ತ್ರಿಪದಿ ಸಾಹಿತ್ಯದಿಂದ ಜ್ಞಾನ ಹಂಚಿದ ಸರ್ವಜ್ಞ


Team Udayavani, Feb 21, 2018, 4:40 PM IST

Concrete-1.jpg

ಯಾದಗಿರಿ: 16ನೇ ಶತಮಾನದಲ್ಲಿ ಸಮಾಜದಲಿದ್ದ ಅಂಕುಡೊಂಕುಗಳನ್ನು ನೇರ-ದಿಟ್ಟವಾಗಿ ತ್ರಿಪದಿ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಿದ ಮಹಾನ್‌ ಸಂತಕವಿ ಸರ್ವಜ್ಞ ಎಂದು ಶಾಸಕ ಡಾ| ಎ.ಬಿ. ಮಾಲಕರಡ್ಡಿ ಹೇಳಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಶ್ರೀ ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ
ಹಮ್ಮಿಕೊಂಡಿದ್ದ ಶ್ರೀ ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತ ನಾಡಿದರು.

ಸರ್ವಜ್ಞನೆಂದರೆ ಪಂಡಿತ- ಪಾಮರರಿಗೂ, ಅಕ್ಷರಸ್ಥ-ಅನಕ್ಷರಸ್ಥ ಎಲ್ಲರಿಗೂ ರೋಮಾಂಚನ ಆಗುತ್ತದೆ. ಏಕೆಂದರೆ 16ನೇ ಶತಮಾನದಲ್ಲಿನ ಅರ್ಥವಾಗದ ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸಾಮಾಜಿಕ, ಧಾರ್ಮಿಕ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ನೈತಿಕ ಚಿಂತನೆಯನ್ನು ಸಾಹಿತ್ಯ, ಕಾವ್ಯದ ಮೂಲಕ ಜನರಿಗೆ
ಉಣಬಡಿಸಿದವರು ಎಂದು ಹೇಳಿದರು. 

ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ತಮಿಳುನಾಡಿನಲ್ಲಿ ತಿರುವಳ್ಳುವರ್‌, ಆಂಧ್ರ ಪ್ರದೇಶದಲ್ಲಿ ಮಹಾಯೋಗಿ ವೇಮನ್‌ರಂತೆ ಕರ್ನಾಟಕದಲ್ಲಿ ಸಂತಕವಿ ಸರ್ವಜ್ಞನಾಗಿದ್ದಾನೆ. ಸರ್ವಜ್ಞನು 2,000 ವಚನಗಳನ್ನು ತ್ರಿಪದಿಯಲ್ಲಿ ರಚಿಸಿದ್ದು, ಅಂದಿನ ಸಮಾಜದಲ್ಲಿನ ಜಟಿಲವಾದ ಸಮಸ್ಯೆಗಳನ್ನು ಜನರ ಆಡು ಭಾಷೆಯಲ್ಲಿ ತಿಳಿಯುವಂತೆ ವಿವರಿಸಿದ್ದಾರೆ ಎಂದು ಅವರು ಹೇಳಿದರು.

