ಮೂಲ ಸೌಕರ್ಯ ವಂಚಿತ ಕೇಶ್ವಾರ
Team Udayavani, Oct 8, 2018, 2:54 PM IST
ಗುರುಮಠಕಲ್: ಸಮೀಪದ ಕೇಶ್ವಾರ ಗ್ರಾಮದಲ್ಲಿ ಸ್ವತ್ಛತೆ ಮರೀಚಿಕೆಯಾಗಿದ್ದು, ಗ್ರಾಮದಲ್ಲಿ ಸಂಚರಿಸಲು ಕಷ್ಟದ ವಾತಾವರಣ ನಿರ್ಮಾಣವಾಗಿದ್ದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ದಿನಗಳಿಂದ ಚರಂಡಿ ತುಂಬಿವೆ. ಕಸ ತೆಗೆದು ಖಾಲಿ ಮಾಡಿ ಅಂತ ಹೇಳಿದರೂ ಯಾರೊಬ್ಬರೂ ಮನವಿಗೆ ಸ್ಪಂದಿಸುತ್ತಿಲ್ಲ. ಗಬ್ಬು ವಾಸನೆ, ಸೊಳ್ಳೆಗಳ ಕಾಟದಿಂದ ರೋಗಗಳು ಹರಡುವ ಆತಂಕದಲ್ಲಿ ಜೀವಿನ ಕಳೆಯುತ್ತಿದ್ದೇವೆ. ಯಾರು ಸ್ಪಂದಿಸದ ಕಾರಣ ಕೊನೆಗೆ ನಾವೇ ಚರಂಡಿ ಸ್ವತ್ಛಗೊಳಿಸಿಕೊಂಡಿದ್ದೇವೆ. ಆದರೆ ಚರಂಡಿಯಿಂದ ತೆಗೆದ ಹೂಳು ಮತ್ತೆ ಚರಂಡಿಗೇ ಬೀಳುತ್ತಿದೆ ಎನ್ನುತ್ತಾರೆ ಗ್ರಾಮಸ್ಥರಾದ ಬಸಪ್ಪ ಅರಿಕೇರಿ.
ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯೇ ಚರಂಡಿಯಾಗಿದೆ. ಹಲವಾರು ಬಾರಿ ಈ ಕುರಿತು ಗ್ರಾಪಂ ಗಮನಕ್ಕೆ ತಂದಿದ್ದೇವೆ. ಆದರೆ ಮನವಿ ಮಾಡಿದ ಪ್ರತಿ ಬಾರಿಯೂ ಕುಂಟು ನೆಪ ಹೇಳುತ್ತಾರೆ. ರಸ್ತೆಯೇ ಕೆಸರು ಗದ್ದೆಯಾಗಿದ್ದು, ಚಿಕ್ಕ ಮಕ್ಕಳು ಇದರಿಂದ ಸದಾ ಅನಾರೋಗ್ಯದ ಸಮಸ್ಯೆಯಿಂದ ಬಳಲು ಕಾರಣ ಆಗುತ್ತಿದೆ. ನಮ್ಮ ಕಷ್ಟ ಯಾರು ಆಲಿಸುತ್ತಿಲ್ಲ ಎಂದು ಗ್ರಾಮದ ಮಹದೇವಮ್ಮ ಅಳಲು ತೋಡಿಕೊಂಡಿದ್ದಾರೆ.
ಗ್ರಾಮದ ಪುಟಪಾಕ್ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಸುತ್ತಲೂ ಮುಳ್ಳು ಪೊದೆ ತುಂಬಿದ್ದು, ಬಳಕೆಗೆ
ಬಾರದಂತಹ ಸ್ಥಿತಿಗೆ ತಲುಪಿರುವುದರಿಂದ ಮಹಿಳೆಯರು ಬಯಲಿನಲ್ಲಿಯೇ ಶೌಚ ಹೋಗುವ ಅನಿವಾರ್ಯತೆಯಲ್ಲಿದ್ದಾರೆ. ನಮ್ಮ ಸಮಸ್ಯೆ ಯಾರೂ ಕೇಳವರು ಇಲ್ಲ ಎಂದು ಗ್ರಾಮಸ್ಥರಾದ ಅನಂತಮ್ಮ, ಲಕ್ಷ್ಮಮ್ಮ, ಯಲ್ಲಮ್ಮ ಹಾಗೂ ನವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಕೇಶ್ವಾರ ತಾಂಡಾ ರಸ್ತೆಗಿರುವ ಭಾಗದ ಮನೆಗಳಿಗೆ ವಿದ್ಯುತ್ ಕಂಬಗಳಿಲ್ಲದೆ ಸಂಪರ್ಕದ ಸಮಸ್ಯೆ ಇದೆ. ಈ ಕುರಿತು ಗ್ರಾಪಂಗೆ ಮನವಿ ಮಾಡಿದರೆ ಜೆಸ್ಕಾಂ ಅಧಿಕಾರಿಗಳನ್ನು ಕೇಳುವಂತೆ ಹೇಳುತ್ತಾರೆ. ಜೆಸ್ಕಾಂ ಅಧಿಕಾರಿಗಳು ಗ್ರಾಪಂಗೆ ಕೇಳುವಂತೆ ಹೇಳುತ್ತಾರೆ. ಅತ್ತ ಅವರೂ ಸ್ಪಂದಿಸುವುದಿಲ್ಲ. ಇತ್ತ ಇವರೂ ಕ್ಯಾರೆ ಎನ್ನುವುದಿಲ್ಲ.
ತಿಪ್ಪಣ್ಣ, ಸ್ಥಳೀಯ ಸಿವಾಸಿ
ಮನವಿ ಮಾಡಿ ಆರು ತಿಂಗಳಾದರೂ ಚರಂಡಿಗಳಲ್ಲಿ ತುಂಬಿದ್ದ ಕಸ, ಕೆಸರನ್ನು ಸ್ವತ್ಛ ಮಾಡುತ್ತಿಲ್ಲ. ಸೊಳ್ಳೆಗಳ ಕಾಟ, ಗಬ್ಬುವಾಸನೆಯಿಂದ ಜೀವನ ಸಾಕಾಗಿದೆ.
ಅನಂತಮ್ಮ, ಸ್ಥಳೀಯ ನಿವಾಸಿ
ಮನೆಗಳಲ್ಲಿ ಶೌಚಾಲಯ ಇದ್ದರೂ ಜನರು ಬಯಲಿಗೆ ಹೋಗುವುದು ಮುಂದುವರೆದಿದೆ. ಜನರಲ್ಲಿ ಜಾಗೃತಿ ಮೂಡುವವರೆಗೂ ಹೀಗೆ ಆಗುತ್ತದೆ. ಗ್ರಾಮಕ್ಕೊಂದು ಹೊಸ ನೀರಿನ ಟ್ಯಾಂಕ್ ಕಟ್ಟಿಸಿಕೊಡುವಂತೆ ಗ್ರಾಪಂಗೆ ಮನವಿ ಸಲ್ಲಿಸಲಾಗಿದೆ.
ಬ್ರಹ್ಮಾನಂದರೆಡ್ಡಿ, ಗ್ರಾಪಂ ಸದಸೆ
ಚನ್ನಕೇಶವುಲು ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್ ಮಾರ್ಮಿಕ ಮಾತು
Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.