300ಕ್ಕೂ ಹೆಚ್ಚು ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Team Udayavani, Jan 1, 2021, 7:01 PM IST
ಶಹಾಪುರ: ಗ್ರಾಪಂ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತ ಮತ್ತು ಜನಪರ ಯೋಜನೆ ಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿತಅಭ್ಯರ್ಥಿಗಳನ್ನು ಚುನಾಯಿಸಿದ್ದಾರೆ. ಹೀಗಾಗಿ ಮತದಾರರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಪಂಚಾಯತ್ ಚುನಾವಣೆಯಲ್ಲಿಅಭೂತಪೂರ್ವ ಗೆಲುವು ತಂದ ಕೊಟ್ಟಮತದಾರರಿಗೆ ಮೊದಲು ಅಭಿನಂದನೆವ್ಯಕ್ತಪಡಿಸುತ್ತೇನೆ ಎಂದ ಅವರು,ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಸರ್ಕಾರವಿದ್ದರೂ ಸಹ ನನ್ನ ಕ್ಷೇತ್ರದ ಜನಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳುಹಾಗೂ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕೈಗೊಂಡ ಹಲವಾರು ಜನಪರ ಯೋಜನೆಗಳುನೇರವಾಗಿ ಜನರಿಗೆ ತಲುಪಿದ್ದರಿಂದ300 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಪಂಸ್ಥಾನಗಳಲ್ಲಿ ಗೆಲುವು ಸಾಧಿ ಸಲು ಕಾರಣವಾಗಿದೆ. ಹಿಂದೆ ವಿಧಾನಸಭೆಚುನಾವಣೆಯಲ್ಲಿ 35 ಸಾವಿರಕ್ಕೂಅಧಿಕ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಮತದಾರರು ಕಳುಹಿಸಿದ್ದರು ಎಂದು ಇದೇ ವೇಳೆ ಅವರು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಮಾಜಿ ಜಿಪಂ ಸದಸ್ಯ ಬಸನಗೌಡ ಸುಬೇದಾರಉಪಸ್ಥಿತರಿದ್ದರು. 300 ಕಾಂಗ್ರೆಸ್, 100ಬಿಜೆಪಿ, 35 ಜೆಡಿಎಸ್, 40 ಸ್ವತಂತ್ರರುಆಯ್ಕೆ ತಾಲೂಕಿನಲ್ಲಿ 24 ಗ್ರಾಮಪಂಚಾಯತಿಗಳಿದ್ದು 475 ಸದಸ್ಯರನ್ನುಹೊಂದಿವೆ. ಅದರಲ್ಲಿ ಶಿರವಾಳಗ್ರಾಪಂ ಈಗಾಗಲೇ ಅವಿರೋಧವಾಗಿಆಯ್ಕೆಯಾಗಿದ್ದು, ಗೋಗಿ(ಪಿ)ಪಂಚಾಯತ್ ಕಾರಣಾಂತರದಿಂದ ಚುನಾವಣೆಯಿಂದ ದೂರ ಉಳಿಯಲ್ಪಟ್ಟಿತು.
ಹೀಗಾಗಿ 22 ಪಂಚಾಯತ್‌ಗಳಿಗೆ ಚುನಾವಣೆ ನಡೆದಿತ್ತು. ಈ ಮೊದಲು ವಿವಿಧ ಪಂಚಾಯತ್‌ಗಳಲ್ಲಿ 87 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ ಒಟ್ಟು394 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು ಅವಿರೋಧವಾಗಿ ಆಯ್ಕೆಯಾದ ಸದಸ್ಯರು ಒಳಗೊಂಡಂತೆ 300 ಕಾಂಗ್ರೆಸ್‌ಬೆಂಬಲಿತರು ಸದಸ್ಯರು, 100 ಬಿಜೆಪಿಬೆಂಬಲಿತ ಮತ್ತು 35 ಜೆಡಿಎಸ್ ಬೆಂಬಲಿತಸದಸ್ಯರು 40 ಪಕ್ಷೇತರರಾಗಿ ಗೆಲುವು ಸಾಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.