ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ: ನಾಯಕ
Team Udayavani, Jan 12, 2018, 3:06 PM IST
ಸುರಪುರ: ತಾಲೂಕಿನ ಕಕ್ಕೇರಾ ಹತ್ತಿರದ ಅಸ್ಕೆರ ಹಾಗೂ ಗದ್ದಿಗೇರ ದೊಡ್ಡಿಯ ಕೆಲವರು ಗುರುವಾರ ನಗರದ
ಶಾಸಕರ ನಿವಾಸದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೆರ್ಪಡೆಯಾದರು.
ಈ ವೇಳೆ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಮೂಲಕ ಕಾಂಗ್ರೆಸ್ ಹೂಸ ಪರ್ವವನ್ನೆ ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಭೂತಪೂರ್ವ ಸಾಧನೆ ಮಾಡಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಮುಖ್ಯಮಂತ್ರಿಗಳ ಸಾಧನಾ ಸಮಾವೇಶಕ್ಕೆ ಜನ
ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ ಎಂದರು.
ಸರಕಾರ ಹಲವಾರು ಯೋಜನೆಗಳನ್ನು ಜನರಿಗೆ ನೀಡಿದ್ದು, ಬಡ ಜನರಿಗೆ ನೆರವು ನೀಡುವ ಇಂತಹ ಯೋಜನೆಗಳು ಕಾಂಗ್ರೆಸ್ ಪಕ್ಷದಿಂದ ಮಾತ್ರ ಜಾರಿ ತರಲು ಸಾಧ್ಯ. ಈ ಎಲ್ಲಾ ಯೋಜನೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ
ಜನಪ್ರೀಯತೆ ಹೆಚ್ಚಿದೆ. ಹೀಗಾಗಿ ಪಕ್ಷ ಬಹುತಗಳಿಸಿ ಅಧಿಕಾರಕ್ಕೆ ಮತ್ತೂಮ್ಮೆ ಬರುವುದು ಖಚಿತ ಎಂದರು.
ಪಕ್ಷದ ಕಾರ್ಯಕರ್ತರು ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕು. ಆ ಮೂಲಕ ಜನರನ್ನು ಪಕ್ಷಕ್ಕೆ ಕರೆತರಬೇಕು. ಚುನಾವಣೆಯಲ್ಲಿ ಹೆಚ್ಚಿನ ಅಂತರದ ಗೆಲುವು ತಂದು ಕೊಡಲು ಎಲ್ಲರ ನಿರಂತರವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಸೋಮಣ್ಣ ಗದ್ದಿಗಿ, ಪರಮಣ್ಣ ಗದ್ದಿಗಿ, ಆದಪ್ಪ ಗದ್ದಿಗಿ, ನಾಗರಾಜ ಗದ್ದಿಗಿ, ಅಯ್ಯಣ್ಣ ಗದ್ದಿಗಿ, ಅಂಬ್ರೇಶ ಗದ್ದಿಗಿ, ಬಸಣ್ಣ ಅಸ್ಕಿ, ಮಲ್ಲಣ್ಣ ಅಸ್ಕಿ, ಭೀಮಣ್ಣ ಅಸ್ಕಿ, ಅಯ್ನಾಳಪ್ಪ ಅಸ್ಕಿ, ಹಣಮಂತ ಅಸ್ಕಿ, ಶಿವಣ್ಣ ಅಸ್ಕಿ, ಅಯ್ನಾಳಪ್ಪ ಅಸ್ಕಿ, ಮಲ್ಲಪ್ಪ ಅಸ್ಕಿ, ಮಲ್ಲಪ್ಪ ಬಿ.ಅಸ್ಕಿ, ನಂದಪ್ಪ ಅಸ್ಕಿ, ಮಲ್ಲಪ್ಪ ರಾಯಗೇರಿ, ಪರಮಣ್ಣ ಎನ್.ಗದ್ದಿಗಿ, ನಿಂಗಪ್ಪ ಅಬ್ಲಿ ಪಕ್ಷ
ಸೇರ್ಪಡೆಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.