ಸಕಲ ಜಾತಿಗಳ ಲೇಸನ್ನು ಭಯಸುವನೇ ಸರ್ವಜ್ಞನಾಗಿದ್ದು, ಇವರ ತತ್ವ-ವಿಚಾರಧಾರೆಗಳನ್ನು ಇಂದಿನ ಹಾಗೂ
ಮುಂದಿನ ಪೀಳಿಗೆಯು ಅಳವಡಿಸಿಕೊಂಡಾಗ ಸಾಮಾಜಿಕ ಸಮತೋಲನದ ಜೊತೆಗೆ ದೇಶದ ಅಭಿವೃದ್ಧಿ ಸಾಧ್ಯ ಆಗುತ್ತದೆ ಎಂದು ಅವರು ತಿಳಿಸಿದರು. ಬಾಚವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಂಗಾರಪ್ಪ ಕುಂಬಾರ ಅವರು ಶ್ರೀ ಸಂತಕವಿ ಸರ್ವಜ್ಞರವರ ಜೀವನ ವೃತ್ತಾಂತ ಹಾಗೂ ಸಂತಕವಿ ಸರ್ವಜ್ಞರು ರಚಿಸಿರುವ ವಚನಗಳ ತಿರುಳು ಕುರಿತು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಶ್ರೀ ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಸಮಿತಿ ಜಿಲ್ಲಾ ಅಧ್ಯಕ್ಷ ಶೇಖರಪ್ಪ ಅರ್ಜುಣಿಗಿ ಹಾಗೂ ಕುಂಬಾರ ಸಮಾಜದವರು ಹಾಜರಿದ್ದರು. ಗುರು ಪ್ರಸಾದ ವೈದ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಚಂದ್ರಶೇಖರ ಗೋಗಿ ಕಲಾ ತಂಡದವರು ನಾಡಗೀತೆ ಹಾಡಿದರು.

ಸರ್ವಜ್ಞ ಕವಿ ಬರಹ ಸರ್ವಕಾಲಕ್ಕೂ ಅನ್ವಯ 
ಶಹಾಪುರ:
ಕವಿ ಸರ್ವಜ್ಞರು ತ್ರಿಪದಿಗಳ ಕಾವ್ಯ ವಚನಗಳ ರಚಿಸುವ ಮೂಲಕ ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ್ದಾರೆ. ಅವರು ರಚಿಸಿದ ಹಲವಾರು ಕಾವ್ಯದ ಸಾಲುಗಳು ಪ್ರತಿಯೊಬ್ಬರ ಬದುಕಿನಲ್ಲಿ ಬರುವ ಸಮಸ್ಯೆ ಕುರಿತದ್ದಾಗಿದೆ ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು.

ತಾಲೂಕು ಆಡಳಿತದಿಂದ ನಗರಸಭೆ ಆವರಣದಲ್ಲಿ ಕವಿ ಸರ್ವಜ್ಞರ ಜಯಂತಿ ಅಂಗವಾಗಿ ಆಯೋಜಿಸಿದ್ದ ಮಾರಂಭದಲ್ಲಿ ಅವರು ಮಾತನಾಡಿ, ಸರ್ವಜ್ಞರ ಕಾವ್ಯದಲ್ಲಿ ಸರ್ವರ ಬದುಕು ಸುಂದರಗೊಳಿಸುವ ಶಕ್ತಿ ಇದೆ. ಅವುಗಳನ್ನು ಮನವರಿಕೆ ಮಾಡಿಕೊಳ್ಳುವ ಅಗತ್ಯವಿದೆ. ಪ್ರತಿಯೊಬ್ಬರ ಜೀವನ ಸುಧಾರಿಸುವ ಮತ್ತು ಬದುಕಿನ ಒಳಾಂಗಣದಲ್ಲಿ ನಡೆಯುವ ಗಂಡ-ಹೆಂಡತಿಯರ ತುಮಲತೆಗಳನ್ನು ಕುರಿತು ಅವರ ಸತ್ಯಶೋಧನೆ ಅನ್ವೇಷಣೆ ಮೂಲಕ ಕಾವ್ಯರೂಪದಲ್ಲಿ ಬಹಿರಂಗ ಪಡಿಸಿದ್ದಾರೆ ಎಂದರು.

ಅವುಗಳನ್ನು ನಾವೆಲ್ಲ ಅರ್ಥ ಮಾಡಿಕೊಂಡು ನಡೆದಲ್ಲಿ ಬದುಕು ಸುಂದರಗೊಳ್ಳಲಿದೆ. ಪ್ರತಿಯೊಬ್ಬರಲ್ಲಿದ್ದ ಒಳಮನಸ್ಸಿನ ಮಲೀನತೆಯನ್ನು ಕಿತ್ತೆಸೆಯುವ ಕಾರ್ಯವನ್ನು ಕವಿ ಸರ್ವಜ್ಞರು ಮಾಡಿದ್ದಾರೆ ಎಂದರು.

