ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ವಿಸ್ತಾರ
Team Udayavani, Feb 23, 2020, 2:35 PM IST
ನಾರಾಯಣಪುರ: ತಾಲೂಕಿನಲ್ಲಿ ಬರುವ ಹಳ್ಳಿಗಳು ಮತ್ತು ತಾಂಡಾಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ಹೇಳಿದರು.
ಸಮೀಪದ ಹನುಮ ನಗರ ಐ.ಬಿ ತಾಂಡಾದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ತಾಂಡಾದಲ್ಲಿ 18 ಲಕ್ಷ ವೆಚ್ಚದಲ್ಲಿ ಹಾಗೂ 13 ಲಕ್ಷ ವೆಚ್ಚದಲ್ಲಿ ಎರಡು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚಿಸಿದ ಅವರು, ಬೂದಿಹಾಳ ಪೀರಾಪುರ ಏತ ನೀರಾವರಿ ಕಾಮಗಾರಿ ಮೊದಲು ವಿಜಯಪುರ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಆ ಯೋಜನೆ ನಮ್ಮ ತಾಲೂಕಿಗೂ ಅನುಕೂಲವಾಗುವಂತೆ ವಿಸ್ತರಿಸಲಾಗಿದೆ. ಇದರಿಂದ ನಮ್ಮ ಭಾಗದ ರೈತರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಎಚ್.ಸಿ. ಪಾಟೀಲ, ಜಿ.ಪಂ ಸದಸ್ಯ ನಾರಾಯಣ ನಾಯ್ಕ, ತಾ.ಪಂ ಸದಸ್ಯ ಮೋಹನ ಪಾಟೀಲ, ಬಸನಗೌಡ ಅಳ್ಳಿಕೋಟಿ, ಅಂಬ್ರಣ್ಣ ಹುಡೇದ, ಗದ್ದೆಪ್ಪ ಪೂಜಾರಿ, ದೇವು, ವೀರಸಂಗಪ್ಪ ಹಾವೇರಿ, ಶಾಮಸುಂದರ ಜೋಶಿ, ಮಲ್ಲು ನವಲಗುಡ್ಡ, ದೇವು ಗೋಪಾಳಿ, ಬಿ.ಎನ್. ಪೊಲೀಸ್ ಪಾಟೀಲ, ಶಾಂತಿಲಾಲ ನಾಯ್ಕ, ಲೋಕೋಪಯೋಗಿ ಇಲಾಖೆ ಕೆ. ಜಾವಿದ ಅಹ್ಮದ್, ಎಸ್.ಜಿ. ಪಾಟೀಲ. ಸುಭಾಶ್ಚಂದ್ರ, ಮಹ್ಮದ್ ಖಾಜಿ, ಬಾಲಯ್ಯ ಗುತ್ತೇದಾರ, ಬಾಲಗೌಡ ಪೊಲೀಸ್ ಪಾಟೀಲ, ಮಾಳಪ್ಪ ಪೂಜಾರಿ, ಬಾಲಚಂದ್ರ ಚವ್ಹಾಣ, ಚಂದ್ರಶೇಖರ ಚವ್ವಾಣ, ಕೃಷ್ಣಾ ರಾಠೊಡ, ಶ್ರೀನಿವಾಸ ರಾಠೊಡ, ಹಣಮಂತ ನಾಯಕ, ಶ್ರೀನಿವಾಸ, ರಾಜು ಸೇರಿದಂತೆ ತಾಂಡಾದ ಪ್ರಮುಖರು ಸೇರಿದಂತೆ ಸ್ಥಳೀಯರು ಇದ್ದರು. ಇದೇ ಸಂದರ್ಭದಲ್ಲಿ ಕೊಡೇಕಲ್ ಜಿ.ಪಂ ಕ್ಷೇತ್ರದ ಗ್ರಾಮಗಳಾದ ಹುಲ್ಲಿಕೆರಿ, ಅಮ್ಮಾಪುರ, ರಾಯನಗೋಳ, ರಾಯನಗೋಳ ಗೋಟ್, ಬೆಳ್ಳಿಗುಂಡ ತಾಂಡಾ, ಗಡ್ಡದ ತಾಂಡಾ, ಬಸರಿಗಿಡದ ತಾಂಡಾ, ಸಣ್ಣ ಚಾಪಿ, ಯರಕಿಹಾಳ ತಾಂಡಾ, ಕುರೇಕನಾಳ ತಾಂಡಾ, ಎಣ್ಣಿ ವಡಿಗೇರಿ ಐ.ಬಿ ತಾಂಡಾ, ಆರ್.ಕೆ. ನಗರ ತಾಂಡಾ, ಉಪ್ಪಲದಿನ್ನಿ, ಉಪ್ಪಲದಿನ್ನಿ ತಾಂಡಾಗಳಿಗೆ ಶಾಸಕರು ಭೇಟಿ ನೀಡಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.