ಕೂಡ್ಲಿಗೆಪ್ಪ-ಬೀರಲಿಂಗೇಶ್ವರಜೋಡು ಪಲ್ಲಕ್ಕಿ ಉತ್ಸವ
Team Udayavani, Oct 21, 2017, 4:43 PM IST
ಹುಣಸಗಿ: ಸಮೀಪದ ವಜ್ಜಲ ಗ್ರಾಮದಲ್ಲಿ ಕೂಡ್ಲಿಗೆಪ್ಪ ದೇವರ ಮತ್ತು ಬೀರಲಿಂಗೇಶ್ವರ ಜಾತ್ರೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಎಲ್ಲರ ಮನೆಯ ಮುಂದೆ ಬಂದ ಪಲ್ಲಕ್ಕಿ ಉತ್ಸವಕ್ಕೆ ನೀರನ್ನು ಹಾಕಿ ಬರಮಾಡಿಕೊಳ್ಳಲಾಯಿತು. ಬೆಳಗ್ಗೆ ವಿಶೇಷ ನಂದಿ ಮತ್ತು ಕಂಟ್ಲಿ ಪೂಜೆ ಸಲ್ಲಿಸಿದ ನಂತರ ಜೋಡು ಪಲ್ಲಕ್ಕಿಯಲ್ಲಿ ಎರಡೂ ದೇವರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಡೊಳ್ಳು ಕುಣಿತ, ಆಕರ್ಷಕ ವೀರಗಾಸೆ ಕುಣಿತ ಗಮನ ಸೆಳೆಯಿತು. ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಡೊಳ್ಳಿನ ಪದ, ರಾತ್ರಿ ಭಜನೆ ನಡೆಯಿತು.
ವಜ್ಜಲ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ವಜ್ಜಲ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಿದ ನಂತರ ಜಾತ್ರೆ ಮುಕ್ತಾಯವಾಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಮುಖಂಡರಾದ ನಿಂಗಪ್ಪ ಮೇಟಿ, ಶಿವಣ್ಣ ಕನ್ನೆಳ್ಳಿ, ಚಂದಪ್ಪ ಗಿಂಡಿ, ನಿಂಗಪ್ಪ ಬೋಯಿ, ಸಿದ್ದು ಅಬ್ಯಾಳಿ, ಕರೆಪ್ಪ ದೊಡ್ಡಮನಿ, ಸಿದ್ದಣ್ಣ ಮೇಟಿ, ಹಣಮಂತ್ರಾಯ ಕನ್ನೆಳ್ಳಿ, ಬಸಣ್ಣ ಕಲ್ಲತ್ತಿ, ಸಿದ್ದಣ್ಣ ಗುಲಗುಂಜಿ, ರೇವಣಸಿದ್ದಪ್ಪ ಹೊರಟ್ಟಿ, ರಾಯಪ್ಪ, ಬಸಪ್ಪ ಮೇಟಿ,
ಬೂಮಣ್ಣ ದೊಡಮನಿ, ಬೀರಪ್ಪ, ಸಾಬಣ್ಣ ಗಿಂಡಿ, ಶ್ರೀಶೈಲ ದೇವತ್ಕಲ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.