ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಜನಸಾಗರ
Team Udayavani, Nov 10, 2018, 6:50 AM IST
ಗುರುಮಠಕಲ್: ಯಾನಾಗುಂದಿ ಮಾಣಿಕ್ಯಗಿರಿ ಆಶ್ರಮದ ಮಾತಾ ಮಾಣಿಕೇಶ್ವರಿ ಅವರ ಧರ್ಮ ಸಂದೇಶ ಯಾತ್ರೆ ಪಟ್ಟಣದ ಮಾರ್ಗವಾಗಿ ತೆಲಂಗಾಣ ರಾಜ್ಯದ ಪೆದ್ದ ಶಹಾಪೂರ ಆನಂದಾಶ್ರಮಕ್ಕೆ ತೆರಳಿತು.
ಈ ವೇಳೆ ಮಾತಾ ಮಾಣಿಕೇಶ್ವರಿ ದರ್ಶನಕ್ಕಾಗಿ ಪಟ್ಟಣದ ಐಬಿ, ಬಸವೇಶ್ವರ ವೃತ್ತ, ಕಾಕಲವಾರ ಕ್ರಾಸ್, ಚಪೆಟ್ಲಾ ಕ್ರಾಸ್,ಬಸ್ ಡೀಪೊವರೆಗೂ ಭಕ್ತರು ಕಾಯ್ದು ನಿಂತಿದ್ದರು. ಮಾತಾ ಮಾಣಿಕೇಶ್ವರಿ ಪಟ್ಟಣ ಪ್ರವೇಶಿಸಿ ಮುಚ್ಚಿದ ಕಾರಿನಲ್ಲಿ ಬೂದೂರು ಗೇಟ್, ಬೋರಬಂಡಾ, ಧರ್ಮಾಪೂರ, ಗುಂಜನೂರು ಕ್ರಾಸ್ ಮೂಲಕ ತೆಲಂಗಾಣ ಪ್ರವೇಶ ಮಾಡಿದರು.
ಯಾತ್ರೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ದರ್ಶನಕ್ಕಾಗಿ ನೂಕು ನುಗ್ಗಲು ಉಂಟಾಯಿತು. ಪೊಲೀಸ್ ಸಿಬ್ಬಂದಿ ಕೂಡಲೇ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಶಾಸಕ ನಾಗನಗೌಡ ಕಂದಕೂರ ತಮ್ಮ ಕುಟುಂಬ ಸದಸ್ಯರೊಡನೆ ಅಮ್ಮನವರ ದರ್ಶನ ಪಡೆದರು. ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಹಾಗೂ ನೆರಡಗುಂಬಾ ಶ್ರೀಗಳು ಯಾತ್ರೆಗೆ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.