ಮೋದಿ ವರ್ಚಸ್ಸು ಕುಗ್ಗಿದೆ
Team Udayavani, Dec 19, 2017, 10:56 AM IST
ಯಾದಗಿರಿ: ಹಿಮಾಚಲ ಪ್ರದೇಶದಲ್ಲಿ ನಿರೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಗುಜರಾತ್‌ನಲ್ಲಿ ಆಡಳಿತ ವಿರೋ ಧ ಅಲೆ ಇದೆ ಎಂದು ಅಲ್ಲಿಗೆ ಹೋದವರು ತಿಳಿಸಿದ್ದರು. ಪ್ರಧಾನ ಮಂತ್ರಿ ಮೋದಿ, ರಾಷ್ಟ್ರಾಧ್ಯಕ್ಷ ಆಮಿತ್ ಶಾ ಅವರು ಅದೇ ರಾಜ್ಯದವರಾಗಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಸಾಕಷ್ಟು ರ್ಯಾಲಿ, ಸಮಾವೇಶ ನಡೆಸಿದರು. ಮೋದಿ ಹೋದಲೆಲ್ಲಾ ನಮ್ಮ ಮಾರ್ಯಾದೆ ಉಳಿಸಿ ಎಂದು ಭಾಷಣ ಮಾಡುತ್ತಿದ್ದರು.
ಇದು ಅವರ ಗೆಲುವಿಗೆ ಕೆಲಸ ಮಾಡಿದೆ. ಗುಜರಾತ್‌ನಲ್ಲಿ ಮೋದಿ ಅವರ ಪ್ರಭಾವ ಕುಗ್ಗಿದೆ. ಅಲ್ಲಿನ ಜನ ಈಗಲೂ ನೋಟ್ ಅಮಾನ್ಯಿàಕರಣ ಹಾಗೂ ಜಿಎಸ್‌ಟಿಯನ್ನು ಒಪ್ಪಿಕೊಂಡಿಲ್ಲ. ಅಲ್ಲಿ ಮೋದಿ ಪ್ರಭಾವವಿದ್ದರೆ, ಕಾಂಗ್ರೆಸ್ ಸಂಪೂರ್ಣವಾಗಿ ಸೋಲಬೇಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ ಪಕ್ಷ ಬಿಟ್ಟು ಹೋಗಿದ್ದು ಪರಿಣಾಮ ಬೀರಿದೆ. ಗುಜರಾತ್‌ನಲ್ಲಿ ಪ್ರಾದೇಶಿಕ ಮಟ್ಟದ ನಾಯಕರ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಸಿಬಿಐ ದುರ್ಬಳಕೆ, ಐಟಿ ದಾಳಿ ಮಾಡುವ ಮೂಲಕ ಭಯ ಬೀಳಿಸುವ ಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಮೋದಿ, ಆಮಿತ್ ಶಾ ತಂತ್ರ ನಡೆಯುವುದಿಲ್ಲ. ರಾಜ್ಯದಲ್ಲಿ ಕೋಮುವಾದಿ ದೃವೀಕರಣ ಮಾಡಲು ಸಾಧ್ಯವಿಲ್ಲ. ಇದು ಬಸವಣ್ಣ, ಕನಕದಾಸರ ನಾಡಾಗಿದ್ದು, ಇಲ್ಲಿ ಸಾಮರಸ್ಯವಿದ್ದು, ಬಿಜೆಪಿಯವರ ಆಟ ನಡೆಯುವುದಿಲ್ಲ. ಕೆಲವು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಆದರೆ ಆರ್‌ಎಸ್‌ಎಸ್ ನಿಂದ ಬಂದವರಿಗೆ ಪಕ್ಷದಲ್ಲಿ ಸೇರಿಸಿಕೊಳ್ಳುವುದಿಲ್ಲ. ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಜನರು ಬಿಜೆಪಿ ಪರವಾಗಿಲ್ಲ ಎಂದು ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿದ್ದ ಖಾಲಿ ಖುರ್ಚಿಗಳೇ ಸಾಕ್ಷಿಯಾಗಿವೆ ಎಂದರು.
