ಸಮಾಜದ ಶ್ರೇಯಸ್ಸಿಗೆ ಶ್ರಮಿಸಿದ ನಾಯಕ ಹೇರೂರ
Team Udayavani, Dec 4, 2017, 5:09 PM IST
ಶಹಾಪುರ: ದಿ. ವಿಠ್ಠಲ್ ಹೇರೂರ ಕೋಲಿ ಕಬ್ಬಲಿಗ ಸಮಾಜದ ಏಳ್ಗೆಗಾಗಿ ಅವಿರತ ಶ್ರಮವಹಿಸಿದ್ದಾರೆ. ಅವರ ತತ್ವಾದರ್ಶದ ಮೇಲೆ ಸಮಾಜವನ್ನು ಸಂಘಟನಾತ್ಮಕವಾಗಿ ಬೆಳೆಸಬೇಕಿದೆ ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ ಹೇಳಿದರು.
ನಗರದ ಹಳಿಸಗರ ವಿಭಾಗದ ನಿಜಶರಣ ಅಂಬಿಗರ ಚೌಡಯ್ಯನವರ ಮಠದಲ್ಲಿ ನಡೆದ ದಿ. ವಿಠ್ಠಲ್ ಹೇರೂರ ಅವರ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೇರೂರ ಅವರು ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಸಬಲರಾಗಬೇಕು ಎಂಬ ನಿಟ್ಟಿನಲ್ಲಿ ಹಗಲಿರುಳು ದುಡಿದ ಸಮಾಜದ ಚೇತನವಾಗಿದ್ದಾರೆ. ಅಷ್ಟೇ ಅಲ್ಲದೆ ಇತರೆ ದಲಿತ, ಶೋಷಿತ ವರ್ಗಗಳ ಏಳ್ಗೆಗೂ ಸಹ ಅವರು ಶ್ರಮಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿ ನಮ್ಮ ಸಮಾಜದ ಶಕ್ತಿ ಆಗಿದ್ದರು ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಸಣ್ಣ ನಿಂಗಣ್ಣ ನಾಯ್ಕೋಡಿ ಮಾತನಾಡಿದರು. ಶಿಕ್ಷಕ ಮೌನೇಶ ಹೈಯ್ನಾಳಕರ, ಈ ಸಂದರ್ಭದಲ್ಲಿ ಭೀಮರಾಯ ಮಮದಾಪುರ, ರಾಮಣ್ಣ ನಾಯ್ಕೋಡಿ, ಮರೆಪ್ಪ ಚಂಡು, ರವೀಂದ್ರನಾಥ ನರಸನಾಯಕ, ಸಾಯಬಣ್ಣ ಪೂಜಾರಿ,
ರಾಮಾಂಜನೇಯ ಬೊನೇರ, ಯಲ್ಲಪ್ಪ ನಾಯ್ಕೋಡಿ, ಮಲ್ಲರಡ್ಡಿ ವಿಭೂತಿಹಳ್ಳಿ, ಮೌನೇಶ ಹೈಯ್ನಾಳಕರ, ಮಾನಯ್ಯ ಹಾದಿಮನಿ, ಗೋಪಾಲ ಸುರಪುರ, ರಮೇಶ ಇಟಗಿ, ನಾಗಪ್ಪ ತಹಶೀಲ್ದಾರ, ಈಶ್ವರಪ್ಪ ಮಿಲಿ, ಮಲ್ಲಪ್ಪ ಮಣಿಗಿರಿ, ಭೀಮರಾಯ ಹೆಡಿಗಿಮದ್ರಿ, ವೆಂಕಟೇಶ ಮೂಲಿಮನಿ ಇತರರು ಇದ್ದರು.
ಕಮಕನೂರ ವಿರುದ್ಧ ಆಕ್ರೋಶ ರವಿವಾರ ನಡೆದ ದಿ. ವಿಠಲ್ ಹೇರೂರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಿಂದ ಕಲಬುರಗಿ ತಿಪ್ಪಣಪ್ಪ ಕಮಕನೂರ ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತವಾದ ಘಟನೆ ಜರುಗಿತು.
ಸಮಾಜದ ಹಿರಿಯ ಮಾಜಿ ಸಚಿವ, ಹಾಲಿ ಶಾಸಕ ಬಾಬುರಾವ್ ಚಿಂಚನಸೂರ ವಿರುದ್ಧ ಸಮಾಜದ ಮುಖಂಡ ತಿಪ್ಪಣಪ್ಪ ಕಮಕನೂರ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಭೆಯಲ್ಲಿ ಖಂಡಿಸುವ ಮೂಲಕ ಆಕ್ರೋಶ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಜವಾಬ್ದಾರಿ ಅರಿತು ನಡೆದುಕೊಳ್ಳದಿದ್ದರೆ ತಿಪ್ಪಣ್ಣಪ್ಪ ಕಮಕನೂರು ವಿರುದ್ಧ ಇಡಿ ಸಮಾಜ ಸಿಡಿದೇಳಲಿದೆ ಎಂದು ಎಚ್ಚರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.