ಕಾರ್ಮಿಕರು-ನಿರಾಶ್ರಿತರಿಗೆ ಅನ್ನದಾಸೋಹ
Team Udayavani, May 2, 2020, 3:06 PM IST
ಕಲಬುರಗಿ: ಪುಣೆಯಲ್ಲಿ ಅತಂತ್ರ ಕನ್ನಡಿಗರಿಗೆ ಊಟ ಬಡಿಸುತ್ತಿರುವ ಪುಣೆಯ ಕನ್ನಡ ಸಂಘದವರು.
ಕಲಬುರಗಿ: ನೆರೆಯ ಮಹಾರಾಷ್ಟ್ರದಲ್ಲಿ ರುದ್ರತಾಂಡವ ಹಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಿನ್ನೆಲೆಯಲ್ಲಿ ಕೆಲಸ ಅರಸಿ ರಾಜ್ಯದಿಂದ ಹೋಗಿರುವ ಸಾವಿರಾರು ಜನ ಅತಂತ್ರರಾಗಿರುವುದು ವಾಸ್ತವದ ಸಂಗತಿ.
ಮಹಾರಾಷ್ಟ್ರದ ಪುಣೆಯ ಭೋಸಾರಿಯಲ್ಲಿ ಕನ್ನಡ ನಾಡಿನ ಅದರಲ್ಲೂ ಕಲಬುರಗಿ-ವಿಜಯಪುರ ಜಿಲ್ಲೆಯ ಕನ್ನಡಿಗರು ಕಳೆದೊಂದು ತಿಂಗಳಿನಿಂದ ಲಾಕ್‌ಡೌನ್‌ದಿಂದ ನಿರಾಶ್ರಿತರಾದ ಕನ್ನಡಿಗರಿಗೆ ದಿನಾಲು ಎರಡೊತ್ತು ಊಟ ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭೋಸಾರಿಯಲ್ಲಿ ಕನ್ನಡಗರೇ ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದೆ. ಹೀಗಾಗಿ ಇಲ್ಲೊಂದು ಕನ್ನಡ ಸಂಘ ರಚಿಸಲಾಗಿದೆ. ಇದರಲ್ಲಿ 50ಕ್ಕೂ ಹೆಚ್ಚು ಯುವಕ ಕನ್ನಡಿಗರಿದ್ದಾರೆ. ಕನ್ನಡ ಸಂಘದ ಪದಾಧಿಕಾರಿಗಳಾದ ದ್ರುವ ಕುಲಕರ್ಣಿ, ಸಿದ್ದರಾಮ ಎಂ. ಧುತ್ತರಗಾಂವ, ಸುಧೀರ ಕುಲಕರ್ಣಿ, ಸಂಜಯಕುಮಾರ ರೊಡಗಿ, ಗಂಗಾಧರ ಬೆಣ್ಣೂರ ಮುಂತಾದವರು ಕನ್ನಡ ಸಂಘವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ.
ನಾವು ಕಷ್ಟದಿಂದಲೇ ಉದ್ಯೋಗ ಅರಸಿ ಪುಣೆಗೆ ಬಂದಿದ್ದೇವೆ. ಕಷ್ಟ ಏನೆಂಬುದು ಅರಿವಿದೆ. ಈಗ ಉತ್ತಮ ಉದ್ಯೋಗದಿಂದ ಸ್ವಲ್ಪ ಆರ್ಥಿಕವಾಗಿ ಸದೃಢರಾಗಿದ್ದೇವೆ. ಹೀಗಾಗಿ ನಾವೆಲ್ಲರೂ ಕೈಲಾದ ಮಟ್ಟಿಗೆ ಸಹಾಯ ಕಲ್ಪಿಸಿ ತಿಂಗಳಿನಿಂದ ಕನ್ನಡಿಗರಿಗೆ ಎರಡೊತ್ತು ಊಟ ಬಡಿಸಲಾಗುತ್ತಿದೆ.
ಸಿದ್ಧರಾಮ ಎಂ. ಧುತ್ತರಗಾಂವ,
ಕನ್ನಡ ಸಂಘ, ಪುಣೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.