ವಿಶ್ವಮಾತಾ ಗೋ ಶಾಲೆಗೆ ಸೇಡಂ ಭೇಟಿ
Team Udayavani, Jul 4, 2017, 3:05 PM IST
ಶಹಾಪುರ: ಗೋವುಗಳನ್ನು ಪೂಜ್ಯನೀಯ ಬಾವದಿಂದ ಕಾಣಬೇಕು ಎಂದು ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ನಗರದ ಬೆಟ್ಟದಡಿಯಲ್ಲಿರುವ ವಿಶ್ವಮಾತಾ ಗೋವು ಶಾಲೆಗೆ ಸೋಮವಾರ ಭೇಟಿ ನೀಡಿದ ಅವರು, ಗೋಶಾಲೆ ವೀಕ್ಷಿಸಿ ಆಗು ಹೋಗುಗಳನ್ನು ವಿಚಾರಿಸಿದರು. ಗೋವು ಶಾಲೆಯ ಮುಖ್ಯಸ್ಥ ಸಂಗಮೇಶ ಶಾಸ್ತ್ರೀಗಳ ಜೊತೆಗೆ ಮಾತುಕತೆ ನಡೆಸಿ ಅವರು, ಸೂಕ್ತ ಸಲಹೆ ಮಾರ್ಗದರ್ಶನ ನೀಡಿ, ಗೋವು ಶಾಲೆಯ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವುದು ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಗೋವು ಶಾಲೆಯ ಹೊಸ ಪ್ರದೇಶವನ್ನು ಪರಿವೀಕ್ಷಣೆಗೆ ತೆರಳಿ ಪರಿಶೀಲಿಸಿದರು. ಸ್ಥಳದ ಮಾಹಿತಿ ಪಡೆದು ತಮ್ಮ ಸಲಹೆ ತಿಳಿಸಿದರು. ದತ್ತು ಪಡೆದಿದ್ದ ಗೋವು ಶಾಲೆಯ ಎರಡು ಹಸುಗಳ ಪಾಲನೆ ಪೋಷಣೆಗಾಗಿ ಬೇಕಾದ ಪ್ರತಿ ಮಾಸಿಕ ನೀಡುವ 5 ಸಾವಿರ ರೂ. ಚಕ್‌ನ್ನು ಶಾಸ್ತ್ರೀಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ ಶಾಸ್ತ್ರೀ, ಪಾಟೀಲ್ ಅವರ ಮಾರ್ಗದರ್ಶನ ಅತ್ಯಮೂಲ್ಯ. ಅವರ ಸಹಕಾರ ಮಾರ್ಗದರ್ಶನದಿಂದ ಇಂದು ಗೋವು ಶಾಲೆ ಅಭಿವೃದ್ಧಿ ಪಥದಲ್ಲಿ ನಡೆದಿದೆ. ಇಂತಹ ವಯಸ್ಸಿನಲ್ಲಿ ಅವರ ಕಾಳಜೀ ಸಹಕಾರ ಮೆಚ್ಚವಂತಹದ್ದು, ಪ್ರತಿ ವಾರಕ್ಕೊಮ್ಮೆ ಕರೆ ಮಾಡಿ ಇಲ್ಲಿನ ಬದಲಾವಣೆ ಹಾಗೂ ಗೋವು ಶಾಲೆ ಬಗ್ಗೆ ವಿಚಾರಿಸುತ್ತಾರೆ. ತಿಂಗಳಲ್ಲಿ ಎರಡು ಬಾರಿ ಗೋವು ಶಾಲೆಗೆ ಭೇಟಿ ನೀಡಿತ್ತಾರೆ. ಪ್ರಚಾರ ಪಡೆಯುವ ಜಾಯಮಾನ ಅವರದ್ದಲ್ಲ. ಅವರ ಉತ್ತಮ ಸಲಹೆ ಮಾರ್ಗದರ್ಶನ ನಮಗೆಲ್ಲ ಅತ್ಯಗತ್ಯವಿದ್ದು, ಯುವಕರು ಕೂಡ ಅವರ ಆದರ್ಶ ಬೆಳೆಸಿಕೊಳ್ಳಬೇಕು ಎಂದರು.
ಅಮೃತರಾವ್ ಮೂಲಗೆ, ಭೀಮರಡ್ಡಿ ಬೈರಡ್ಡಿ ಸೇರಿದಂತೆ ಸಂಸ್ಕೃತಿ ಪಾಠ ಶಾಲಾ ಮಕ್ಕಳು ಮತ್ತು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.