ಎನ್. ಅಮರನಾಥ, ವಕೀಲರ ಸಂಘದ ಅಧ್ಯಕ್ಷ ನಂದನಗೌಡ ಪಾಟೀಲ ಮತ್ತು ವಕೀಲರು ಸೇರಿ ವಾಹನಕ್ಕೆ ಸ್ವಾಗತ ಕೋರಿ ಬರಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.