ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಜೆಡಿಎಸ್ ಪ್ರತಿಭಟನೆ
Team Udayavani, Sep 16, 2022, 8:35 PM IST
ಸುರಪುರ: ಸಾರ್ವಜನಿಕರ ಸಮಸ್ಯೆಗಳಿಗೆ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಗುರುವಾರ ನಗರಸಭೆ ಎದುರು ಪ್ರತಿಭಟಿಸಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ನಗರಸಭೆ ಅಧಿ ಕಾರಿಗಳು ಸಾರ್ವಜನಿಕರ ಸಮಸ್ಯೆ ಮತ್ತು ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲ. ಮ್ಯುಟೇಶನ್, ಈ ಸ್ವತ್ತು ಖಾತಾ ನಕಲು, ಕಟ್ಟಡ ಪರವಾನಗಿ ಸೇರಿದಂತೆ ಮನೆಯ ದಾಖಲಾತಿ ಪಡೆಯಲು ನಗರಸಭೆ ನೌಕರರು ಸಾರ್ವಜನಿಕರಿಂದ ಹಣ ಸುಲಿಯುತ್ತಿದ್ದಾರೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಆರೋಪಿಸಿದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಜನತೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಎಲ್ಲ ಸಮುದಾಯಗಳ ಸ್ಮಶಾನಭೂಮಿಗೆ ಕುಡಿಯುವ ನೀರು ಬೆಳಕಿನ ವ್ಯವಸ್ಥೆ ಮತ್ತು ಶವ ಸಾಗಿಸಲು ಶವ ಪೆಟ್ಟಿಗೆ ವ್ಯವಸ್ಥೆ ಮಾಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಘನ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿ ಪ್ರತಿ ತಿಂಗಳು ನಗರಸಭೆಗೆ ಭೇಟಿ ನೀಡಿ ಜನತಾ ಅದಾಲತ್ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು. ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಹಮ್ಮದ ಶೌಕತ್‌ಅಲಿ, ಸಂಗಣ್ಣ ಬಾಕಲಿ, ತಿಪ್ಪಣ್ಣ ಪಾಟೀಲ, ಗೋಪಾಲ ಬಾಗಲಕೋಟೆ, ಅಲ್ತಾಫ್ ಸಗರಿ, ಎಂ.ಡಿ. ಬಾಬಾ, ಮೆಹಬೂಬ್ ಚೌದ್ರಿ, ಅಬ್ದುಲ್ ಸಮಿ, ಮಹೆಬೂಬಪಾಶಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.