ಭಕ್ತಿ ಪ್ರಧಾನ ಚಿತ್ರಗಳಿಂದ ಅಂತಃಕರಣ ಶುದಿ
Team Udayavani, Jan 12, 2018, 2:25 PM IST
ಯಾದಗಿರಿ: ಅಷ್ಟಸಿದ್ಧಿಗಳನ್ನು ಕಟ್ಟಿ ಮೆರೆದ ಶ್ರೀ ವಿಶ್ವಾರಾಧ್ಯರ ನಾಮಾಂಕಿತದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಚಲನಚಿತ್ರ ಖಂಡಿತವಾಗಿ ಯಶಸ್ವಿಗೊಳ್ಳುತ್ತದೆ ಎಂದು ನಟ ಪುನೀತ್ ರಾಜಕುಮಾರ ಹೇಳಿದರು.
ಬೆಂಗಳೂರಿನ ವಸಂತ ನಗರದಲ್ಲಿರುವ ಡಾ| ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಬ್ಬೆತುಮಕೂರಿನ
ಸಿದ್ಧಿಪುರುಷ ಶ್ರೀ ವಿಶ್ವಾರಾಧ್ಯರು ಚಲನಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಕ್ತಿ ಪ್ರಧಾನ ಚಲನಚಿತ್ರಗಳಿಂದ ಮನುಷ್ಯನ ಅಂತಃಕರಣ ಶುದ್ಧಿ ಆಗುತ್ತದೆ. ಅಂತರಂಗ ಶುದ್ಧಿಯಾದಾಗ ಬಹಿರಂಗದ ಬದುಕು ಸಮೃದ್ಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದಿಪುರಷರಾಗಿದ್ದ ವಿಶ್ವಾರಾಧ್ಯರ ಭವ್ಯ ಜೀವನ, ಅನಂತ
ಲೀಲೆಗಳನ್ನು ಬೆಳ್ಳಿ ಪರದೆ ಮೇಲೆ ನೋಡುವ ಜನಾಂಗಕ್ಕೆ ಪರಿಣಾಮ ಬೀರಿ ಬದುಕು ಹಸನಾಗಲು ಕಾರಣ ಆಗುತ್ತದೆ
ಎಂದು ತಿಳಿಸಿದರು.
ಗೃಹ ಸಚಿವ ರಾಮಲಿಂಗಾರಡ್ಡಿ ಮಾತನಾಡಿ, ಹೈ.ಕ ಪ್ರದೇಶದ ಮಹಾಪುರುಷ ಶ್ರೀ ವಿಶ್ವಾರಾಧ್ಯರ ಜೀವನ ಚರಿತ್ರೆಯ ಚಲನಚಿತ್ರ ಇಡೀ ನಾಡಿನಾದ್ಯಂತ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅನೇಕ ಜನ ಮಹಾಪುರುಷರು ಆಗಿಹೋಗಿದ್ದು, ಅವರಲ್ಲಿ ಶ್ರೀ ವಿಶ್ವಾರಾಧ್ಯರು ಪ್ರಮುಖರು, ಅವರ ನಾಮಾಂಕಿತದ ಚಲನ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಅಬ್ಬೆತುಮಕೂರಿನ ಮಠದ ಪೀಠಾಧಿಪತಿ ಡಾ| ಗಂಗಾಧರ ಮಹಾಸ್ವಾಮಿಗಳು, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ, ನಿರ್ದೇಶಕ ಓಂ ಸಾಯಿಪ್ರಕಾಶ, ನವರಸ ನಾಯಕ ಜಗ್ಗೇಶ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ| ಎ.ಬಿ. ಮಾಲಕರಡ್ಡಿ, ಶಾಸಕ ಗುರು ಪಾಟೀಲ ಶಿರವಾಳ, ದತ್ತಾತ್ರೇಯ ಪಾಟೀಲ್
ರೇವೂರ, ಡಾ| ವೀರಬಸವಂತರಡ್ಡಿ ಮುದ್ನಾಳ, ವೆಂಕಟರಡ್ಡಿ ಮುದ್ನಾಳ, ನಾಗನಗೌಡ ಕಂದಕೂರ, ದೊಡ್ಡಪ್ಪಗೌಡ ನರಿಬೋಳ್, ಶರಣ ಬಸ್ಸಪ್ಪಗೌಡ ದರ್ಶನಾಪುರ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ನಟರಾದ ರಾಮಕುಮಾರ, ದಿಶಾ ಪೂವಯ್ಯ, ಚಿತ್ರಾ ಶೆಣೈ ಸೇರಿದಂತೆ ಇತರರು ಇದ್ದರು.
ಡಾ| ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕ ಮಾತನಾಡಿದರು. ದಿವ್ಯಾ ಆಲೂರು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.