ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ
Team Udayavani, Mar 2, 2022, 11:39 AM IST
ನಾರಾಯಣಪುರ: ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ನಿಶ್ಚಿತ ಹಳೆಯ ಪಿಂಚಣಿ ಯೋಜ ನೆಯನ್ನು ಪುನಃ ಯಥಾಸ್ಥಿತಿಗೆ ಜಾರಿಗೆ ತರುವಂತೆ ಹುಣಸಗಿ ತಾಲೂಕು ಎನ್‌ಪಿ ಎಸ್ ನೌಕರರ ಸಂಘದ ಪದಾಧಿಕಾರಿಗಳು ಶಾಸಕ ನರಸಿಂಹನಾಯಕ (ರಾಜುಗೌಡ) ಅವರಿಗೆ ಮನವಿ ಸಲ್ಲಿಸಿದರು.
ಕೊಡೇಕಲ್‌ನ ಶಾಸಕ ಕಾರ್ಯಾಲಯ ದಲ್ಲಿ ಶಾಸಕರಿಗೆ ಎನ್‌ಪಿಎಸ್ ನೌಕರ ಸಂಘದ ವತಿಯಿಂದ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಸದಸ್ಯ ನೌಕರರು, ಭಾರತದ ಒಕ್ಕೂಟ ಸರ್ಕಾರದ ರಾಜಸ್ಥಾನ ಸರ್ಕಾರವು 23-02-2022ರಂದು ಮಂಡಿಸಿರುವ ಆಯವ್ಯಯದಲ್ಲಿ, ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ನಿಶ್ಚಿತ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ರಾಜಸ್ಥಾನ ಸರ್ಕಾರಿ ನೌಕರರ ಭವಿಷ್ಯದ ನಿವೃತ್ತಿ ಜೀವನಕ್ಕೆ ಭದ್ರತೆ ಒದಗಿಸಿದೆ.
ರಾಜ್ಯ ಸರ್ಕಾರದಲ್ಲಿ ದಿ.1-04-2006 ರ ನಂತರ ನೇಮಕವಾದ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಯಿದ್ದು, ಸದರಿ ನೂತನ ಪಿಂಚಣಿ ಯೋಜನೆಯಿಂದ ಲಕ್ಷಾಂತರ ಸರ್ಕಾರಿ ನೌಕರರಿಗೆ ಸುಮಾರು 30ರಿಂದ 35ವರ್ಷಗಳ ಸರ್ಕಾರಿ ಸೇವೆಗೈದರೂ ಸಹಿತ ನಿವೃತ್ತಿಯ ನಂತರ ಯಾವುದೇ ಸೌಲಭ್ಯಗಳು ಅಲಭ್ಯವಾಗಿದ್ದು, ಘನ ಕರ್ನಾಟಕ ರಾಜ್ಯ ಸರ್ಕಾವು ಕೂಡಲೇ ಹೊಸ ಪಿಂಚಣಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಈ ಹಿಂದಿನ ಹಳೆಯ ನಿಶ್ಚಿತ ಪಿಂಚಣಿ ಯೋಜ ನೆಯನ್ನು ಜಾರಿಗೊಳಿಸಿ ಎನ್‌ಪಿಎಸ್ ನೌಕರರಿಗೆ ಆರ್ಥಿಕ ಭದ್ರತೆ ಒದಗಿಸಿ ಕೊಡಲು ಸರ್ಕಾರದ ಗಮನಕ್ಕೆ ಈ ವಿಷಯ ಗಮನಕ್ಕೆ ತರುವಂತೆ ಶಾಸಕರಿಗೆ ಸಲ್ಲಿಸಿದ ಮನವಿ ವಿವರಿಸಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಆನಂದ ಕಾಜಗಾರ, ತಾಲೂಕು ಅಧ್ಯಕ್ಷ ಮಹಮದ್ ರಫಿ ಮಳ್ಳಿಕರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ವಾಲಿಕಾರ, ಉಪಾಧ್ಯಕ್ಷ ವೀರೇಶ್ ಹಡಪದ, ಅಮರೇಶ ಮಾಲಗತ್ತಿ, ಸಂಘಟನಾ ಕಾರ್ಯದರ್ಶಿ ನಾಗಯ್ಯ ಹಿರೇಮಠ, ಬಸವರಾಜ ಕುಳಲಿ, ಮಲ್ಲಿಕಾರ್ಜುನ ಹೋಳಿ, ಹನುಮೇಶ ಗಿಟ್ನೂರು, ಮಲ್ಲಿಕಾರ್ಜುನ, ಪ್ರಕಾಶ ಸುರಪುರ, ರವಿ ರಾಠೊಡ, ಅಮರೇಶ ನಾಯಕ, ಬಾಲಚಂದ್ರ ರಾಠೊಡ, ಖಲೀಲ ಕೋರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.