ಹೆಗ್ಗನದೊಡ್ಡಿ ಪ್ರೌಢಶಾಲೆಗೆ ಸಾಧನೆ ಕಿರೀಟ
ಶಿಕ್ಷಕರ ತರಬೇತಿ-ಪಾಲಕರ ಸಹಕಾರ | ಗ್ರಾಮೀಣ ಭಾಗದ ಶಾಲೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ
Team Udayavani, Feb 27, 2020, 1:20 PM IST
ಕೆಂಭಾವಿ: ಕೆಂಭಾವಿ ವಲಯದ ಹೆಗ್ಗನದೊಡ್ಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪಾಠ ಮತ್ತು ಆಟದಲ್ಲಿ ರಾಜ್ಯದ ಗಮನ ಸೆಳೆದಿದ್ದಾರೆ.
ಕನ್ನಡದ ಹಲವು ಚಟುವಟಿಕೆಗಳ ಜತೆಗೆ ಆಂಗ್ಲ ಮಾಧ್ಯಮ ಶಾಲೆ ನಾಚಿಸುವಂತ ಹಲವು ಇಂಗ್ಲಿಷ್ ಪ್ರಕಾರದ ಚಟುವಟಿಕೆ ನೀಡುವುದರ ಮೂಲಕ ಜಿಲ್ಲೆಯಲ್ಲಿಯೆ ತಮ್ಮ ಛಾಪು ಮೂಡಿಸಿದ್ದಾರೆ. ಲಿಂಕ್ ಮೆಥೆಡ್ ಮೂಲಕ ವಿಶಿಷ್ಠ ರೀತಿಯಲ್ಲಿ ಪಾಠ, ಕನ್ನಡ ವರ್ಣಾಕ್ಷರದಲ್ಲಿ ಸಮಾಜ ವಿಜ್ಞಾನ ಬೋಧನೆ ಹಾಗೂ ಕಲ್ಯಾಣ ಕ್ರಾಂತಿ ಎಂಬ ನಾಟಕದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕ ಎಂದರೆ ಕನ್ನಡದ ಮೊದಲ ರಾಜ ಮನೆತನ ಕದಂಬರು ಎಂಬ ವಾಕ್ಯದಿಂದ ಆರಂಭಿಸಿ ಜ್ಞಾ ಎಂದರೆ ಜ್ಞಾನ ಎಂಬ ಮುಕ್ತಾಯದವರೆಗೆ ಕನ್ನಡ ವರ್ಣ ಮಾಲೆ ಎಲ್ಲ ಅಕ್ಷರಗಳಿಗೆ ಒಂದು ವಿಶಿಷ್ಠ ಶೈಲಿಯ ಇತಿಹಾಸಕಾರರ ಜೋಡಣೆ ಮಾಡಿದ್ದಾರೆ. ಶಿಕ್ಷಕ ಸಾಹೇಬಗೌಡ ಬಿರಾದಾರ ಬೋಧಿಸಿ ವಿದ್ಯಾರ್ಥಿಗಳಿಗೆ ಸರಳ ರೀತಿಯಿಂದ ತಿಳಿಯುವಂತೆ ಮಾಡಿದ್ದಾರೆ. ಇಂಗ್ಲಿಷ್ ವರ್ಣಮಾಲೆ ಎ ಅಂದರೆ ಅಶೋಕ ಈತ ಮೌರ್ಯ ಸಾಮ್ರಾಜ್ಯದ ಪ್ರಮುಖ ಅರಸ ಕಳಿಂಗ ಯುದ್ಧದಿಂದ ಮನ ಪರಿವರ್ತನೆಗೊಂಡು ಯುದ್ಧವನ್ನೆ ತ್ಯಜಿಸಿದ ಅರಸ ಎಂದು ಆರಂಭಗೊಂಡು ಝಡ್ ಅಕ್ಷರದವರೆಗೆ ಎರೆಡೆರಡು ಪ್ರಮುಖಾಂಶ ತಿಳಿಸಿಕೊಡುವ ಮೂಲಕ ಇಂಗ್ಲಿಷ್ ಭಾಷೆ ಶಿಕ್ಷಣ ಕಲಿಕೆಗೂ ಹೊಸ ರೂಪ ನೀಡಿದ್ದಾರೆ. ಹತ್ತನೇ ತರಗತಿ ಮಕ್ಕಳಿಗಾಗಿ ಸವಿ ಸೂತ್ರಗಳು ಎಂಬ ವಿನೂತನ ಪ್ರಯೋಗದ ಮೂಲಕ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ಪಾಲಕರ ಮನ ಗೆದ್ದಿದ್ದಾರೆ.
ಕನ್ನಡ ಶಾಲೆಯಾಗಿದ್ದರೂ ಇಲ್ಲಿನ ಮಕ್ಕಳು ನ್ಪೋಕನ್ ಇಂಗ್ಲಿಷ್ ಹಾಗೂ ರೈಮ್ಸ್ ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ.ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆಗಿದೆ. ಇದಲ್ಲದೆ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ, ಶಿಕ್ಷಣ ಕುರಿತು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವುದು ಸೇರಿದಂತೆ ಹತ್ತು ಹಲವು ವಿನೂತನ ಕಾರ್ಯಕ್ರಮ ಮಾಡಿದ ಶಾಲೆ ಹೆಮ್ಮೆಯನ್ನು ಎಲ್ಲೆಡೆ ಪಸರಿಸಿದ್ದಾರೆ. ಇಂತಹ ಗ್ರಾಮೀಣ ಭಾಗದ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸರ್ಕಾರ ಮಾಡಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ.
ನಮ್ಮ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳು ತಮ್ಮ ವಿಶಿಷ್ಠ ಶೈಲಿ ಮೂಲಕ ಪಾಠ ಮತ್ತು ನಾಟಕಗಳಲ್ಲಿ ರಾಜ್ಯದಲ್ಲಿ ತಮ್ಮ ಪ್ರತಿಭೆ ತೋರಿರುವುದು ತುಂಬ ಸಂತಸ ತಂದಿದೆ. ಇದಕ್ಕೆ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಹೆಚ್ಚಾಗಿದೆ. ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಇನ್ನು ಹೆಚ್ಚಿನ ಸೌಲಭ್ಯ ಒದಗಿಸಿ ಶಾಲೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು.
ರಾವುಸಾಹೇಬ ಪಾಟೀಲ,
ಎಸ್‌ಡಿಎಂಸಿ ಅಧ್ಯಕ್ಷರು
ನಮ್ಮ ಶಾಲೆ ಎಲ್ಲ ಶಿಕ್ಷಕರ ಹಾಗೂ ಪಾಲಕರ ಸಹಕಾರದಿಂದ ಮಕ್ಕಳು ಇಂತಹ ಪ್ರತಿಭೆ ತೋರಿಸಿದ್ದಾರೆ. ಇವರಲ್ಲಿರುವ ಮತ್ತಷ್ಟು ಪ್ರತಿಭೆ ಹೊರತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಂಡು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಎಲ್ಲ ಪ್ರಯತ್ನ ಮಾಡಲಾಗುವುದು.
ರಾಮಚಂದ್ರ ಕಟ್ಟಿ, ಮುಖ್ಯ ಶಿಕ್ಷಕ
ಗುಂಡಭಟ್ಟ ಜೋಷಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.