ನನ್ನ ಸಭೆ ಜನಪರ, ಇದರಲ್ಲಿ ರಾಜಕೀಯ ಮಾಡಬೇಡಿ: ಸಂಸದ ಡಾ. ಉಮೇಶ್ ಜಾಧವ್
Team Udayavani, Jul 16, 2022, 7:25 PM IST
ಸೈದಾಪುರ: ಲೋಕಸಭಾ ಸದಸ್ಯನಾಗಿ ನಾನು ನನ್ನ ಮತಕ್ಷೇತ್ರ ವ್ಯಾಪ್ತಿಯ ಗುರುಮಠಕಲ್ ಮತಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದ್ದು ರಾಜಕಾರಣದ ಉದ್ದೇಶಕ್ಕಲ್ಲ. ಅಧಿಕಾರಿಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಅಗತ್ಯವು ನನಗಿಲ್ಲ ಎಂದು ಸಂಸದ ಡಾ. ಉಮೇಶ್ ಜಾಧವ್ ವಶಾಸಕ ನಾಗನಗೌಡ ಕಂದಕೂರರ ಪತ್ರಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಯಾದಗಿರಿಯಲ್ಲಿ ನಾನು ಸಭೆ ನಡೆಸಿದ ಕಾರಣವನ್ನು ಮುಂದಿಟ್ಟುಕೊಂಡು, ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿಗೆ ಪರಿಶೀಲಿಸುವ ಕುರಿತು ಹೇಳಿಕೆ ನೀಡಿದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರು ಜನಪರ ಸಭೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು, ನನ್ನ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಲು ನನಗೆ ಅಧಿಕಾರವಿದೆ ಇದನ್ನು ಹಿರಿಯರಾದ ಕಂದಕೂರ ಅವರು ಅರಿತುಕೊಳ್ಳಬೇಕು.
ಈ ಹಿಂದೆ ನಾನು ಗುರುಮಠಕಲ್ ಗೆ ಬಂದಾಗಲೆಲ್ಲ ತಮ್ಮನ್ನು ಸಂಪರ್ಕಿಸಿದ್ದೇನೆ ಸಭೆಯ ಮಾಹಿತಿಯೂ ನೀಡಿದ್ದೇನೆ ಆದರೆ ಯಾದಗಿರಿಯಲ್ಲಿ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಮಳೆ ಬೆಳೆ ಕುರಿತು ಮಾಹಿತಿ ಪಡೆಯಲು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲಿಸಲು ತುರ್ತು ಸಭೆ ನಡೆಸಲಾಗಿದೆ. ಸಭೆಯ ಕುರಿತು ತಮಗೆ ಮಾಹಿತಿ ನೀಡಲು ನಾನು ಪ್ರಯತ್ನಿಸಿದ್ದೇನೆ ಆದರೆ ಅವರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಜಾಧವ ವಿವರಿಸಿದ್ದಾರೆ.
ಇದನ್ನೂ ಓದಿ: ಚರ್ಚ್ ಪಾದ್ರಿ, ಇಮಾಮ್ ಎಲ್ಲಿದ್ದಾರೆ?; ಭೂಮಿ ಪೂಜೆ ವೇಳೆ ಡಿಎಂಕೆ ಸಂಸದ
ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆ ಹಾಗೂ ಬಿತ್ತನೆಗೆ ಬೀಜ ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದ್ದು ಆರೋಗ್ಯ ಸಮಸ್ಯೆ, ಗುಳೆ ಸಮಸ್ಯೆ ಕುರಿತು ಚರ್ಚಿಸಲಾಗಿದೆ ಎಂದರು.
ಇದನ್ನು ಹೊರತು ಪಡಿಸಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಅಧಿಕಾರಿಗಳನ್ನು ಕರೆದು ರಾಜಕಾರಣ ಮಾಡುವಷ್ಟ ಸಣ್ಣತನ ನಾನು ಮಾಡುವುದಿಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದರು.
ನೀವು ನಿಮ್ಮ ಜವಾಬ್ದಾರಿ ಅರಿಯಿರಿ. ಒಬ್ಬ ಜನಪ್ರತಿನಿಧಿ ಜನಪರ ಸಮಸ್ಯೆ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳ ಸಭೆ ನಡೆಸಿದ್ದು ಅಕ್ಷಮ್ಯ ಎಂದು ಬಿಂಬಿಸುವುದರ ಜತೆಗೆ ಅಧಿಕಾರಿಗಳನ್ನು ಹೆದರಿಸಲು ಉದ್ದೇಶಿಸದಂತೆ ತಮ್ಮ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದ್ದೇನೆ ಎಂದಿದ್ದಾರೆ.
ನನ್ನ ಜತೆಗೆ ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಇದ್ದ ಕಾರಣ ತಾವು ಅಪಾರ್ಥ ಮಾಡಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಉಮೇಶ ಜಾಧವ ಅವರು ಬಾಬುರಾವ್ ಚಿಂಚನಸೂರು ಮಾಜಿ ಸಚಿವರು, ಹಲವು ಬಾರಿ ಶಾಸಕರಾದವರು. ನಿಗಮ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿ ನಾಯಕರಾಗಿದ್ದಾರೆ. ಅವರಿಗೆ ನನ್ನ ಮುಖಾಂತರ ಅಧಿಕಾರಿಗಳಿಗೆ ಹೇಳಿಸಿ ಕೆಲಸ ಮಾಡಿಸಿಕೊಳ್ಳುವ ದುಸ್ಥಿತಿ ಬಂದಿಲ್ಲ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರಿಂದ ತಾವು ಚಿಂತಿತರಾಗಬೇಕಿಲ್ಲ ಎಂದು ಟಾಂಗ್ ನೀಡಿದರು.
ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ಜನಪರ ಸಮಸ್ಯೆ ಚರ್ಚಿಸಿದರೆ ತಪ್ಪಾಗುವುದಿಲ್ಲ ಇದರಲ್ಲಿ ರಾಜಕೀಯ ಹುಡುಕಬೇಡಿ ಚುನಾವಣೆ ಬಂದಾಗ ರಾಜಕಾರಣ ಮಾಡೋಣ ಎಂದು ಕಿವಿಮಾತು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.