ಪ್ರಾಚಾರ್ಯ ಪ್ರೊ| ಶೀವಲಿಂಗಣ್ಣ ಸಾಹು ಮಾತನಾಡಿ, ಎಲ್ಲರೊಂದಿಗೆ ಬೆರೆತು ಬಾಳಿದ, ಎಲ್ಲರನ್ನೂ ಸಮದೃಷ್ಟಿಯಿಂದ ಕಂಡ ಸರ್ವಜ್ಞ ಎಲ್ಲರಿಗೂ ಬೇಕಾದ ಜನತೆಯ ದಾರ್ಶನಿಕ ಕವಿ, ಸಾಮಾಜಿಕ ಚಿಕಿತ್ಸಕನಾಗಿದ್ದಾನೆ. ಸರ್ವಜ್ಞನ ತ್ರಿಪದಿಗಳು ನಿಸರ್ಗ ಹಾಗೂ ಮನುಷ್ಯ ಜೀವಿಯ ಪ್ರತಿಯೊಂದು ಮಜಲುಗಳಿಗೆ ಸ್ಪಂದಿಸುತ್ತವೆ. ಮನುಷ್ಯ ಜೀವನದ ಸಾಂಸ್ಕೃತಿಕ ಮೌಲ್ಯಗಳನ್ನು, ಸಮಾಜದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ತ್ರಿಪದಿಗಳಲ್ಲಿ ಕಾಣಬಹುದು ಎಂದು ಅನೇಕ ತ್ರಿಪದಿಗಳ ಮೂಲಕ ವಿಶ್ಲೇಷಿಸಿದರು. ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಟ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಲೀಂ ಸಂಗ್ರಾಮ, ಗ್ರೇಡ್‌-2 ತಹಶೀಲ್ದಾರ್‌ ಶ್ರೀಧರಾಚಾರ್ಯ, ನಗರಸಭೆ ಅಧ್ಯಕ್ಷೆ ಕಾಂತಮ್ಮ ಹಣಮಂತ ದೊರೆ, ಕುಂಬಾರ ಬಸವರಾಜ ಗುಡಗುಂಟಿ, ನಗರಸಭೆ ಉಪಾಧ್ಯಕ್ಷ ಡಾ|ಬಸವರಾಜ ಇಜೇರಿ ಇದ್ದರು. 

ಸಮಾಜಕ್ಕೆ ಸರ್ವಜ್ಞ ಕೊಡುಗೆ ಅಪಾರ: ಅಂಕಲಗಿ 
ಶ‌ಹಾರಪುರ: ತ್ರಿಪದಿ ಕವಿ ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕ ಶೇಷ್ಠವಾಗಿವೆ ಎಂದು ತಹಶೀಲ್ದಾರ್‌ ಸುರೇಶ ಅಂಕಲಗಿ ಹೇಳಿದರು. ಇಲ್ಲಿಯ ತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಜರುಗಿದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಸರ್ವಜ್ಞನ ಕೊಡುಗೆ ಅಪಾರ. ನಾಡಿನ ಉದ್ದಗಲಕ್ಕೂ ಸಂಚರಿಸಿ ಸಮಾಜವನ್ನು ತಿದ್ದಿ ತೀಡಿದ ಮಹನೀಯ. ಇವರ ವಿಚಾರ ಧಾರೆಗಳನ್ನು ನಾವೆಲ್ಲಾ ಅನುಸರಿಸಬೇಕು ಎಂದು ಸಲಹೆ ನೀಡಿದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ, ಸರ್ವಜ್ಞರ ವಚನಗಳಲ್ಲಿ ಸಾಮಾಜಿಕ
ಕಳಕಳಿ ಎದ್ದು ಕಾಣುತ್ತದೆ. ವ್ಯವಸ್ಥೆಯ ಒಳಿತು, ಕೆಡುಕುಗಳ ಬಗ್ಗೆ ತ್ರಿಪದಿಗಳಲ್ಲಿ ಸೂಕ್ಷ್ಮವಾಗಿ ಪ್ರತಿಪಾದಿಸಿದ್ದಾರೆ. ಅವರ
ತ್ರಿಪದಿಗಳು ಸಾರ್ವಕಾಲಿಕ ನಿತ್ಯ ನೂತನವಾಗಿವೆ ಎಂದರು.
 
