ಅಬ್ಬರಿಸಿದ ಕೃಷ್ಣೆ; ತತ್ತರಿಸಿದ ಜನ
ಮುಷ್ಠಳ್ಳಿ ಗ್ರಾಮಗಳ ಜಮೀನುಗಳಲ್ಲಿದ್ದ 15 ಕುಟುಂಬಗಳ ಸ್ಥಳಾಂತರಕ್ಕೆ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆ.
Team Udayavani, Jul 31, 2021, 5:47 PM IST
ಸುರಪುರ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 4.17 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿರುವ ಪರಿಣಾಮ ಕೃಷ್ಣೆ ಭೋರ್ಗರೆಯುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರವಾಹದಿಂದ ನದಿ ತೀರದ ಗ್ರಾಮಗಳ ಜನರು ಅಕ್ಷರಶಃ ತತ್ತರಿಸಿದ್ದಾರೆ.
ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಕಂದಾಯ ಇಲಾಖೆ ಅಧಿ ಕಾರಿಗಳು ಹಗಲು-ರಾತ್ರಿ ನದಿ ದಂಡೆಯಲ್ಲಿ ನಿದ್ದೆಗೆಡು ವಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಣ್ಣಾರೆ ಕಂಡ ರೈತರು ಮಮ್ಮಲ ಮರುಗುತ್ತಿದ್ದಾರೆ. ದೇವಾಪುರದ ಹಿರೇಹಳ್ಳ ಭರ್ತಿಯಾಗಿ ಹರಿಯುತ್ತಿದೆ. ಜಮೀನುಗಳಲ್ಲಿ ಅಲ್ಲಲ್ಲಿ ಟೀನ್ ಶೆಡ್, ಜೋಪಡಿ ಹಾಕಿದ್ದ ಸಣ್ಣ ಪುಟ್ಟ ಕುಟುಂಬಗಳು ಮನೆ ತೊರೆಯುವ ಪರಿಸ್ಥಿತಿ ಬಂದೊದಗಿದೆ.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ತಂಡ ನದಿ ತೀರದ ಪ್ರದೇಶಗಳಿಗೆ ಶುಕ್ರವಾರವೂ ಭೇಟಿ ನೀಡಿ ಪರಿಶೀಲಿಸಿತು. ನದಿ ಸಮೀಪದ ಹೆಮನೂರು, ಶೆಳ್ಳಗಿ, ಮುಷ್ಠಳ್ಳಿ ಗ್ರಾಮಗಳ ಜಮೀನುಗಳಲ್ಲಿದ್ದ 15 ಕುಟುಂಬಗಳ ಸ್ಥಳಾಂತರಕ್ಕೆ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆ. ನೀಲಕಂಠರಾಯನಗಡ್ಡಿ, ಬೆಂಚಿಗಡ್ಡಿ ಸೇತುವೆ ಬಂದ್ ಮಾಡಲಾಗಿದೆ. ಮೇಲಿನ ಗಡ್ಡಿ, ದೇವರಗಡ್ಡಿ ಸೇರಿದಂತೆ ಮೂರ್‍ನಾಲ್ಕು ಗಡ್ಡಿಗಳಲ್ಲಿನ ಜನರನ್ನು ತೆರವುಗೊಳಿಸಲಾಗಿದೆ. ತಿಂಥಣಿಗೆ ಒಳ ಹೋಗುವ ರಸ್ತೆ, ಕರ್ನಾಳ ರಸ್ತೆ, ಹೆಮನೂರ ಗ್ರಾಮಗಳ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.
ಮುಳುಗಿದ ಜಾಕ್ವೆಲ್: ಸುರಪುರ ನಗರಕ್ಕೆ ನೀರು ಸರಬರಾಜು ಮಾಡುವ ಶೆಳ್ಳಗಿ ಜಾಕ್ವೆಲ್ ಕೃಷ್ಣೆ ಪ್ರವಾಹದಲ್ಲಿ ಮುಳುಗಿದೆ. ಇದರಿಂದ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ನಾಗರಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜೂ.1ರಿಂದ ಅತಿವೃಷ್ಟಿ ಮತ್ತು ಪ್ರವಾಹದಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ ಅಪಾರ ಬೆಳೆ ನಷ್ಟವಾಗಿದೆ. ಸುರಪುರ-ಅಂದಾಜು 400, ಹುಣಸಗಿ-40.77 ಸೇರಿ ಅಂದಾಜು ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿರಬಹುದು. ಇದುವರೆಗಿನ ಮಾಹಿತಿ ಪ್ರಕಾರ 30 ಮನೆ ಜಖಂಗೊಂಡಿವೆ. 40 ವಿದ್ಯುತ್ ಕಂಬಗಳು, 3 ವಿದ್ಯುತ್ ಪರಿವರ್ತಕಗಳು ಸುಟ್ಟಿದ್ದು, ಅಂದಾಜು 7 ಕಿ.ಮೀ ವಿದ್ಯುತ್ ತಂತಿ ಹಾಳಾಗಿದೆ ಎಂದು ಅಂದಾಜಿಸಲಾಗಿದೆ. ಬೆಳೆ ನಷ್ಟ ಕುರಿತು ಕೃಷಿ, ರಸ್ತೆ ಸೇತುವೆಗಳ ಕುರಿತು ಲೋಕೋಪಯೋಗಿ, ವಿದ್ಯುತ್ ನಷ್ಟದ ಬಗ್ಗೆ ಜೆಸ್ಕಾಂ ಇಲಾಖೆ ಎಲ್ಲ ಇಲಾಖೆಗಳಿಂದ ಸಮಗ್ರ ವರದಿ ಬರಕೇಕಿದೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.
*ಸಿದ್ದಯ್ಯ ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.