ಸಂತಸ ತಂದಿದೆ
ಬನಹಟ್ಟಿ: ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಜರಾತ್‌ನಲ್ಲಿ ಕಾಂಗ್ರೆಸ್ ಹೆಚ್ಚಿನ ಗೆಲುವು ಸಾಧಿಸಿದೆ ಎಂದು ಸಚಿವೆ ಉಮಾಶ್ರೀ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಕಹಿ ಬದಲಾಗಿ ಸಂತಸ ನೀಡಿದೆ. ಪಕ್ಷದ ನೂತನ ಅಧಿಪತಿಯಾಗಿರುವ ರಾಹುಲ್ ಗಾಂಧಿ ನೇತೃತ್ವದ ಹೋರಾಟದಿಂದಲೇ ಅಷ್ಟೊಂದು ಪ್ರಮಾಣದ ಕ್ಷೇತ್ರಗಳಲ್ಲಿ
ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ಎಂದರು.
ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ
ಬಾಗಲಕೋಟೆ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಇವಿಎಂ ಯಂತ್ರ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ಜನ ಮತ ಹಾಕಿದ್ದಾರೋ ಅಥವಾ ಇವಿಎಂ ಯಂತ್ರ ಮತ ಹಾಕಿದೆಯೋ ಎಂಬ ಅನುಮಾನ ಮೂಡಿದೆ. ಇವಿಎಂ ದುರುಪಯೋಗ ಸಾಧ್ಯತೆಯಿದೆ ಎಂಬ ಅನುಮಾನ ಎಲ್ಲೆಡೆ ಇದ್ದರೂ ಕೂಡ ಇವಿಎಂ ಯಂತ್ರವನ್ನೇ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದೊಡ್ಡ ದೊಡ್ಡ ಉದ್ದಿಮೆದಾರರು ಅವರ ಪರವಾಗಿದ್ದಾರೆ. ಹೀಗಾಗಿ ಗುಜರಾತ್ ಗೆಲುವು ಸಾಧ್ಯವಾಗಿದೆ ಎಂದು ಹೇಳಿದರು.
ಕೀಳುಮಟ್ಟಕ್ಕಿಳಿದುಗೆದ್ದ ಪ್ರಧಾನಿ: ಎಚ್ಕೆ
ಗದಗ: ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಕೀಳುಮಟ್ಟಕ್ಕೆ ಇಳಿದು, ಕೊನೆಗೂ ಜಯ ಸಾಧಿಸಿದ್ದಾರೆ. ಜನಾದೇಶಕ್ಕೆ ತಲೆ ಬಾಗುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್
ಸೋತಿರಬಹುದು. ಆದರೆ ಪಕ್ಷದ ಬಲವನ್ನು ಸಾಬೀತುಪಡಿಸಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೆಲುವಿಗಾಗಿ ಜನರನ್ನು ಭಾವನಾತ್ಮಕವಾಗಿ ಹಿಡಿದುಕೊಂಡರು. ನೀಚ ಪದ ಪ್ರಯೋಗ ಹಾಗೂ ಪಾಕಿಸ್ತಾನದೊಂದಿಗೆ ಮಾತನಾಡಿದರು ಎನ್ನುವ ಕೀಳುಮಟ್ಟದ ಪ್ರಚಾರ ಮಾಡುವ ಮೂಲಕ ಜನರನ್ನು ಪ್ರಚೋದಿಸಿದರು ಎಂದು ಆರೋಪಿಸಿದರು.
ಈ ಚುನಾವಣೆ ಮೂಲಕ ಯಾರೇ ಸೊಕ್ಕು ತೋರಿಸಿದರೂ ಅವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎನ್ನುವ ಎಚ್ಚರಿಕೆಯನ್ನು ಜನ ನೀಡಿದ್ದಾರೆ. ಬಿಜೆಪಿ ಎಷ್ಟೇ ಪ್ರಚೋದಿಸಿದರೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಕಳೆದ ಚುನಾವಣೆಯ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾದ ಬಳಿಕ ಮೋದಿ ನಾಡಲ್ಲಿ ಕಾಂಗ್ರೆಸ್ ಶೇಕಡಾವಾರು ಮತ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.