ಭೀಮಾ ನದಿಗೆ ನೀರು ಹರಿಸಲು ಜಿಲ್ಲಾಧಿಕಾರಿಗೆ ಪತ್ರ
Team Udayavani, Mar 26, 2022, 3:12 PM IST
ಯಾದಗಿರಿ: ಭೀಮಾನದಿ ಜಿಲ್ಲೆಯ ರೈತರ ಜೀವನಾಡಿ. ಯಾದಗಿರಿ ಭೀಮಾ ಬ್ಯಾರೇಜ್ನಿಂದ ಜೋಳದೆಡಗಿ ಬ್ಯಾರೇಜ್ ವರೆಗೆ ಬರುವ ಭೀಮಾನದಿ ತೀರದ ರೈತರು ಈಗಾಗಲೇ ಭತ್ತ ಬೆಳೆದಿದ್ದು, ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ ಸನ್ನತಿ ಬ್ಯಾರೇಜ್ನಿಂದ ಭೀಮಾ ನದಿಗೆ ನೀರು ಹರಿಸಿ ಬೆಳೆಗೆ ಅನುಕೂಲ ಮಾಡಿಕೊಡುವಂತೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ನದಿ ಮೂಲದ ನೀರಿನ ಆಶ್ರಯದಲ್ಲಿ ಈ ಭಾಗದ ರೈತರು ಭತ್ತ ಬೆಳೆದಿದ್ದಾರೆ. ಇನ್ನು ಒಂದು ಅಥವಾ ಒಂದೂವರೆ ತಿಂಗಳಿನಲ್ಲಿ ಬೆಳೆ ಕಟಾವಿಗೆ ಬರುತ್ತದೆ.
ಯಾದಗಿರಿ, ಕೌಳೂರು, ಆನೂರು (ಬಿ) ಮತ್ತು ಜೋಳದೆಡಗಿ ಬ್ಯಾರೇಜ್ ಗಳಲ್ಲಿ ನೀರು ತೀರ ಕಡಿಮೆಯಾಗಿವೆ. ಭತ್ತದ ಬೆಳೆಗೆ ನೀರು ಪಡೆಯಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಸನ್ನತಿ ಬ್ಯಾರೇಜ್ನಿಂದ ಭೀಮಾ ನದಿಗೆ ನೀರು ಬಿಡದಿದ್ದರೆ ಭೀಮಾ ತೀರದ ರೈತರ ಬೆಳೆಗಳು ಹಾನಿಯಾಗುವ ಸಂಭವವಿದ್ದು, ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ ಭೀಮಾ ನದಿ ತೀರದ ರೈತರು ಗುಳೆ ಹೋಗುವ ಪರಿಸ್ಥಿತಿಯೂನಿರ್ಮಾಣವಾಗಬಹುದು. ಇವೆಲ್ಲ ಅಂಶ ಗಂಭೀರವಾಗಿ ಪರಿಗಣಿಸಿ ಸನ್ನತಿ ಬ್ಯಾರೇಜ್ನಿಂದ ಭೀಮಾ ನದಿಗೆ ನೀರು ಹರಿಸಿ ರೈತರಿಗೆ ನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.