ಜಹಾಗೀರದಾರ ಮನೆತನ ಕೊಡುಗೆ ಅಪಾರ: ಸ್ವಾಮೀಜಿ
Team Udayavani, Jan 5, 2019, 10:44 AM IST
ನಾರಾಯಣಪುರ: ಮಾನವೀಯ ಮೌಲ್ಯಗಳನ್ನು ತಳಹದಿಯಾಗಿರಿಸಿಕೊಂಡು, ಸಾಮಾಜಿಕ, ಶೈಕ್ಷಣಿಕವಾಗಿ ಸೇರಿದಂತೆ ಕೊಡೇಕಲ್ ಅಭಿವೃದ್ಧಿಯಲ್ಲಿ ಜಹಾಗೀರದಾರ ಮನೆತನ ಕೊಡುಗೆ ಅಪಾರವಾಗಿದೆ ಎಂದು ಶ್ರೀ ಗುರು ದುರುದಂಡೇಶ್ವರ ವಿರಕ್ತಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಕೊಡೇಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಗ್ರಾಮಸ್ಥರು ನಿರ್ಮಿಸಿರುವ ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ ಅವರ ವೃತ್ತ ಉದ್ಘಾಟನೆ, ನಾಮಫಲಕ ಅನಾವರಣ ಕಾರ್ಯಕ್ರಮ ಮತ್ತು ರಾಜಾ ಜಿತೇಂದ್ರ ನಾಯಕ ಜಹಾಗೀರದಾರ ಅವರ ಜನ್ಮದಿನ ಕಾರ್ಯಕ್ರಮ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕೊಡೇಕಲ್ ಬಸವಣ್ಣನವರ ಕಾಲದ ಜಹಾಗೀರದಾರ ಮನೆತನದವರು ಕೊಡೇಕಲ್ ಗ್ರಾಮದ ಅಭಿವೃದ್ಧಿಗಾಗಿ ಶಾಲೆಗಳು, ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ದಾರಿಯಲ್ಲಿ ಇಂದು ರಾಜಾ ಜಿತೇಂದ್ರನಾಯಕ ಜಹಾಗೀರದಾರ ಅವರು ಸಾಗುತ್ತಿದ್ದು, ಒಳ್ಳೆಯ ಬೆಳವಣಿಗೆ ಎಂದು ಶುಭಹಾರೈಸಿದರು.
ಮಹಲಿನಮಠದ ಪೂಜ್ಯ ಶ್ರೀ ವೃಷಬೇಂದ್ರ ಅಪ್ಪನವರು ಸಾನ್ನಿಧ್ಯ ವಹಿಸಿದ್ದರು. ದಾವಲಮಲಿಕ್ ದರ್ಗಾದ ಧರ್ಮದರ್ಶಿಗಳಾದ ಶ್ರೀ ದಾವಲ್ ಮಲಿಕ ಮುತ್ಯಾ ನೇತೃತ್ವ ವಹಿಸಿದ್ದರು. ರಾಣಿರಂಗಮ್ಮ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ಹನುಮಂತನಾಯಕ, ರಾಜಾ ಜಿತೇಂದ್ರನಾಯಕ ಜಹಾಗೀರದಾರ ನೂತನ ವೃತ್ತವನ್ನು ಜಂಟಿಯಾಗಿ ಉದ್ಘಾಸಿದರು. ವೃತ್ತ ಉದ್ಘಾಟನೆ ಕಾರ್ಯಕ್ರಮದ ನಂತರ ಆರ್.ವಿ.ಜೆ ಅಭಿಮಾನಿ ಬಳಗದಿಂದ 24ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ರಾಜಾ ಜಿತೇಂದ್ರನಾಯಕ ಜಹಾಗೀರದಾರ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು.
ರಂಗನಾಥ ದೊರಿ, ರಾಜಾ ಬಸವರಾಜ ನಾಯಕ, ಜಿಪಂ ಸದಸ್ಯ ನಾರಾಯಣ ನಾಯ್ಕ, ಎಚ್.ಸಿ. ಪಾಟೀಲ, ಡಾ| ಬಸನಗೌಡ ಅಳ್ಳಿಕೋಟಿ, ದಾವಲಸಾಬ್ ಕಮತಗಿ, ತಾಪಂ ಸದಸ್ಯ ಮೋಹನ ಪಾಟೀಲ, ಸೋಮನಿಂಗಪ್ಪ ದೊರಿ, ಬಸನಗೌಡ ಮಾಲಿಪಾಟೀಲ, ಗ್ರಾಪಂ ಅಧ್ಯಕ್ಷ ಮಹಿಮಪ್ಪ ಸೊನ್ನಾಪೂರ, ವೀರಸಂಗಪ್ಪ ಹಾವೇರಿ, ಶಾಮಸುಂದರ ಜೋಶಿ, ವೀರಸಂಗಪ್ಪ ಅಂಬ್ಲಿಹಾಳ, ಭೀಮಣ್ಣ ನಾಯೊRಡಿ, ಬಿ.ಎನ್. ಪೊಲೀಸ್ ಪಾಟೀಲ, ಈರಪ್ಪ ದೊರಿ, ಮಲ್ಲು ನವಲಗುಡ್ಡ ಸೇರಿದಂತೆ ಆರ್.ವಿ.ಜೆ ಅಭಿಮಾನಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್