ರೈತರಿಂದ ತರಕಾರಿ ಖರೀದಿಸಿ ವಿತರಣೆ
ಪ್ರತಿನಿತ್ಯ ಖರೀದಿಸಿ ನಿರ್ಗತಿಕರು-ಬಡವರಿಗೆ ವಿತರಿಸಲು ನಿರ್ಧಾರ
Team Udayavani, Apr 29, 2020, 4:40 PM IST
ಕಾಳಗಿ: ರೈತರಿಂದ ಖರೀದಿಸಿದ ತರಕಾರಿ ಬೆಳೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಬಡವರಿಗೆ ವಿತರಿಸಿದರು.
ಕಾಳಗಿ: ಕಾಂಗ್ರೆಸ್ ಮುಖಂಡ ಧರ್ಮರಾಜ ಕಲ್ಲಹಿಪ್ಪರಗಿ ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ ರೈತನಿಂದ ತರಕಾರಿ ಖರೀದಿಸಿ, ಶಾಸಕರ ಮುಖಾಂತರ ನಿರ್ಗತಿಕರಿಗೆ ವಿತರಿಸಿದರು.
ತಾಲೂಕಿನ ರಟಕಲ್, ಬೆಡಸೂರ, ಮುಕರಂಬಾ, ಅರಣಕಲ್ ಗ್ರಾಮದ ಅನೇಕ ರೈತರು ತರಕಾರಿ ಬೆಳೆದಿದ್ದಾರೆ. ಆದರೆ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದರು. ಇದನ್ನು ಗಮನಿಸಿದ ಧರ್ಮರಾಜ ಅವರ ತೋಟಕ್ಕೆ ತೆರಳಿ ಮಾರುಕಟ್ಟೆ ಬೆಲೆ ನೀಡಿ ಖರೀದಿಸಿ ರೈತರ ನೆರವಿಗೆ ಬಂದಿದ್ದಾರೆ. ಹೀಗೆ ಖರೀದಿಸಿದ ತರಕಾರಿಯನ್ನು ನಿರ್ಗತಿಕರಿಗೆ ವಿತರಿಸಿದ ಶಾಸಕ ಪ್ರಿಯಾಂಕ್ ಖರ್ಗೆ, ಲಾಕ್‌ಡೌನ್ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಧರ್ಮರಾಜ ಕಲ್ಲಹಿಪ್ಪರಗಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಯುವ ಮುಖಂಡ ಧರ್ಮರಾಜ ಕಲ್ಲಹಿಪ್ಪರಗಿ ಮಾತನಾಡಿ, ತಾಲೂಕಿನ ಅನೇಕ ರೈತರು ತರಕಾರಿ ಬೆಳೆದು ನಷ್ಟ ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಆದ್ದರಿಂದ ರೈತರಿದ್ದಲ್ಲೇ ತೆರಳಿ ಅವರು ಬೆಳೆದಿರುವ ಈರುಳ್ಳಿ, ಮೆಣಸಿನಕಾಯಿ, ಬದನೆಕಾಯಿ, ಗಜರಿ, ಟೋಮ್ಯಾಟೋ, ಸೌತೆಕಾಯಿ, ಅವರೆಕಾಯಿ, ಚೌಳಿಕಾಯಿ, ಪುಂಡಿಪಲ್ಯ, ರಾಜಗಿರಿ, ಪಾಲಕ ಬೆಳೆಯನ್ನು ಮಾರುಕಟ್ಟೆಯಲ್ಲಿ ದೊರಕುವ ಬೆಲೆಯಲ್ಲೇ ಪ್ರತಿದಿನ ಖರೀದಿಸಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿನ ಬಡ ನಿರ್ಗತಿಕರ ಕುಟುಂಬದವರಿಗೆ ಉಚಿತವಾಗಿ ವಿತರಿಸುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮುಖಂಡ ಸುಭಾಷ ರಾಠೊಡ, ಶಿವಶರಣಪ್ಪ ಚನ್ನೂರ, ಶಂಕರ ಸೂತಾರ, ಕಾಶಿನಾಥ ಶೆಳ್ಳಗಿ, ಗೌರಿಶಂಕರ ಕಿಣ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.