ನಗರಸಭೆ ಅಧ್ಯಕ್ಷೆ ಕವಿತಾ ಶಿವಕುಮಾರ ಎಲಿಗಾರ ಅಧ್ಯಕ್ಷತೆ ವಹಿಸಿದ್ದರು. ದೇವಿಂದ್ರ ಕರಡಕಲ್‌, ರಾಜು ಕುಂಬಾರ, ದೇವಿಂದ್ರ ಕರಡಕಲ್‌, ಸಂತೋಷ ಕುಂಬಾರ, ಆದಪ್ಪ ತಿಮ್ಮಾಪುರ, ಭೀಮರಾಯ ಕುಂಬಾರಪೇಟೆ, ಸೂಗೂಣ್ಣ ಚನ್ನೂರು, ಸಂಗಮೇಶ ಹುಣಸಗಿ, ಬಸವರಾಜ, ಸಾಹೇಬಗೌಡ, ಪರಮಣ್ಣ ಕಕ್ಕೇರಾ, ಗೂಳಪ್ಪ ಕುಂಬಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಡಗೇರಾ: ಸರ್ವಜ್ಞ ಜಯಂತಿ
ವಡಗೇರಾ: ವಡಗೇರಾ ಸೇರಿದಂತೆ ಸುತ್ತಮುತ್ತ ನಾನಾ ಕಡೆಗಳಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ವಿಶೇಷ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಸರ್ವಜ್ಞ ಭಾವಚಿತ್ರಕ್ಕೆ ಕಚೇರಿ ಮ್ಯಾನೇಜರ್‌ ರಾಜಸಾಬ್‌ ಕಂದಗಲ್‌ ಪೂಜೆ
ನೆರವೇರಿಸಿದರು. ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಶಿವುಕುಮಾರ, ಕೃಷ್ಣಪ್ಪ, ಬಸವರಾಜ ಖಾನಾಪುರ, ರಾಜ್ಯ ಕುಂಬಾರರ ಯುವ ಸೈನ್ಯ ಘಟಕದ ತಾಲೂಕು ಅಧ್ಯಕ್ಷ ರಾಜು ಕುಂಬಾರ, ಗ್ರಾಪಂ ಸದಸ್ಯ ನಾಗೇಂದ್ರಪ್ಪ ಕುಂಬಾರ
ಅನಕಸುಗೂರ, ಮಲ್ಲಣ್ಣ ಕುಂಬಾರ ಕಾಡಂಗೇರಾ, ಶರಣು ಕುಂಬಾರ ಅನಕಸುಗೂರ, ಮಲ್ಲು ಕುಂಬಾರ ಅನಕಸುಗೂರ, ಚಂದ್ರಾಮ ಕುಂಬಾರ ಐಕೂರ, ಮಂಜುನಾಥ ಕುಂಬಾರ ಐಕೂರ, ರುದ್ರಪ್ಪ ಐಕೂರ, ಗುರು ಕುಂಬಾರ ಐಕೂರ, ಮಲ್ಲು ಅನಕಸುಗೂರ, ಶಿವು ಕಾಡಂಗೇರಾ, ಜಮಲಾ ಕಾಡಂಗೇರಾ ಇದ್ದರು.

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ

Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ

ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ

ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

Sharanagowda-Kandakura

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.