ಕೋಲಿ ಸಮಾಜ ಪ್ರಗತಿ ಕಾಣಲಿ
Team Udayavani, Aug 30, 2018, 2:38 PM IST
ಶಹಾಪುರ: ಬಹು ಸಂಖ್ಯಾತರಾಗಿದ್ದ ಕೋಲಿ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಪ್ರಮುಖರು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುವ ಯೋಜನೆ ರೂಪಿಸುವ ಮೂಲಕ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಹಳಿಸಗರ ಭಾಗದ ನಿಜಶರಣ ಅಂಬಿಗರ ಚೌಡಯ್ಯನವರ ಮಠದ ಆವರಣದಲ್ಲಿ ತಾಲೂಕು ಕೋಲಿ
ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ನೂತನ ಶಾಸಕರಿಗಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಸ್ತುತ ಬದಲಾಗುತ್ತಿರುವ ಸಮಾಜದಲ್ಲಿ ಕೋಲಿ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುನ್ನಡೆಗೆ ಶ್ರಮಿಸಬೇಕು. ನನ್ನ ಅವಧಿಯಲ್ಲಿ ಅಂದಾಜು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೃಹತ್ (ಕೋಲಿ) ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಭವನ ನಿರ್ಮಿಸುವ ಭರವಸೆ ನೀಡಿದರು.
ಕೆ.ಎ.ಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವ ಡಾ| ಎಂ.ಎಸ್. ಶಿರವಾಳ ಮಾತನಾಡಿ, ಸತತ ಅಧ್ಯಯನದಿಂದ
ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ. ನಮ್ಮ ತಂದೆಯವರು ಅನಕ್ಷರಸ್ಥರಾಗಿದ್ದರೂ ಸಹಿತ ನನಗೆ ಸದಾಕಾಲ ಚೆನ್ನಾಗಿ ಓದುವಂತೆ ಪ್ರೇರೇಪಣೆ ನೀಡುವುದರ ಜೊತೆಗೆ ಸಾಲ ಮಾಡಿಯಾದರೂ ಉತ್ತಮ ಪುಸ್ತಕಗಳನ್ನು ಕೊಡಿಸುತ್ತಿದ್ದರು.
ಅವರ ಈ ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಯಿತು. ಮುಂದೆ ಸಂದರ್ಭಾನುಸಾರ ಕಾನೂನಿನಡಿಯಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಎ.ಪಿ.ಎಂ.ಸಿ. ಕಾರ್ಯದರ್ಶಿ ರಂಗನಾಥ ದೇಸಾಯಿ ಮಾತನಾಡಿ, ಸಮಾಜ ಬಾಂಧವರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಸಂಘಟನೆಗೆ
ಮುಂದಾಗಬೇಕು. ಸಮಾಜದ ಬೆಳವಣಿಗೆಗೆ ಯುವ ಸಮುದಾಯ ಟೊಂಕಕಟ್ಟಿ ನಿಲ್ಲಬೇಕು. ಯುವಕರಿಂದ ಯಾವ
ಕೆಲಸವಾದರೂ ಸಾಧ್ಯವಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತಪ್ಪ ನಾಟೇಕಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಎಸ್.ಕೆ. ಟಕ್ಕಳಕಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಪ್ಪ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಪ್ಪ ಸಾಲಿಮನಿ, ಸುರೇಶ
ತಡಿಬಿಡಿ, ಗೋಪಾಲ ಸುರಪುರ, ರಾಮಣ್ಣ ನಯ್ಕೋಡಿ, ಮಾನಪ್ಪ ಸೂಗೂರ, ಸಣ್ಣ ನಿಂಗಪ್ಪ ನಯ್ಕೋಡಿ, ಅಯ್ಯಣ್ಣ ಕನ್ಯೆಕೋಳೂರ, ಮರೆಣ್ಣ ಮಿಲಿ, ನಾಗಪ್ಪ ತಹಶೀಲ್ದಾರ್, ರಾಮಾಂಜನೇಯ, ಶಾಂತಪ್ಪ ಗೊಂದೆನೂರ, ಮಲ್ಕಪ್ಪ
ನಾಶಿ, ದೇವಿಂದ್ರಪ್ಪ ದೊಡ್ಡಮನಿ, ಯಮನಪ್ಪ ಚಿಗರಿ ಇದ್ದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ
ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.